ಗರಡಿ ಮನೆಗಳ ಪುನಶ್ಚೇತನಕ್ಕೆ ಸಿದ್ದತೆ
ಕೊಪ್ಪಳ : ಆದರ್ಶ ಕುಸ್ತಿ ಕ್ರೀಡಾಪಟುಗಳ ಸಂಘದ ಗೌರವಾಧ್ಯಕ್ಷ ಎಸ್.ಎ.ಗಫಾರ್. ಅಧ್ಯಕ್ಷ ಸಾಧಿಕ್ ಅಲಿ ದಫೇದಾರ್ ಪೈಲ್ವಾನ್. ಉಪಾಧ್ಯಕ್ಷ ಬಸವರಾಜ್ ಗಾಳಿ ಪೈಲ್ವಾನ್. ಭೀಮಸಿ ಗಾಳಿ ಪೈಲ್ವಾನರೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬ್ ಗೌಡರ ಮಿಂಚಿನ ಸಂಚಾರ ನಡೆಸಿ ನಗರದ ಗರಡಿ ಮನೆಗಳ ವಾಸ್ತವ ಸ್ಥಿತಿ ಸ್ವತಃ ವೀಕ್ಷಿಸಿ. ಸ್ಥಳೀಯರಿಂದ ಗರಡಿ ಮನೆಗಳಿಗೆ ಪುನಶ್ಚೇತನಕ್ಕೆ ಬೇಕಾದ ಬೇಡಿಕೆಗಳನ್ನು ಆಲಿಸಿದರು.
ಮೊದಲು ನಗರದ ತೆಗ್ಗಿನಕೇರಾ ಓಣಿಗೆ ಭೇಟಿ ನೀಡಿ ಪರಿಶೀಲಿಸಿ ಗರಡಿ ಮನೆಗೆ ಏನೇನು ಬೇಕು ಎಂದು ಸಹಾಯಕ ನಿರ್ದೇಶಕ ವಿಠ್ಠಲ್ ಜಾಬ್ ಗೌಡರ ತೆಗ್ಗಿನಕೇರಾ ಓಣಿಯ ಮುಖಂಡ ಆದಿಲ್ ಪಟೇಲರಿಗೆ ಕೇಳಿದರು.ನಮ್ಮ ಓಣಿಯ ಗರಡಿ ಮನೆಯಲ್ಲಿ ಪೈಲ್ವಾನರು ಉಪಯೋಗಿಸುವ ಎಲ್ಲಾ ಸಲಕರಣೆಗಳನ್ನು ಬೇಕು. ಅಲ್ಲದೆ ಗರಡಿ ಮನೆ ಮೇಲೆ ಅತ್ಯಾಧುನಿಕ ಜಿಮ್ ಮಾಡಲು ಕಟ್ಟಡ ಮತ್ತು ಅದರ ಎಲ್ಲಾ ಸಲಕರಣೆಗಳನ್ನು ಒದಗಿಸಿದರೆ ವ್ಯಾಯಾಮ ಮಾಡಲು ಅನುಕೂಲವಾಗುತ್ತದಲ್ಲದೆ ನಮ್ಮ ಓಣಿಯ ಯುವಕರು ಗುಟುಕ.ಪಾನ್ ಪರಾಗ.ಧೂಮಪಾನ ಸೇರಿದಂತೆ ಇತರೆ ದುಶ್ಚಟಗಳಿಂದ ದೂರ ಇರಲು ಸಾಧ್ಯವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ತೆಗ್ಗಿನಕೇರಾ ಓಣಿಯಿಂದ ಗೌರಿ ಅಂಗಳ ಓಣಿಗೆ ಭೇಟಿ ನೀಡಿ ಗರಡಿ ಮನೆ ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದು.ಗೋಡೆಗಳು ಸಹ ಶೀತಲಗೊಂಡಿದ್ದನ್ನು ವೀಕ್ಷಿಸಿ ಗರಡಿ ಮನೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಎಂದು ಸ್ಥಳೀಯ ಹಳೆಯ ಪೈಲ್ವಾನರಿಗೆ ತಿಳಿಸಿದರು.
ಸೈಲಾನಪೂರ ಓಣಿಯ ಸಂಗಟಿ ಗರಡಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಲ್ಲಿಯ ಲಕ್ಷ್ಮಣ್ ಎಂಬವರು ಹೊಲ ಮಾರಿದ ತಮ್ಮ ಸ್ವಂತ ದುಡ್ಡು ಹಾಕಿ ಗರಡಿ ಮನೆ ನಿರ್ಮಿಸಿದ್ದು. ಸರ್ಕಾರದಿಂದ ಹಣ ಒದಗಿಸುವಂತೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬ್ ಗೌಡರಲ್ಲಿ ಕೋರಿದರು.
ಮಿಟ್ಟಿಕೇರಾ ಓಣಿಗೆ ವಿಠ್ಠಲ್ ಜಾಬ್ ಗೌಡರ ಭೇಟಿ ನೀಡಿದಾಗ ಸ್ವತಃ ಸ್ವಚ್ಛಗೊಳಿಸಿ ನಿರ್ವಹಣೆ ಮಾಡುತ್ತಿರುವುದಾಗಿ.ಮಿಟ್ಟಿಕೇರಾ ಓಣಿಯ ಗರಡಿ ಮನೆ ಏಕೈಕ ಮಾತ್ರ ಉತ್ತಮ ಸ್ಥಿತಿಯಲ್ಲಿರುವದನ್ನು ವಿವರಿಸಿ.ಬಳಿಕ ಯೌವನದಲ್ಲಿ ಸಮೀಪದಲ್ಲಿದ್ದ ಭಾರವಾದ ಗುಂಡನ್ನು ಮುಂದಿನಿಂದ ಮೇಲೆ ಎತ್ತಿಕೊಂಡು ಹಿಂದೆ ಬಿಸುತಿದ್ದೆ ಎಂದು ಫಕೀರಪ್ಪ ಹೊಸಮನಿ ತಮ್ಮ ಹಳೆಯ ನೆನಪುಗಳನ್ನು ಸ್ಮರಿಸಿದರು.
ದಿಡ್ಡಿಕೇರಾ ಓಣಿಗೆ ಭೇಟಿ ನೀಡಿ ಅಲ್ಲಿನ ಗರಡಿ ಮನೆಯ ಮೇಲಿನ ಛಾವಣಿ ಬಿದ್ದು.ಗೋಡೆಗಳು ಸಹ ದುರ್ಬಲಗೊಂಡು ಬೀಳುವ ಸ್ಥಿತಿಯಲ್ಲಿರುವದನ್ನು ನೋಡಿ ವಿಠ್ಠಲ್ ಜಾಬ್ ಗೌಡರ ಮತ್ತೆ ದುರಸ್ತಿ ಮಾಡಿಸಲು ದಾಖಲೆಗಳನ್ನು ಕೊಡಿ. ದುರಸ್ತಿ ಹಾಗೂ ಹೊಸದಾಗಿ ನಿರ್ಮಿಸಲು ಜಿಲ್ಲಾಧಿಕಾರಿಗಳು ಹಾಗೂ ಕ್ರೀಡಾ ಇಲಾಖೆಯ ಆಯುಕ್ತರಿಗೆ ಕಳುಹಿಸುತ್ತೇನೆ ಎಂದು ಹೇಳಿದರು.
ಸರ್ದಾರ್ ಓಣಿಯ ಗರಡಿ ಮನೆಗೆ ಹೋಗಿ ಭೇಟಿಯಾದಾಗ ಅದು ಸಹ ಮೇಲ್ಛಾವಣಿ ಕುಸಿದು ಬಿದ್ದು. ನಾಲ್ಕು ಗೋಡೆಗಳೂ ಹಾಳಾಗಿರುವುದನ್ನು ಪರಿಶೀಲಿಸಿ ಸ್ಥಳೀಯ ವಯಸ್ಸಾದ ಪೈಲ್ವಾನ್ ಖಾದರ್ ಸಾಬ್ ಕುದುರಿಮೊತಿ ಅವರೊಂದಿಗೆ ಚರ್ಚಿಸಿ ಗರಡಿ ಮನೆ ನಿರ್ಮಾಣದ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಕೊಡಿ ನಗರದಲ್ಲಿ ಬಹುತೇಕ ಗರಡಿ ಮನೆಗಳನ್ನು ಹೊಸದಾಗಿ ನಿರ್ಮಿಸಲು ಉಳಿದವು ಪುನಶ್ಚೇತನಗೊಳಿಸಲು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರ ಮನವರಿಕೆ ಮಾಡಿ. ಕೊಪ್ಪಳ ವಿಭಾಗದಲ್ಲಿ ಪುರಾತನ ಕುಸ್ತಿ ಕ್ರೀಡೆಯತ್ತ ಯುವಕರನ್ನು ಮತ್ತೆ ಕರೆತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
Comments are closed.