ಅತಿಥಿ ಉಪನ್ಯಾಸಕರಿಂದ ಪತ್ರ ಮೂಲಕ ಮನವಿ
ಕೊಪ್ಪಳ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಸೇವೆ ಖಾಯಂ ಮಾಡಬೇಕೆಂದು ಬೇಡಿಕೆಯನ್ನು ಇಟ್ಟುಕೊಂಡು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಇಂದು 13 ನೇ ದಿನದಲ್ಲಿ ಮುಂದುವರೆದಿದೆ. ಇವತ್ತು ಮಾನ್ಯ ಮುಖ್ಯಮಂತ್ರಿಗಳು ಮತ್ತು ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ನಮ್ಮ ಸೇವೆಯನ್ನು ಶೀಘ್ರದಲ್ಲಿ ಖಾಯಂ ಮಾಡುವಂತೆ ಗಮನ ಸೆಳೆಯಲು ಪತ್ರವನ್ನು ಬರೆಯುವದರ ಮೂಲಕ ಪ್ರತಿಭಟಿಸಲಾಯಿತು. ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ವೀರಣ್ಣ ಸಜ್ಜನ್ , ಸಣ್ಣ ದೇವೇಂದ್ರ ಸ್ವಾಮಿ , ಶಿವಬಸಪ್ಪ ಮಸ್ಕಿ, ಜ್ಞಾನೇಶ್ ಪತ್ತಾರ್ , ಮಹಾಂತೇಶ್ ನೆಲಾಗಣಿ , ಪ್ರಕಾಶ ಬಳ್ಳಾರಿ , ತುಕಾರಾಂ ನಾಯ್ಕ , ಮಾರ್ಕಂಡಯ್ಯ , ವೀರಭದ್ರಯ್ಯ , ಬಿ. ಮಾಳೆ ಕೊಪ್ಪ , ಕಲ್ಲೇಶ್ವರ , ಪ್ರಕಾಶ ಜಡಿ, ವಿಜಯ ಕುಲಕರ್ಣಿ, ವಿಜಯ ತೋಟದ, ಶಂಕರಾನಂದ , ರಾಘವೇಂದ್ರ, ನವೀನ್ , ಗಿರಿಜಾ, ಗೀತಾ , ನಜ್ಮಾ , ಅಕ್ಕಮಹಾದೇವಿ ಇತರರು ಇದ್ದರು.
Comments are closed.