ತಾಲೂಕು ವಕೀಲರ ಸಂಘದಿಂದ ಪ್ರತಿಭಟನೆ ಮನವಿ ಸಲ್ಲಿಕೆ
ಕುಷ್ಟಗಿ.; ಚಿಕ್ಕಮಂಗಳೂರಿನ ಯುವ ವಕೀಲ ಪ್ರೀತಮ್ ಮೇಲೆ ಪೋಲಿಸರ ಅಮಾನವೀಯ ಹಲ್ಲೆ ಮಾಡಿದ ಕೃತ್ಯ ಖಂಡಿಸಿ ಹಾಗೂ ಕರ್ನಾಟಕದಲ್ಲಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಒತ್ತಾಯಿಸಿ ಕುಷ್ಟಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ವಕೀಲರು ಕೋರ್ಟ್ ಕಲಾಪ ಬಹಿಸ್ಕರಿಸಿ ಪೋಲೀಸರ ವಿರುದ್ಧ ಹಾಗೂ ಸರಕಾರದ ನಡೆ ವಿರೋಧಿಸಿ ಘೋಷಣೆ ಕೂಗುತ್ತಾ ಪ್ರತಿಭಟನೆ ಮೂಲಕ ಇಲ್ಲಿನ ತಹಶೀಲ್ದಾರ ಕಚೇರಿಗೆ ತೆರಳಿ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಮಂಗಳವಾರ ಬೆಳಗ್ಗೆ ತಹಶೀಲ್ದಾರ ಶೃತಿ ಮಳ್ಳಪ್ಪಗೌಡರಗೆ ಸಲ್ಲಿಸಿದರು.
ವಕೀಲರ ಸಂಘದ ಅಧ್ಯಕ್ಷ ಮಹಾಂತೇಶ ಕೆ ಕುಷ್ಟಗಿ ಅವರು ಮನವಿ ಪತ್ರ ಸಲ್ಲಿಸುವ ವೇಳೆ ಮಾತನಾಡಿದ ಅವರು ನ.30 ರಂದು ಚಿಕ್ಕಮಂಗಳೂರಿನ ಯುವ ವಕೀಲ ಪ್ರೀತಮ್ ರವರ ಮೇಲೆ ಪೋಲಿಸರು ಅಮಾನವೀಯವಾಗಿ ಹಲ್ಲೆ ನಡೆಸಿದ್ದು, ಸದರಿ ಘಟನೆಯನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತದೆ. ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಪೊಲೀಸ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪ್ರಾರ್ಥನೆ ಇರುತ್ತದೆ ಎಂದು ಹೇಳಿದರು. ಅದರಂತೆ ಈ ಹಿಂದೆಯು ಸಹ ಅನೇಕ ವಕೀಲರುಗಳನ್ನು ಹತ್ಯೆ ಮಾಡಿದ್ದಲ್ಲದೆ, ವಕೀಲರುಗಳ ಮೇಲೆ ಮೇಲಿಂದ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಹೇಳಿದರು.
ಹಿರಿಯ ವಕೀಲ ಅಮರೇಗೌಡ ಪಾಟೀಲ್ ಮಾತನಾಡಿದ ಅವರು ನಾವು ವಕೀಲರು ಅನೇಕ ಪ್ರಜೆಗಳ ಮಾನ, ಆಸ್ತಿ, ಜೀವಗಳನ್ನು ರಕ್ಷಣೆ ಮಾಡುವ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ನಮಗೆ ಯಾವುದೇ ಕಾನೂನಿನ ರಕ್ಷಣೆ ಇಲ್ಲದಂತಾಗಿದೆ. ವಕೀಲರ ರಕ್ಷಣೆಗಾಗಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವುದು ಅತೀ ಅವಶ್ಯಕವಾಗಿದೆ ಎಂದು ಹೇಳಿದರು. ಸರಕಾರ ಈ ಬಗ್ಗೆ ಕೂಡಲೇ ಹೆಚ್ಚಿನ ನಿಗಾವಹಿಸಿ ಕರ್ನಾಟಕದ ವಕೀಲರ ರಕ್ಷಣೆಗಾಗಿ “ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ನಮ್ಮೆಲ್ಲ ವಕೀಲರ ಜೀವ, ಮಾನ, ಕುಟುಂಬಗಳನ್ನು ರಕ್ಷಿಸಣೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ಸರಕಾರ ವನ್ನು ಒತ್ತಾಯಿಸಿದ್ದಾರೆ. ಹಿರಿಯ ವಕೀಲ ಆರ್.ಕೆ ದೇಸಾಯಿ, ಎಚ್.ಆರ್ ನಾಯ್ಕ್ ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶಿವಕುಮಾರ ದೊಡ್ಡಮನಿ, ಕಾರ್ಯದರ್ಶಿ ಬಸವರಾಜ ಎಮ್ ಲಿಂಗಸೂರ, ಜಂಟಿ ಕಾರ್ಯದರ್ಶಿ ಮೈನುದ್ದೀನ್ ಎಲ್ ಮುಲ್ಲಾ, ಎಚ್.ಬಿ ಕುರಿ, ಕೆ.ಎಮ್ ಪಾಟೀಲ್, ಆರ್.ವಾಯ್ ಮೂಲಿಮನಿ, ಎಮ್.ಬಿ ಕೋನಸಾಗರ, ಬಸವರಾಜ ಇದ್ಲಾಪೂರ, ಮಹಾಂತೇಶ ಬಂಡೇರ್, ಬಿ.ಬಸವರಾಜ, ವಾಯ್.ಜೆ ಪೂಜಾರ, ಎ.ಎಚ್ ಪಲ್ಲೇದ, ಶಂಕರಗೌಡ ಪಾಟೀಲ್ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಇನ್ನಿತರೆ ವಕೀಲರು ಉಪಸ್ಥಿತರಿದ್ದರು.
Comments are closed.