ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸಿ-ಕೆ.ಎಂ.ಸೈಯದ್
ಕೊಪ್ಪಳ : ಸಿನೆಮಾ-ಟಿ.ವಿ ಹಾವಳಿಯಿಂದ ಇಂದು ರಂಗಭೂಮಿ ಕಲೆಯು ನಶಿಸುತ್ತಿದ್ದು ಉತ್ತರ ಕರ್ನಾಟಕದ ಗಂಡು ಕಲೆ ಎಂದು ಹೆಸರಾಗಿರುವ ರಂಗಭೂಮಿ ಕಲೆ ಪ್ರದರ್ಶನದಿಂದ ಜಾತಿ-ಭೇದ ಭಾವವಿಲ್ಲದೇ ಗ್ರಾಮೀಣ ಭಾಗದಲ್ಲಿ ಜನತೆಯಲ್ಲಿ ಭಾವ್ಯೆಕ್ಯತೆಯನ್ನು ಮೂಡಿಸುತ್ತದೆ ಇಂತಹ ರಂಗಭೂಮಿ ಕಲೆಯನ್ನು ಪ್ರೋತ್ಸಾಹಿಸಿ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಉದ್ಯಮಿ ಕೆ.ಎಂ.ಸೈಯದ್ ಹೇಳಿದರು.
ಅವರು ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಶ್ರೀಮಾರುತೇಶ್ವರ ಕಾರ್ತಿಕೋತ್ಸವ ಅಂಗವಾಗಿ ಸತಿ ಸಂಸಾರದ ಜ್ಯೋತಿ ಎಂಬ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂದು ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕಲೆಯನ್ನು ಜನತೆ ಹೆಚ್ಚು ಇಷ್ಟ ಪಡುತ್ತಾರೆ ರಂಗಭೂಮಿಯಲ್ಲಿ ಕಲಾವಿದರು ಪಾತ್ರಗಳನ್ನು ನೈಜವಾಗಿ ಅಭಿನಯಿಸಿ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ, ಇಂತಹ ಕಲೆಯನ್ನು ನಾವೆಲ್ಲ ಉಳಿಸಿ ಬೆಳೆಸಿದಾಗ ಅದು ಎಂದೆಂದಿಗೂ ಜೀವಂತವಾಗಿರುತ್ತದೆ,ಅದರಲ್ಲಿ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಕಾರ್ತಿಕೋತ್ಸವ, ಹಬ್ಬ-ಉತ್ಸವ-ಜಾತ್ರೆಗಳಿಗಾಗಿ ನಾಟಕಗಳನ್ನು ತಿಂಗಳು ಮೊದಲೇ ಉತ್ತಮವಾಗಿ ನಾಟಕ ಸಿದ್ಧಪಡಿಸಿ ನಂತರ ಪ್ರದರ್ಶನ ಮಾಡಿ ಜನತೆ ಸಂತಸ ಪಡುತ್ತಾರೆ ಇಂಥಹ ರಂಗಭೂಮಿಯ ಗಂಡು ಕಲೆಯನ್ನು ಉಳಿಸಿ ಬೆಳೆಸೋಣ ಅಂದಾಗ ಇಂತಹ ಕಲೆಯನ್ನು ನಾವೆಲ್ಲ ಉಳಿಸಿ ಬೆಳೆಸಿದಾಗ ಅದು ಎಂದೆಂದಿಗೂ ಜೀವಂತವಾಗಿರುತ್ತದೆ ಈ ಕಲೆ ಮುಂದಿನ ಪೀಳಿಗೆಗೆ ಅದು ಕೊಡುಗೆಯಾಗಿರುತ್ತದೆ ಎಂದರು
ಈ ಸಂದರ್ಭದಲ್ಲಿ ಹಿರಿಯರಾದ ಕನಕರಾಯ ಬುಳ್ಳಪುರ, ನಾಗರಾಜ ಪಟವಾರಿ, ವಲೀಸಾಬ ಪೋಲೀಸ ಪಾಟೀಲ್, ಗಿರೀಶ ಹಿರೇಮಠ ಶಹಪೂರ, ಸಿದ್ರಾಮಪ್ಪ ಕೆರೆಹಳ್ಳಿ,ಹುಲುಗಪ್ಪ ಗಡಾದ, ಗ್ರಾಮ ಪಂಚಾಯತ್‌ಸದಸ್ಯರು, ಗ್ರಾಮದ ಗುರು-ಹಿರಿಯರು ಉಪಸ್ಥಿತರಿದ್ದರು.
Comments are closed.