ಯುವ ಪೀಳಿಗೆಯಲ್ಲಿ ಓದುವ,ಬರೆಯುವ ಹವ್ಯಾಸ ಬೆಳೆಸಬೇಕಿದೆ-ಡಾ.ಬಿ.ಕೆ.ರವಿ
ಕೊಪ್ಪಳ : ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಯಲ್ಲಿ ಓದುವ, ಬರೆಯುವ ಹವ್ಯಾಸ ಕಡಿಮೆಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಭಾಷೆಯ ಬೆಳವಣಿಗೆ ಮೇಲೂ ಪರಿಣಾಮ ಬೀರಬಹುದು ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಕೆ.ರವಿ ಹೇಳಿದರು.
ಕೊಪ್ಪಳದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ಲೇಖಕಿಯರ ಸಂಘ ಕೊಪ್ಪಳ ಜಿಲ್ಲಾ ಶಾಖೆ ಕೊಪ್ಪಳ ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ನಿರಂತರ ಪ್ರಕಾಶನ, ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು ಸಹಯೋಗದಲ್ಲಿ ನಡೆದ ಶ್ರೀಮತಿ ಸವಿತಾ ಮುದ್ಗಲ್ ರವರ ನೆರಳಗಂಟಿದ ಭಾವ, ಕಥಾ ಸರೋವರ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು.
ಕೊಪ್ಪಳ ಜಿಲ್ಲೆ ಸಾಹಿತ್ಯಿಕವಾಗಿ ಗಟ್ಟಿಯಾದ ನೆಲೆಯಿರುವ ಸ್ಥಳ. ನಮ್ಮ ಸಾಹಿತ್ಯ ಪರಂಪರೆಯ ಹಳೆಗನ್ನಡದ ಅರಿವನ್ನು ಜಾಗೃತಿಯನ್ನು ಮೂಡಿಸಬೇಕಿದೆ. ಹೊಸ ಪೀಳಿಗೆ ಕನ್ನಡದ ಓದು ಮತ್ತು ಬರಹದಿಂದ ದೂರವಾಗುತ್ತಿರುವುದು ನಿಜಕ್ಕೂ ಆತಂಕಕಾರಿ. ಮಹಿಳೆಯರು ಸೃಷ್ಟಿಸುವ ಸಾಹಿತ್ಯ ಹೆಚ್ಚು ಹತ್ತಿರವಾಗುತ್ತದೆ. ಈ ನಿಟ್ಟಿನಲ್ಲಿ ಸಂಘವೂ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ವಿಶ್ವವಿದ್ಯಾಲಯ ನಿಮ್ಮೆಲ್ಲರ ಜೊತೆನಿಲ್ಲುತ್ತದೆ ಎನ್ನುವ ಭರವಸೆಯನ್ನು ನೀಡಿದರು.
Comments are closed.