ಮತದಾನ ಎಂಬುದು ಪವಿತ್ರ ಕಾರ್ಯವಾಗಿದ್ದು, ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ: ಉಪತಹಶೀಲ್ದಾರ ರೇಖಾ ದೀಕ್ಷಿತ್
: ಮತದಾನ ಎಂಬುದು ಪವಿತ್ರ ಕಾರ್ಯವಾಗಿದ್ದು, ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ 18 ವರ್ಷ ಪೂರ್ಣಗೊಂಡ ಎಲ್ಲ ಯುವಕ, ಯುವತಿಯರು ಮತದಾರರ ನೋಂದಣಿ ಮಾಡಿಸಬೇಕು ಎಂದು ಕೊಪ್ಪಳ ಉಪತಹಶೀಲ್ದಾರ ರೇಖಾ ದೀಕ್ಷಿತ್ ಹೇಳಿದರು.
ಬಹಳಷ್ಟು ಯುವಕರು ಮತದಾನದ ಮಹತ್ವದ ಬಗ್ಗೆ ತಿಳಿದಿಲ್ಲ. ಇದರಿಂದ ನಿರಾಸಕ್ತಿ ಹೊಂದಿ ಜವಾಬ್ದಾರಿಯಿಂದ ವಂಚಿತರಾಗುತ್ತಿದ್ದಾರೆ. ಮತದಾನ ಎನ್ನುವುದು ಪವಿತ್ರವಾದ ಕಾರ್ಯವಾಗಿದ್ದು, ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ 18 ವರ್ಷ ತುಂಬಿದ ಎಲ್ಲಾ ಯುವಕ ಮತ್ತು ಯುವತಿಯರು ಅಗತ್ಯವಾದ ವರ್ಗಾವಣೆ ಪ್ರಮಾಣಪತ್ರದ ಪ್ರತಿ, ಆಧಾರ ಕಾರ್ಡ ಪ್ರತಿ, 02 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಪಾಲಕರ ಮತದಾನ ಗುರುತಿನ ಚೀಟಿಯ ಪ್ರತಿಯೊಂದಿಗೆ ನಿಮ್ಮ ಹತ್ತಿರದ ಮತಗಟ್ಟೆ ಅಧಿಕಾರಿಗೆ ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬೇಕೆಂದು ಯುವ ಮತದಾರರಿಗೆ ಕರೆ ನೀಡಿದರು. ನಿಮ್ಮ ಮನೆಯಲ್ಲಿ ಹಾಗೂ ಅಕ್ಕ ಪಕ್ಕದ ಮನೆಯಲ್ಲಿ 18 ವರ್ಷ ತುಂಬಿದವರು ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಳ್ಳಲು ಮಾಹಿತಿ ನೀಡುವಂತೆ ತಿಳಿಸಿದರು.
ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಹನಮಂತಪ್ಪ ಮಾತನಾಡಿ, ಪ್ರತಿಯೊಬ್ಬ ಯುವ ಮತದಾರ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸಬಾರದು. ಮತದಾನ ಎನ್ನುವುದು ಪವಿತ್ರ ಕಾರ್ಯ. ಚುನಾವಣಾ ಆಯೋಗದಿಂದ ಮತದಾನ ಗುರುತಿನ ಚೀಟಿ ವಿತರಣೆಯಾಗುತ್ತದೆ. ಪ್ರತಿ ಚುನಾವಣೆಯಲ್ಲಿ ಮತದಾನ ಮಾಡುವುದು ಎಲ್ಲರ ಕರ್ತವ್ಯ ಹಾಗೂ ಹಕ್ಕಾಗಿದೆ. ಒಮ್ಮೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದಲ್ಲಿ ಎಲ್ಲಾ ಚುನಾವಣೆಗಳಲ್ಲಿ ಮತದಾನ ಹಕ್ಕು ಚಲಾಯಿಸಬಹುದಾಗಿದೆ. 18 ವರ್ಷ ತುಂಬಿದ ಯುವ ಮತದಾರರು ಹೊಸದಾಗಿ ನೋಂದಣಿಗಾಗಿ ಅಗತ್ಯ ದಾಖಲೆಗಳೊಂದಿಗೆ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ಪದವಿ ಕಾಲೇಜಿನ ಉಪಪ್ರಾಂಶುಪಾಲ ಡಾ|| ಕರಿಬಸವೇಶ್ವರ ಬಿ, ಉಪನ್ಯಾಸಕರುಗಳಾದ ಶರಣಪ್ಪ ಜಾಲಿಹಾಳ, ಪ್ರವೀಣ ಹಾದಿಮನಿ, ಡಾ|| ಚನ್ನಬಸವ, ಡಾ|| ಶಶಿಕಾಂತ, ಮಂಜುನಾಥ ಗಾಳಿ, ತಾಲೂಕ ಸ್ವೀಪ್ ತಂಡದ ಸದಸ್ಯರಾದ ದೇವರಾಜ ಪತ್ತಾರ, ಬಸವರಾಜ ಬಳಿಗಾರ, ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
Comments are closed.