ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕ್ರಿಸ್ ಮಸ್ ಹಬ್ಬದ ರಕ್ಷಣಾ ಶುಭವಾರ್ತೆ ಯಾತ್ರೆ

Get real time updates directly on you device, subscribe now.

ಕೊಪ್ಪಳ : ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ವತಿಯಿಂದ ಕ್ರಿಸ್ ಮಸ್ ಹಬ್ಬದ ನಿಮಿತ್ಯವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ರಕ್ಷಣಾ ಶುಭವಾರ್ತೆ ಯಾತ್ರೆ ಜರುಗಿತು.
     ಭಾಗ್ಯನಗರದ ಪಟ್ಟಣ ಪಂಚಾಯಿತಿ ಬಳಿಯಿಂದ ಪ್ರಾರಂಭವಾದ ರಕ್ಷಣಾ ಶುಭ ವಾರ್ತೆ ಯಾತ್ರೆ ಕೊಪ್ಪಳ ನಗರದ ಕಾರ್ಮಿಕ ವೃತ್ತದಿಂದ ಅಶೋಕ್ ವೃತ್ತ ಸುತ್ತಿಕೊಂಡು ಜವಾಹರ ರಸ್ತೆ ಮೂಲಕ ಗಡಿಯಾರ ಕಂಬದಿಂದ ಹಸನ್ ರಸ್ತೆ ಮುಖಾಂತರವಾಗಿ ಟಿಪ್ಪು ಸುಲ್ತಾನ್ ವೃತ್ತದ ಹತ್ತಿರದಿಂದ ಹಳೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯವರೆಗೆ ಸುಮಾರು ಏಳು ಕಿಲೋಮೀಟರ್ ಕ್ರಮಿಸಿ ಸಮಾರೋಪಗೊಂಡಿತು.
      ಭಾಗ್ಯನಗರ ಪಟ್ಟಣ ಪಂಚಾಯತಿ ಬಳಿ ಯಾತ್ರೆಯ ಪ್ರಾರಂಭದಲ್ಲಿ ಜಿಲ್ಲಾ ಫಾಸ್ಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ನವನಗರ ಚರ್ಚಿನ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ ಯೇಸು ಸ್ವಾಮಿ ಈ ಭೂಮಿಗೆ ಬಂದಿದ್ದು ಮಾನವರ ರಕ್ಷಣೆಗಾಗಿ ದೀನ ದಲಿತರ ಬಡವರ ಉದ್ಧಾರಕರಾಗಿ ಮಾನವ ರೂಪದಲ್ಲಿ ಬಂದರು. ಅವರು ಪ್ರೀತಿ ಸಮಾಧಾನ ಐಕ್ಯತೆ. ಭ್ರಾತೃತ್ವ ಮತ್ತು ಎಲ್ಲರಿಗೂ ಸಮಾನತೆಯನ್ನು ಒದಗಿಸುವುದಕ್ಕಾಗಿ. ಮನುಷ್ಯರು ಭೂಮಿಯ ಮೇಲೆ ತಮ್ಮ ಪಾಪದಿಂದ ಬಳಲುತ್ತಿರುವವರನ್ನು ರಕ್ಷಿಸಿ. ಸ್ವರ್ಗವನ್ನು ಕಲ್ಪಿಸುವುದಕ್ಕಾಗಿ ಮಾನವ ರೂಪ ತಾಳಿ ಜನಿಸಿದ್ದಾರೆ ಎಂದು ಹೇಳಿದರು.
       ನಗರದ ಅಶೋಕ್ ವೃತ್ತದಲ್ಲಿ ಫಾಸ್ಟರ್ ಅಸೋಸಿಯೇಷನ್ ಗಂಗಾವತಿ ತಾಲೂಕಾ ಅಧ್ಯಕ್ಷ ಹಾಗೂ ಎಂ.ಬಿ. ಓಲಿವ್ ಚರ್ಚಿನ ಫಾದರ್ ಡಿ.ಆರ್. ಪೀಟರ್ ಅವರು ಮಾತನಾಡಿ ಮಾನವರು ತಮ್ಮ ನಡತೆಯಿಂದ ಮಾಡಿರುವ ತಪ್ಪುಗಳನ್ನು ಇದ್ದುಕೊಂಡು ತಮ್ಮನ್ನು ತಾವು ದೇವರಿಗೆ ತಗ್ಗಿಸಿಕೊಂಡವರಾಗಿ ದೀನ ಹೃದಯ ದಿಂದ ಯೇಸು ಸ್ವಾಮಿಯ ಮುಂದೆ ಬರುವದಾದರೆ ಆತನು ಸ್ವರ್ಗ ರಾಜ್ಯಕ್ಕೆ ನಮ್ಮನ್ನು ಕರೆದುಕೊಳ್ಳುತ್ತಾನೆ ಎಂದು ಹೇಳಿದರು.
     ಅಶೋಕ್ ವೃತ್ತದಲ್ಲಿ ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಕ್ರಿಸ್ ಮಸ್  ಹಬ್ಬದ ಪ್ರಯುಕ್ತವಾಗಿ ಆಗಮಿಸಿದ ರಕ್ಷಣಾ ಶುಭ ವಾರ್ತೆ ಯಾತ್ರೆಯನ್ನು ಸ್ವಾಗತಿಸಿ ಶುಭಕೋರಿ ಬಿಳ್ಕೊಟ್ಟರು.
       ನಗರದ ಗಡಿಯಾರ ಕಂಬದ ವೃತ್ತದಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭಾದ ಗಂಗಾವತಿ ತಾಲೂಕಾ ಅಧ್ಯಕ್ಷ ಹಾಗೂ ಜೀಸಸ್ ಪ್ರೇಯರ್ ಫೆಲೋಶಿಪ್ ಚರ್ಚಿನ ಫಾದರ್ ಎಂ.ಡೇವಿಡ್ ಅವರು ಮಾತನಾಡಿ ಏಸು ಸ್ವಾಮಿ ಅವರ ಜನನವನ್ನು ಯಶಾಯ ಪ್ರವಾದಿಯ ಮುಖಾಂತರ ಯೇಸು ಕ್ರಿಸ್ತನ ಜನನವನ್ನು ತಂದೆಯಾದ ದೇವರು ಏಸು ಸ್ವಾಮಿಯವರು ಹುಟ್ಟುವುದಕ್ಕಿಂತ ಮೊದಲೇ ಕ್ರಿ. ಪೂ. 720 ರಲ್ಲಿ ಅವರ ಜನನ ಒಬ್ಬ ಕನಿಕೆಯಲ್ಲಿ ಆಗುವದೆಂದು ಪ್ರವಾದಿ ಮುಖಾಂತರ ಹೇಳಿದ ಹಾಗೆ ಮರಿಯಾಳಂಬ ಕನಿಕೆಯಲ್ಲಿ ಯೇಸು ಸ್ವಾಮಿಯವರ ಜನನವಾಯಿತು. ಆತನು ಪರಿಶುದ್ಧನಾಗಿ ಈ ಭೂಮಿಗೆ ಬಂದನು.ಆತನು ನರ ಮನುಷ್ಯರನ್ನು ಪರಿಶುದ್ಧರನ್ನಾಗಿ ಮಾಡುವುದಕ್ಕಾಗಿ ಈ ಭೂಮಿಗೆ ಜನಿಸಿದನು ಎಂದು ಹೇಳಿದರು.
     ಅಖಿಲ ಭಾರತ ಕ್ರೈಸ್ತ ಮಹಾಸಭಾದ ಕೊಪ್ಪಳ ತಾಲೂಕಾ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ ಮಾತನಾಡಿ ಏಸು ಸ್ವಾಮಿಯವರು ಸಮಾಧಾನ ಪಡಿಸುವವರು ಧನ್ಯರು ಅವರು ದೇವರ ಮಕ್ಕಳೆಂದು ಅನಿಸಿಕೊಳ್ಳುವರು. ಕರುಣೆವುಳ್ಳವರು ಧನ್ಯರು ಅವರು ಕರುಣೆಯನ್ನು ಹೊಂದುವರು ಎಂದು ಯೇಸು ಸ್ವಾಮಿಯವರ ಬೆಟ್ಟದಲ್ಲಿ ಮಾಡಿದ ಪ್ರವಚನವನ್ನು ಈ ಸಂದರ್ಭದಲ್ಲಿ ವಿವರಿಸಿದರು.
     ಅಖಿಲ ಭಾರತ ಕ್ರೈಸ್ತ ಮಹಾಸಭಾದ ಕೊಪ್ಪಳ ತಾಲೂಕಾ ಅಧ್ಯಕ್ಷ ಪ್ರಕಾಶ್ ದೇವರಮನಿ. ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ಗೊರೆಬಾಳ್ ಕ್ಯಾಂಪಿನ ಎಂ.ಬಿ. ಚರ್ಚಿನ ಫಾದರ್ ಡಿ. ರಾಜು. ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ.ರಿ (ಎಐಟಿಯುಸಿ ಸಂಯೋಜಿತ) ದ ಅಧ್ಯಕ್ಷ ಮೌಲಾ ಸಾಬ್ ಕಪಾಲಿ. ಕುಕನೂರು ಚರ್ಚಿನ ಫಾದರ್ ಅಬ್ರಹಾಂ. ಕ್ರಿಸ್ತನ ಚರ್ಚಿನ ಫಾದರ್ ಪ್ರಕಾಶ್ ಹಾಗೂ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!