ಕೊಪ್ಪಳ ಕ್ರಿಕೆಟ್ ಕ್ಲಬ್ ತಂಡಕ್ಕೆ ಭರ್ಜರಿ ಜಯ
ಕೊಪ್ಪಳ
ಹುಬ್ಬಳ್ಳಿ ದುರ್ಗಾ ಕ್ರಿಕೆಟ್ ಕ್ಲಬ್ ವತಿಯಿಂದ ಹುಬ್ಬಳಿಯ ಬಿಡಿಕೆ ಮೈದಾನದಲ್ಲಿ ಐದು ದಿನಗಳ ಕಾಲ 12ವರ್ಷದೊಳಗಿನವರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಪ್ಪಳ ಕ್ರಿಕೆಟ್ ಕ್ಲಬ್ ಜಯಬೇರಿ ಸಾಧಿಸಿದೆ.
ಹೌದು ಡಿ.12ರಿಂದ15ರವರೆಗೆ ನಾಲ್ಕು ದಿನಗಳ ಕಾಲ, ಹುಬ್ಬಳ್ಳಿಯ ದುರ್ಗಾ ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಿದ 12ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಪ್ಪಳ ಕ್ರಿಕೆಟ್ ಕ್ಲಬ್ ತಂಡ ಫೈನಲ್ ತಲುಪಿ ಜಯಭೇರಿಯಾಗಿದೆ.
ಪಂದ್ಯಾವಳಿಯಲ್ಲಿ ಒಟ್ಟು ಆರು ಜಿಲ್ಲೆಗಳು ಬಾಗವಹಿಸಿದ್ದವು. ಧಾರವಾಡ, ಬೆಳಗಾವಿ, ಕೊಪ್ಪಳ, ಹಾವೇರಿ, ಗದಗ, ಹುಬ್ಬಳ್ಳಿಯಿಂದ ಒಟ್ಟು ಎಂಟು ತಂಡಗಳು ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಪಂದ್ಯಾವಳಿಯಲ್ಲಿ ಕೊಪ್ಪಳ ಕ್ರಿಕೆಟ್ ಕ್ಲಬ್ ತಂಡವು ಸತತ ಸೋಲಿಲ್ಲದೆ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್ ಪ್ರವೇಶ ಮಾಡಿತ್ತು. ಫೈನಲ್ ಪಂದ್ಯವು ಹುಬ್ಬಳ್ಳಿ ದುರ್ಗಾ ಕ್ರಿಕೆಟ್ ಕ್ಲಬ್ ಹಾಗೂ ಕೊಪ್ಪಳ ಕ್ರಿಕೆಟ್ ಕ್ಲಬ್ ನಡುವೆ ಜರುಗಿತು. ಒಟ್ಟು 25 ಓವರ್ ಗಳಲ್ಲಿ ಶ್ರೀ ದುರ್ಗಾ ಕ್ರಿಕೆಟ್ ಕ್ಲಬ್ ತಂಡವು 22.3 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು 50ರನ್ನಗಳನ್ನು ಗಳಿಸಿತ್ತು. ನಂತರ ಬ್ಯಾಟಿಂಗ್ ಮಾಡಿದ ಕೊಪ್ಪಳ ಕ್ರಿಕೆಟ್ ಕ್ಲಬ್ 10 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು53ರನ್ ಗಳನ್ನು ಗಳಿಸುವ ಮೂಲಕ ಜಯಭೇರಿಯಾಗಿ ಕಪ್ ತನ್ನದಾಗಿಸಿಕೊಂಡಿದೆ, ತಂಡದಲ್ಲಿ ಸಮೃದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೆ ಮಹ್ಮದ್ ಹಮ್ಜಾ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ. ತಂಡದ ನಾಯಕತ್ವವನ್ನು ತೇಜಸ್ ವಹಸಿಕೊಂಡಿದ್ದರು
ತಂಡದ ಗೆಲುವಿಗೆ ಜಿಲ್ಲಾ ಪಂಚಾಯಿತ್ ಸಿಇಓ ರಾಹುಲ್ ರತ್ನಂ ಪಾಂಡೆಯೇ, ಕ್ರೀಡಾ ಇಲಾಖೆ ಅಧಿಕಾರಿ ವಿಠಲ ಜಾಬಗೌಡರ್ ಕೊಪ್ಪಳ ಕ್ರಿಕೆಟ್ ಕ್ಲಬ್ ಕೋಚ್ ಫೈರೋಜ್ ಅಲಿ ಅಭಿನಂದನೆ ತಿಳಿಸಿದ್ದಾರೆ
Comments are closed.