ಡಿ.06 ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ
ಜಿಲ್ಲಾಧಿಕಾರಿಗಳ ಆದೇಶದಂತೆ ಕೊಪ್ಪಳ ತಾಲ್ಲೂಕಿನ 23 ಗ್ರಾಮಗಳಲ್ಲಿರುವ ಡಬಲ್/ತ್ರಿಬಲ್/ ಜಂಪ್ ಸರ್ವೆ ನಂಬರಗಳ ಪಹಣಿ ತಿದ್ದುಪಡಿ ಮಾಡಿ ಸಿಂಗಲ್ ಸರ್ವೆ ನಂಬರು ಮಾಡಲು ಪಹಣಿ ತಿದ್ದಪುಡಿ ವಿಶೇಷ ಅಭಿಯಾನವನ್ನು ಡಿ.06 ರಿಂದ ಹಮ್ಮಿಕೊಂಡಿದ್ದು, ಅದರಂತೆ ಸಾರ್ವಜನಿಕ ಸಭೆಯನ್ನು ಕೈಗೊಳ್ಳಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಕೊಪ್ಪಳ, ಸರ್ವೆ ಇಲಾಖೆ ಅಧಿಕಾರಿಗಳು/ ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಅಧಿಕಾರಿ/ಸಿಬ್ಬಂದಿ ಸಹಯೋಗದೊಂದಿಗೆ ವೇಳಾಪಟ್ಟಿಯಲ್ಲಿರುವಂತೆ ಗ್ರಾಮಗಳಿಗೆ ತೆರಳಿ ಸಾರ್ವಜನಿಕರಿಂದ ಅಹವಾಲು ಮತ್ತು ಆಕ್ಷೇಪಣೆ ಸ್ವೀಕೃತಿಯನುಸಾರ ಇತ್ಯರ್ಥಪಡಿಸಲು ಮತ್ತು ಪಹಣಿ ತಿದ್ದುಪಡಿ ಕುರಿತು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶಿರುತ್ತಾರೆ.
ವೇಳಾಪಟ್ಟಿಯನ್ವಯ ಡಿ.06 ಮತ್ತು ಡಿ. 21 ರಂದು ಬೆಳಿಗ್ಗೆ ನೀರಲಗಿ ಗ್ರಾಮ ಹಾಗೂ ಮಧ್ಯಾಹ್ನ ಮತ್ತೂರು ಗ್ರಾಮದಲ್ಲಿ, ಡಿ.07 ಮತ್ತು ಡಿ.22 ರಂದು ಬೆಳಿಗ್ಗೆ ಬೇಳೂರು ಗ್ರಾಮ ಹಾಗೂ ಮಧ್ಯಾಹ್ನ ಹನಕುಂಟಿ ಗ್ರಾಮದಲ್ಲಿ, ಡಿ.08 ಮತ್ತು ಡಿ.26 ರಂದು ಬೆಳಿಗ್ಗೆ ಕಲ್ಲತಾವರಗೇರ ಗ್ರಾಮ ಮತ್ತು ಮಧ್ಯಾಹ್ನ ಚ್ಯಾಮಲಾಪೂರ ಗ್ರಾಮದಲ್ಲಿ, ಡಿ.11 ಮತ್ತು ಡಿ.27 ರಂದು ಬೆಳಿಗ್ಗೆ ಕಿನ್ನಾಳ ಗ್ರಾಮದಲ್ಲಿ, ಡಿ.12 ಮತ್ತು ಡಿ.28 ರಂದು ಬೆಳಿಗ್ಗೆ ಹಿಟ್ನಾಳ ಗ್ರಾಮ ಹಾಗೂ ಮಧ್ಯಾಹ್ನ ಅಗಳಕೇರಾ ಗ್ರಾಮದಲ್ಲಿ, ಡಿ.13 ಮತ್ತು ಡಿ.29 ರಂದು ಬೆಳಿಗ್ಗೆ ಕಂಪಸಾಗರ ಗ್ರಾಮ ಹಾಗೂ ಮಧ್ಯಾಹ್ನ ಬುಳ್ಳಾಪುರ ಗ್ರಾಮದಲ್ಲಿ, ಡಿ.14 ಮತ್ತು ಡಿ.30 ರಂದು ಬೆಳಿಗ್ಗೆ ಹುಲಿಗಿ ಗ್ರಾಮ ಹಾಗೂ ಮಧ್ಯಾಹ್ನ ಮುನಿರಾಬಾದ ಗ್ರಾಮದಲ್ಲಿ, ಡಿ.15 ಮತ್ತು ಜನವರಿ 02 ರಂದು ಬೆಳಿಗ್ಗೆ ಬಸಾಪುರ ಗ್ರಾಮ ಹಾಗೂ ಮಧ್ಯಾಹ್ನ ರಾಜಾರಾಮಪೇಟೆ ಗ್ರಾಮದಲ್ಲಿ, ಡಿ.16 ಮತ್ತು ಜ.03 ರಂದು ಬೆಳಿಗ್ಗೆ ನಾರಾಯಣಪೇಟೆ ಗ್ರಾಮ ಹಾಗೂ ಮಧ್ಯಾಹ್ನ ಅಯೋಧ್ಯ ಗ್ರಾಮದಲ್ಲಿ, ಡಿ.18 ಮತ್ತು ಜ.04 ರಂದು ಬೆಳಿಗ್ಗೆ ಮಹಮ್ಮದ್ ನಗರ ಗ್ರಾಮ ಹಾಗೂ ಮಧ್ಯಾಹ್ನ ಅತ್ತಿವಟ್ಟಿ ಗ್ರಾಮದಲ್ಲಿ, ಡಿ.19 ಮತ್ತು ಜ.05 ರಂದು ಬೆಳಿಗ್ಗೆ ಶಿವಪುರ ಗ್ರಾಮ ಹಾಗೂ ಮಧ್ಯಾಹ್ನ ಬಂಡಿಹರ್ಲಾಪುರ ಗ್ರಾಮದಲ್ಲಿ, ಡಿ.20 ಮತ್ತು ಜ.06 ರಂದು ಬೆಳಿಗ್ಗೆ ಹೊಳೆ ಮುದ್ಲಾಪುರ ಗ್ರಾಮ ಹಾಗೂ ಮಧ್ಯಾಹ್ನ ಬೇವಿನಹಳ್ಳಿ ಗ್ರಾಮದಲ್ಲಿ ಸರ್ವೇ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕ ಸಭೆಯನ್ನು ನಡೆಸಿ ಪಹಣಿ ತಿದ್ದುಪಡಿ ಕುರಿತ ಅಹವಾಲುಗಳನ್ನು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸುತ್ತಾರೆ.
ಅದರಂತೆ ಗ್ರಾಮಗಳಲ್ಲಿ ನಿಗದಿಪಡಿಸಲಾದ ದಿನಾಂಕಗಳAದು ಸರ್ವೆ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿ/ಸಿಬ್ಬಂದಿ ಭೇಟಿ ನೀಡಿ ಸಾರ್ವಜನಿಕ ಅಹವಾಲುಗಳನ್ನು, ಆಕ್ಷೇಪಣೆಗಳನ್ನು ಸ್ವೀಕರಿಸಲಿದ್ದು, ಡಬಲ್/ತ್ರಿಬಲ್/ ಜಂಪ್ ಸರ್ವೆ ನಂಬರಗಳ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಆಕ್ಷೇಪಣೆಗಳನ್ನು ನಿಗದಿತ ದಿನಾಂಕದೊಳಗಾಗಿ ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳುವಂತೆ ಹಾಗೂ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ ಕಾರ್ಯವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ತಹಶೀಲ್ದಾರರು ಪ್ರಕಟಣೆ ಮೂಲಕ ಕೋರಿದ್ದಾರೆ.

Comments are closed.