ರಾಘವೇಂದ್ರ ಸ್ವಾಮಿ ಮಠದಲ್ಲಿ ಡಿ. 15ರಂದು ಲಕ್ಷ ತುಳಸಿ ಅರ್ಚನಾ ಕಾರ್ಯಕ್ರಮ
ಕೊಪ್ಪಳ: ಇಲ್ಲಿನ ಮತ್ತು ರಘುವೀರತೀರ್ಥರ ಆರಾಧನಾ ಮಹೋತ್ಸವ ಜರುಗಲಿದೆ.
ಅಂದು ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ, 5.30ಕ್ಕೆ ಲಕ್ಷ ತುಳಸಿ ಅರ್ಚನೆ, ವಿಷ್ಣುಸಹಸ್ರನಾಮ ಪಾರಾಯಣ, 6.30ಕ್ಕೆ ಮಹಿಳೆಯರಿಂದ ಶ್ರೀನಿವಾಸ ಕಲ್ಯಾಣ ಪಾರಾಯಣ, ಗ್ರಾಮ ಪ್ರದಕ್ಷಣೆ, 9 ಗಂಟೆಗೆ ನೈವೇದ್ಯ, ಹಸ್ತಫದಕ, ಅಲಂಕಾರ ಜರುಗಲಿದೆ.
ಸಂಜೆ 6 ಗಂಟೆಗೆ ಪಂಡಿತ್ ಅಂಬರೀಷಾಚಾರ್ ಬೆಂಗಳೂರು ಅವರಿಂದ ಪ್ರವಚನ, ರಾ. 7.30ಕ್ಕೆ ರಾಯಚೂರಿನ ವರನೇಂದ್ರ ಗಂಗಾಖೇಡ್ಕರ್ ಅವರಿಂದ ಭಕ್ತಿ ಸಂಗೀತ ಮತ್ತು 9 ಗಂಟೆಗೆ ದೀಪೋತ್ಸವ ನಂತರ ಫಲಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಠದ ಪ್ರಕಟಣೆ ತಿಳಿಸಿದೆ.
Comments are closed.