ನಿರಂತರ ಅಭ್ಯಾಸ ಮತ್ತು ಪ್ರಯತ್ನದಿಂದ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ: ಅಲ್ಲಮಪ್ರಭು ಬೆಟ್ಟದೂರು

Get real time updates directly on you device, subscribe now.

ನಿರಂತರ ಅಭ್ಯಾಸ ಮತ್ತು ಪ್ರಯತ್ನ ಮಾಡುವುದರಿಂದ ಕ್ರೀಡೆಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕೊಪ್ಪಳದ ಹಿರಿಯ ಬಂಡಾಯ ಸಾಹಿತಿ ಪ್ರೊ. ಅಲ್ಲಮಪ್ರಭು ಬೆಟ್ಟದೂರ ಅವರು ಹೇಳಿದರು.
ಕೊಪ್ಪಳದಲ್ಲಿ ಶನಿವಾರದಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ ಇವರ ಸಹಯೋಗದಲ್ಲಿ 2023-24ನೇ ಸಾಲಿನ ಅಂತರ್ ಕಾಲೇಜು ಗುಡ್ಡಗಾಡು 10 ಕಿ. ಮೀ ಓಟದ ಸ್ಪರ್ಧೆ ಹಾಗೂ ವಿಶ್ವವಿದ್ಯಾನಿಲಯದ ತಂಡದ ಆಯ್ಕೆ ಸಾಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕ್ರೀಡೆಗಳನ್ನು ಆಡುವುದರಿಂದ ದೇಹದ ಎಲ್ಲ ಅಂಗಾAಗಳಿಗೆ ವ್ಯಾಯಾಮ ಆಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಹೊರತು ಬಹುಮಾನ ಮುಖ್ಯ ಅಲ್ಲ ಎಂದು ಹೇಳಿದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಗಣಪತಿ ಲಮಾಣಿಯವರು ಮಾತನಾಡಿ, ಮಹಿಳೆಯರು ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುವುದು ಬಹಳ ಸಂತೋಷದಾಯಕವಾದದ್ದು. ಭಾರತದಲ್ಲಿ ಅನೇಕ ಕ್ರೀಡೆಗಳು ಇವೆ. ಅವುಗಳಲ್ಲೂ ಮಹಿಳೆಯರು ಪಾಲ್ಗೊಂಡು ಸಾಧನೆ ಮಾಡಬೇಕು. ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಉತ್ತಮವಾದ ವ್ಯಕ್ತಿತ್ವವನ್ನು ಬೆಳಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಚಾರ್ಯರಾದ ಬಿ. ಜಿ. ಕರಿಗಾರ, ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ವಿಟೋಬ, ನಾಗರತ್ನ, ಸುಮಿತ್ರಾ ಮತ್ತು ವಿನೋದ ಹಾಗೂ ಇತರರು ಇದ್ದರು. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಅನಿಸಿಕೆಗಳನ್ನು ಹಂಚಿಕೊAಡರು..
ಬಹುಮಾನ ವಿತರಣೆ:
ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರಥಮ ಬಹುಮಾನವನ್ನು ಬಳ್ಳಾರಿ ಅಲ್ಲಮ ಸುಮಂಗಲ ಮಹಿಳಾ ಕಾಲೇಜಿನ ಕಾವ್ಯ, ಎರಡನೇ ಬಹುಮಾನವನ್ನು ಹುಬ್ಬಳ್ಳಿ ಮಹಿಳಾ ಕಾಲೇಜಿನ ತನಿಷ್ ಮತ್ತು ತೃತೀಯ ಬಹುಮಾನವನ್ನು ರಾಯಚೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಭೂಮಿಕಾ ಅವರು ಪಡೆದುಕೊಂಡರು.
ಈ ಕ್ರೀಡಾಕೂಟದಲ್ಲಿ ಧಾರವಾಡದ ಜಗಳೂರು ಮಹಿಳಾ ಕಾಲೇಜು  ಆಟದ ಪ್ರಥಮ ಚಾಂಪಿಯನ್ ಆಗಿ ಮತ್ತು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಆಟದ ದ್ವಿತೀಯ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಡಾ. ಹುಲಿಗೆಮ್ಮ ಸ್ವಾಗತಿಸಿದರು. ಡಾ. ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನರಸಿಂಹ ವಂದಿಸಿದರು. ಪವಿತ್ರ ಪ್ರಾರ್ಥನೆ ಗೀತೆ ಹಾಡಿದರು.

Get real time updates directly on you device, subscribe now.

Comments are closed.

error: Content is protected !!