ಬೆಳಗಾವಿಯಲ್ಲಿ ರೈತರ ಮೇಲೆ ದಾಳಿ ಮಾಡಿದ ಪೊಲೀಸರು ಖಂಡನೆ: ಭಾರಧ್ವಾಜ್
ಗಂಗಾವತಿ: ಬೆಳಗಾವಿಯಲ್ಲಿ ರೈತರು ತಾವು ಸಾಗುವಳಿ ಮಾಡುತ್ತಿರುವ ಭೂಮಿಗೆ ಪಟ್ಟಾ ಕೊಡಲು ಒತ್ತಾಯಿಸಿದ್ದಕ್ಕೆ ಪೊಲೀಸರು ವಿದ್ಯಾರ್ಥಿಗಳನ್ನು, ಮಹಿಳೆಯರನ್ನು, ರೈತರನ್ನು ಬಂಧಿಸಿರುವುದು ಖಂಡನೀಯ ಎಂದು ಕ್ರಾಂತಿ ಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.
೮ನೇ ಡಿಸೆಂಬರ್, ಶುಕ್ರವಾರ ಮದ್ಯಾಹ್ನ ೩:೦೦ ಸುಮಾರಿಗೆ, ರೈತರು ತಾವು ಸಾಗು ಮಾಡುತ್ತಿರುವ ಭೂಮಿಗೆ ಪಟ್ಟಾ ಕೊಡಲು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮಾನವೀಯತೆ ಮರೆತು ವಿದ್ಯಾರ್ಥಿಗಳು ಹಾಗೂ ಮಹಿಳೆಯರನ್ನೂ ಸಹಿತ ಬಂಧಿಸಿದ್ದಾರೆ.
ರೈತರ ಪರ ಎಂದು ಹೇಳುವ ಕಾಂಗ್ರೆಸ್ ಸರ್ಕಾರ ಕೂಡಲೇ ಬಂಧಿಸಿದ ಎಲ್ಲಾ ರೈತರು, ಮಹಿಳೆಯರು, ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕೆಂದು ಕ್ರಾಂತಿಚಕ್ರ ಬಳಗ ಒತ್ತಾಯಿಸಿದೆ.
Comments are closed.