ಕಣ್ಣು, ಕಿವಿ, ಮೂಗು, ಗಂಟಲು, ಹಲ್ಲಿನ ಮತ್ತು ಶಿರೋ ರೋಗಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ಕೊಪ್ಪಳದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಶಾಲಾಕ್ಯತಂತ್ರ ವಿಭಾಗದ ವತಿಯಿಂದ ಡಿ.09 ಶನಿವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ವರಗೆ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಕಣ್ಣು, ಕಿವಿ, ಮೂಗು, ಗಂಟಲು, ಹಲ್ಲಿನ ಮತ್ತು ಶಿರೋ ರೋಗಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಭಾಗದ ಮುಖ್ಯಸ್ಥರಾದ ಡಾ.ವೀರಯ್ಯ ಆರ್ ಹಿರೇಮಠ, ಪ್ರಾಂಶುಪಾಲರಾದ ಬಿ.ಎಸ್ ಸವಡಿ, ನಿರ್ದೇಶಕರಾದ ಡಾ.ಪ್ರವೀಣ ಕುಮಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಣ್ಣಿನ ವಿಭಾಗದಲ್ಲಿ ದೂರದೃಷ್ಟಿ ಮತ್ತು ಸಮೀಪ ದೃಷ್ಟಿ ದೋಷ ಚಿಕಿತ್ಸೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ. ಡಯಾಬಿಟಿಕ್ ರೆಟಿನೋಪತಿ, ಕಣ್ಣಿನ ದುರ್ಮಾಂಸ ಮತ್ತು ಇತರ ಕಣ್ಣಿನ ರೋಗಗಳ ಚಿಕಿತ್ಸೆ. ಕಂಪ್ಯೂಟರ ದಿಂದ ಕಣ್ಣಿನ ತಪಾಸಣೆ ಹಾಗೂ ಚಾಳೀಸು ಬರೆದು ಕೊಡಲಾಗುವುದು.
ಇ.ಎನ್.ಟಿ ವಿಭಾಗದಲ್ಲಿ ಕಿವಿನೋವು, ಕಿವಿಸೋರುವುದು, ಕಿವುಡುತನ ನಿಟಸ್ ರೋಗಗಳ ಚಿಕಿತ್ಸೆ ನೀಡಲಾಗುವುದು. ಮೂಗಿನ ತೊಂದರೆ, ಅಲರ್ಜಿ ಹಾಗೂ ಸೈನಸ್ ತೊಂದರೆಗಳ ಚಿಕಿತ್ಸೆ.
ತಲೆನೋವು, ತಲೆಸುತ್ತುವುದು, ಅರ್ಧ ತಲೆನೋವು (ಮೈಗ್ರೇನ್) ಚಿಕಿತ್ಸೆ. ಬಾಯಿ ಹುಣ್ಣು ಮತ್ತು ಗಂಟಲು ರೋಗಗಳ ಚಿಕಿತ್ಸೆ ನೀಡಲಾಗುವುದು.
ಹಲ್ಲಿನ ಭಾಗದಲ್ಲಿ(ಆನ್ ಡಿಸ್ಕೌಂಟೆಡ್ ಪ್ರೈಸ್ ) ಸಿಮೆಂಟ್ ತುಂಬಿಸುವುದು. ಹಲ್ಲುಗಳನ್ನು ಸ್ವಚ್ಛಗೊಳಿಸುವುದು.
ತೀವ್ರತರಹದ ಹಲ್ಲಿನ ಮತ್ತು ವಸಡಿನ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಸಲಹೆ ನೀಡಲಾಗುವುದು.
ಹಲ್ಲಿನ ಎಕ್ಸ್ರೇ ಮಾಡಲಾಗುತ್ತದೆ ಕಾರಣ ಕೊಪ್ಪಳ ನಗರ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ಜನರು ಶಿಬಿರದ ಪ್ರಯೋಜನ ಪಡೆಬೇಕು ಎಂದು ತಿಳಿಸಿದ್ದಾರೆ.
ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಕಣ್ಣಿನ ಪೊರೆ ಉಳ್ಳವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು.
ಬಿ.ಪಿ.ಎಲ್. ಕಾರ್ಡ್, ಆಧಾರ ಕಾರ್ಡ್ ಹಾಗೂ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಕಾರ್ಡ್, ಯಶಸ್ವಿನಿ ಕಾರ್ಡ್ ಹಾಗೂ ಆರೋಗ್ಯ ಸಂಬಂಧಿತ ದಾಖಲೆಗಳು ಇದ್ದಲ್ಲಿ ತಪ್ಪದೇ ತರಬೇಕು.
ಹೆಚ್ಚಿನ ಮಾಹಿತಿಗಾಗಿ (9448544376), (8951315404), (9480193373) (8150820271), (7012550149) ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.
Comments are closed.