ಗಂಗಾವತಿ ನಗರದಲ್ಲಿ ಯಶಸ್ವಿಯಾಗಿ ನಡೆದ ಚುಟುಕು ಕವಿಗೋಷ್ಠಿ

Get real time updates directly on you device, subscribe now.

 

ಗಂಗಾವತಿ: ಗಂಗಾವತಿ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿ ಮುಂಭಾಗದ ಆವರಣದಲ್ಲಿ ಶನಿವಾರ ಚುಟುಕು ಸಾಹಿತ್ಯ ಪರಿ?ತ್ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನಾರಾಯಣ ಗುರು ಶಕ್ತಿಪೀಠದ ಗುರುಗಳಾದ ಪ್ರಣವಾನಂದ ಸ್ವಾಮಿಜಿ ಹಾಗೂ ಚಿತ್ರದುರ್ಗದ ಬಸವನಾಗಿ ಸ್ವಾಮಿಗಳು ಸಸಿಗೆ ನೀರು ಹಾಕುವ ಮೂಲಕ ನೆರೆವೆರಿಸಿದರು.
ಈ ಸಂಧರ್ಭದಲ್ಲಿ ಪರಿ?ತ್‌ನ ಅದ್ಯಕ್ಷರಾದ ಅಶೋಕ ಗುಡಿಕೋಟಿಯವರು ಪರಿ?ತ್ ನಡೆದುಬಂದ ಹಾದಿ ಮತ್ತು ಮುಂದಿನ ಸಾಹಿತ್ಯಿಕ ಚಟುವಟಿಕೆಗಳ ಬಗ್ಗೆ ಯುವ ಬರಹಗಾರರ ಸಂಗ್ರಹ ಪುಸ್ತಕ ಪ್ರಕಟಿಸುವದಾಗಿ ಪ್ರಾಸ್ತಾವಿಕವಾಗಿ ನುಡಿದರು.
ವೇದಿಕೆಯ ಮೇಲೆ ಮುಖ್ಯ ಅತಿಥಿಗಲಾಗಿ ಹಿರಿಯ ಸಾಹಿತಿಗಳಾದ ಎಸ್.ವ್ಹಿ ಪಾಟಿಲ್ ಗುಂಡೂರು, ಹಾಸ್ಯ ಭಾ?ಣಕಾರ ಬಿ. ಪ್ರಣೇಶ ಗಂಗಾವತಿ, ಅರಳಳ್ಳಿ ತಾತನವರು, ಶರಣಪ್ಪ ಮೆಟ್ರಿ. ನಾಗಭೂ?ಣ ಅರಳಿ, ಲಿಂಗಾರೆಡ್ಡಿ ಆಲೂರು, ಡಾ|| ಶಿವಕುಮಾರ ಮಾಲಿಪಾಟಿಲ್, ಬಸವಸಮಿತಿ ಅದ್ಯಕ್ಷರಾದ ಮಹಾಲಿಂಗಪ್ಪ, ಎ.ಕೆ ಮಹೇಶಕುಮಾರ್ ಹಾಗೂ ಪರ?ತ್ತಿನ ಪಧಾದಿಕಾರಿಗಳೆಲ್ಲರೂ ಸೇರಿ ರಾಷ್ಟ್ರ ಪ್ರಶಸ್ತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಸೇಖರ್ ಗೌಡರು ಮತ್ತು ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕುಮಾರಿ ನೇಯಶ್ರಿ ದರೋಜಿಯವರಿಗೆ ಸನ್ಮಾನಿಸಿ ಗೌರವಿಸಿದರು.
ತರುವಾಯ ಕವಿಗೋಷ್ಠಿ ಪ್ರಾರಂಭವಾಗಿ ಸುಮಾರು ೨೦ ಕವಿ ಕವಿಯತ್ರಿಯರು ಕವನ ವಾಚಿಸಿ ಮೆಚ್ಚುಗೆ ಪಡೆದರೆ, ಬಿ. ಪ್ರಾಣೇಶ, ಎಸ್.ವ್ಹಿ ಪಾಟಿಲ್ ಗುಂಡುರ್, ರೇವಣಸಿದ್ದಯ್ಯ ತಾತ ಅರಳಳ್ಳಿಯವರು ಹಾಸ್ಯ ಕವಿತೆ ಮತ್ತು ಪ್ರಸಂಗದ ಮುಖಾಂತರ ಸಭಿಕರನ್ನು ನಗೆಗಡಲಲ್ಲಿ ಮುಳಿಗಿಸಿದರು.
ಗೋಷ್ಠಿಯ ಅಧ್ಯಕ್ಷೀಯ ಭಾ?ಣ ಡಾ. ಶರಣಬಸಪ್ಪ ಕೋಲ್ಕಾರ್‌ರವರು ಅಚ್ಚುಕಟ್ಟಾಗಿ ಮಾಡಿ, ಕವಿ, ಕವಿಯಿತ್ರಿಯರು ವಾಚಿಸಿದ ಒಂದೊಂದು ಕವಿತೆಗಳ ಬಗ್ಗೆ ಸ್ವವಿಸ್ತಾರವಾಗಿ ತಿಳಿಸಿ, ಕಾವ್ಯ ಅಂದರೆ ಹೇಗಿರಬೇಕು, ಕಾವ್ಯದ ಲಕ್ಷಣ, ಕಾವ್ಯದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದುದ್ದಕ್ಕೂ ಮುದ್ದು ಮಾತುಗಳೊಂದಿಗೆ ಮಂಜುನಾಥ ತಾವರಿಗಿ ನಿರೂಪಿಸಿದ ಈ ಕಾರ್ಯಕ್ರಮದ ಸ್ವಾಗತವನ್ನು ಸುರೇಶ ಕಲಾಪ್ರಿಯಾ ಮಾಡಿದರೆ, ಬಸುವರಾಜ ಬೋವಿ ವಂದನಾರ್ಪಣೆ ಸಲ್ಲಿಸಿದರು. ಅಲ್ಲದೇ ಕಾರ್ಯಕ್ರಮದಲ್ಲಿ ಸಂಗಿತ ಸೇವೆಯನ್ನು ರಿಜ್ವಾನ್ ಮದ್ದಾಬಳ್ಳಿ ತಂಡದವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಪರ?ತ್‌ನ ರಾಧಾ ಉಮೇಶ, ಈರಮ್ಮ ಯಂಕೋಬ, ಅಮರೇಶ್ ಹಿರೆಮಠ್, ಕ್ರಿ? ಆಸೀಸ್, ನರಸಿಂಹ ದರೋಜಿ, ರಾಜೇಶ್ವರಿ ಮಂಜುನಾಥ, ರಮೇಶ ಸೇರಿದಂತೆ ಮತ್ತಿತರ ಕಲಾವಿದರು ಉಪಸ್ಥಿತರಿದ್ದರು.

 

Get real time updates directly on you device, subscribe now.

Comments are closed.

error: Content is protected !!