ನಿವೇಶನ ಮಾಲೀಕತ್ವದ ಕುರಿತು ಖಾತ್ರಿಪಡಿಸಿಕೊಳ್ಳಿ: ಜಿಲ್ಲಾಧಿಕಾರಿ ನಲಿನ್ ಅತುಲ್
: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಕಟ್ಟಡ ನಿರ್ಮಾಣ, ಕ್ರೀಡಾಂಗಣ ನಿರ್ಮಾಣ ಸೇರಿದಂತೆ ವಿವಿಧ ಉದ್ದೇಶಗಳಿಗೆ ಖರೀದಿಸಲಾದ ಅಥವಾ ಸ್ವಾಧೀನ ಪಡಿಸಿಕೊಳ್ಳಲಾದ ಖಾಸಗಿ ಜಮೀನು ಅಥವಾ ನಿವೇಶನಗಳ ಮಾಲೀಕತ್ವವನ್ನು ಸಂಬAಧಿಸಿದ ಇಲಾಖೆಗಳು ಪಹಣಿ ಮುಖಾಂತರ ಖಾತ್ರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಖಾಸಗಿ ಜಮೀನು ಅಥವಾ ನಿವೇಶನವನ್ನು ಖರೀದಿಸಿದ ಮೇಲೆ ಕೂಡಲೇ ಅದರ ಮಾಲೀಕತ್ವವನ್ನು ಬದಲಾಯಿಸಿ ಸಂಬAಧಿಸಿದ ಇಲಾಖೆ ಹೆಸರಲ್ಲಿ ಪಹಣಿ ಪಡೆಯಬೇಕು. ಇಲ್ಲದಿದ್ದಲ್ಲಿ ಖಾಸಗಿ ವ್ಯಕ್ತಿಗಳು ಹಾಗೂ ಸರ್ಕಾರದ ನಡುವೆ ಅನಗತ್ಯ ಗೊಂದಲ ಉಂಟಾಗುವುದಲ್ಲದೆ, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತದೆ. ಆದ್ದರಿಂದ ಇನ್ನುಮುಂದೆ ಯಾವುದೇ ಇಲಾಖೆಯಿಂದ ಖರೀದಿಸಿದ ಅಥವಾ ಸ್ವಾಧೀನ ಪಡಿಸಿಕೊಂಡ ಖಾಸಗಿ ಜಮೀನು ಅಥವಾ ನಿವೇಶನವನ್ನು ವಿಳಂಬವಿಲ್ಲದೆ ಮಾಲೀಕತ್ವ ಬದಲಾವಣೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಅಗತ್ಯವಿರುವ ಪದವಿ ಪೂರ್ವ(ಪಿಯು) ಕಾಲೇಜುಗಳ ಪಟ್ಟಿಯನ್ನು ಹೋಬಳಿವಾರು ಪಟ್ಟಿ ಮಾಡಿ ಜಿಲ್ಲಾ ಪಂಚಾಯತಿಯ ಸಿಇಒ ಅವರಿಗೆ ತಿಳಿಸಬೇಕು. ಪಿಯು ಕಾಲೇಜು ಆರಂಭಿಸುವ ಗ್ರಾಮ ಅಥವಾ ನಗರದಲ್ಲಿ ಜನಸಂಖ್ಯೆ ಆಧಾರದ ಮೇಲೆ ಕಾಲೇಜು ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಒಟ್ಟು ಬೇಡಿಕೆಯ ಪಟ್ಟಿಯನ್ನು ಸಲ್ಲಿಸಿದಲ್ಲಿ ನಿವೇಶನ ಖರೀದಿ, ಕಟ್ಟಡ ಕಾಮಗಾರಿ ಆರಂಭಕ್ಕೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಬೇಡಿಕೆಯನುಸಾರ ಪಟ್ಟಿ ಸಿದ್ದಪಡಿಸಿ ಎಂದು ಪಿಯು ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಅದರಂತೆ ಜಿಲ್ಲೆಯ ಎಲ್ಲ ಇಲಾಖೆಗಳು ತಮಗೆ ಅಗತ್ಯವಿರುವ ನಿವೇಶನ, ಕಟ್ಟಡ ಕಾಮಗಾರಿ ಮುಂತಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಯಾವುದೇ ಸಮಸ್ಯೆ ಉಂಟಾದಲ್ಲಿ ಸಂಬAಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಪಡಿಸಿಕೊಂಡು ಕಾಮಗಾರಿ ಆರಂಭಿಸಬೇಕು. ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೇ ಕಾಮಗಾರಿಗಳಲ್ಲಿ ಭೂಸ್ವಾಧೀನಕ್ಕೊಳಗಾದ ರೈತರಿಗೆ ತೊಂದರೆಯಾಗದAತೆ ಅವರಿಗೆ ಪರಿಹಾರ ಲಭ್ಯವಾಗಿರುವ ಕುರಿತು ಖಚಿತಪಡಿಸಿಕೊಂಡು, ಕಾಮಗಾರಿಗಳಿಂದ ಸಾರ್ವಜನಿಕರಿಗೆ ಹಾಗೂ ಸರ್ಕಾರದ ಅಬಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗದAತೆ ಸಂಬAಧಿಸಿದ ಇಲಾಖಾ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಕಚೇರಿ ಕಾರ್ಯವನ್ನು ಇ-ಕಚೇರಿಯಲ್ಲಿ ಖಡತ ನಿರ್ವಹಣೆ ಮಾಡುವ ಮೂಲಕ ಅನುಷ್ಠಾನಗೊಳಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದಾಗ್ಯೂ ಅನೇಕ ಇಲಾಖೆಗಳು ಇನ್ನೂ ಮ್ಯಾನುವಲ್ ರೂಪದಲ್ಲಿ ಖಡತಗಳನ್ನು ಸಹಿಗೆ ಕಳುಹಿಸುತ್ತಿವೆ. ಇನ್ನುಮುಂದೆ ಇ-ಕಚೇರಿಗೆ ಒಳಪಡುವ ಎಲ್ಲ ಇಲಾಖೆಗಳು ಕಡ್ಡಾಯವಾಗಿ ಖಡತಗಳನ್ನು ಇ-ಕಚೇರಿ ಮೂಲಕವೇ ವರ್ಗಾವಣೆ ಮಾಡಬೇಕು. ಈ ಬಗ್ಗೆ ಇಲಾಖಾ ಮುಖ್ಯಸ್ಥರು ವಿಷಯ ನಿರ್ವಾಹಕರಿಗೆ ಸೂಕ್ತ ತರಬೇತಿಯನ್ನು ಒದಗಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಸಹಾಯಕ ಆಯುಕ್ತರಾದ ಕ್ಯಾ.ಮಹೇಶ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಕಾವ್ಯಾರಾಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ, ಭೂಸ್ವಾಧೀನ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.