ಹಿರೇಬಗನಾಳ ಶ್ರೀ ಗವಿಸಿದ್ದೇಶ್ವರ ರಥೋತ್ಸವ ಸಂಭ್ರಮ

Get real time updates directly on you device, subscribe now.

ಕೊಪ್ಪಳ: ತಾಲೂಕಿನ ಜಹಗೀರ ಶ್ರೀ ಗವಿಮಠ ಹಿರೇಬಗನಾಳ ಗ್ರಾಮದಲ್ಲಿ ರವಿವಾರದಂದು ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಮಾರುತೇಶ್ವರನ ಕಾರ್ತಿಕೋತ್ಸವ ಅಂಗವಾಗಿ ೩೧ನೇ ವರ್ಷದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವವು ಅಪಾರ ಜನಸಾಗರದ ಮಧ್ಯೆ ಬಹು ವಿಜೃಭಣೆಯಿಂದ ಜರುಗಿತು.

ಕೊಪ್ಪಳ ತಾಲ್ಲೂಕಿನ ವಿವಿಧ ಗ್ರಾಮಗಳ ಸಹಸ್ರಾರು ಭಕ್ತರು ರಥಬೀದಿ, ಮಠದ ಕಟ್ಟಡದ ಮೇಲೆ ಜಮಾಯಿಸಿದ್ದರು. ಸಾಗುತ್ತಿದ್ದ ರಥಕ್ಕೆ ನೆರೆದ ಭಕ್ತರು ಹೂವು, ಹಣ್ಣು, ಉತ್ತತ್ತಿಗಳನ್ನು ಎಸೆದು, ಜಯಘೋಷ ಹಾಕಿ ಭಕ್ತಿಯನ್ನು ಮೆರೆದರು.

ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸೇರಿದಂತೆ ಮೊದಲಾದ ಶ್ರೀಗಳು ಅಲಂಕೃತ ರಥಕ್ಕೆ ಪೂಜೆ ಸಲ್ಲಿಸಿ, ಕಳಸಾರೋಹಣ ನಡೆಸಿ ಚಾಲನೆ ನೀಡಿದರು.

ರಥವು ದೇವಸ್ಥಾನದ ಮುಂಭಾಗದಿಂದ ಪ್ರಾರಂಭಗೊಂಡು, ಕಾಸನಕಂಡಿ ರಸ್ತೆಯ ಪಾದಗಟ್ಟೆಯವರೆಗೆ ತೆರಳಿ ವಾಪಸ್ಸಾಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀದೇವಿಯ ಪಾಯಸ, ಅಗ್ನಿ, ಶ್ರೀ ಮಾರುತೇಶ್ವರನಿಗೆ ಕುಂಕುಮ ಪೂಜೆ, ಗಿಡ, ಅಗ್ನಿ, ಮುಳ್ಳು ಪಾಲ್ಕಿ ಮನರಂಜನೆಯ ಅಂಗವಾಗಿ ಡೊಳ್ಳಿನ ವಾದ್ಯ, ಲಿಂ.ಶ್ರೀ ಗವಿಸಿದ್ದೇಶ್ವರ ಸ್ವಾಮಿ ಗದ್ದುಗೆಗೆ ಅಭಿಷೇಕ, ಸಂಗೀತ ಕಾರ್ಯಕ್ರಮ, ಶ್ರೀಗಳಿಂದ ಆಶೀರ್ವಚನ, ಶ್ರೀ ಗವಿಸಿದ್ದೇಶ್ವರ ಮೂರ್ತಿ ಉತ್ಸವ, ಮದ್ದಿನ ಕಾರ್ಯಕ್ರಮ, ಶ್ರೀ ಗವಿಸಿದ್ದೇಶ್ವರನ ಕಡಬಿನ ಕಾಳಗ ಸೇರಿದಂತೆ ಮೊದಲಾದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.

ರಥೋತ್ಸವ ಸಂದರ್ಭದಲ್ಲಿ ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಬಳಗಾನೂರಿನ ಚಿಕ್ಕೇನಕೊಪ್ಪದ ಚೆನ್ನವೀರ ಶರಣರಮಠದ ಶಿವಶಾಂತವೀರ ಶರಣರು, ಮಂಗಳೂರಿನ ಅರಳಲೆ ಹಿರೇಮಠದ ಸಿದ್ದಲಿಂಗ ಶಿವಚಾರ್ಯರು, ಮೈನಳ್ಳಿ ಹಿರೇಮಠದ ಸಿದ್ಧೇಶ್ವರ ಶಿವಚಾರ್ಯರು, ವಿಜಯಪುರ
ಇಟಗಿಯ ಶ್ರೀ ಗುರು ಶಾಂತವೀರ ಶಿವಾಚಾರ್ಯರು, ಹೂವಿನಹಡಗಲಿಯ ಶಾಖಾ ಗವಿಮಠದ ಡಾ|| ಹಿರೇಶಾಂತವೀರ ಮಹಾಸ್ವಾಮಿಗಳು, ಹಿರೇಸಿಂದೋಗಿಯ
ಕಪ್ಪತ್ ಮಠದ ಶ್ರೀ ಚಿದಾನಂದ ಸ್ವಾಮಿಗಳು ಅನೇಕರು ಪಾಲ್ಗೊಂಡು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ರಥೋತ್ಸವ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ವಿವಿಧೆಡೆಯಿಂದ ಲಕ್ಷಾಂತರ ಜನ ಪಾಲ್ಗೊಂಡಿದ್ದರು. ಆಗಮಿಸಿದ ಭಕ್ತರಿಗೆ ಐದು ದಿನಗಳ ಕಾಲ ಪ್ರಸಾದದ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.

Get real time updates directly on you device, subscribe now.

Comments are closed.

error: Content is protected !!