ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಮತ್ತು ಜೋಳ ಖರೀದಿ ಪ್ರಕ್ರಿಯೆ ಆರಂಭ
: 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ, ರಾಗಿ ಮತ್ತು ಜೋಳ ಖರೀದಿಗೆ ಕೊಪ್ಪಳ, ಗಂಗಾವತಿ, ಕಾರಟಗಿ, ಕನಕಗಿರಿ, ಯಲಬುರ್ಗಾ, ಕುಕನೂರು ಮತ್ತು ಕುಷ್ಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ(ಸಾಮಾನ್ಯ)-ರೂ.2183, ಭತ್ತ(ಗ್ರೇಡ್-ಎ)-ರೂ.2203, ಬಿಳಿಜೋಳ(ಹೈಬ್ರಿಡ್)-ರೂ.3180, ಬಿಳಿಜೋಳ(ಮಾಲ್ದಂಡಿ)-ರೂ.3225, ರಾಗಿ-ರೂ.3846 ಗಳ ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿಪಡಿಸಿದೆ.
ಅದರಂತೆ ಕೊಪ್ಪಳ ಎಪಿಎಂಸಿಯಲ್ಲಿ ಭತ್ತ ಮತ್ತು ಜೋಳ ಖರೀದಿ ಅಧಿಕಾರಿಗಳನ್ನಾಗಿ ಸಗಟು ಮಳಿಗೆ ನಿರ್ವಾಹಕರಾದ ಎಂ.ವಿ.ಕೋನಾಪುರ ಮೊ.ಸಂ: 9739228720, ಗಂಗಾವತಿ ಎಪಿಎಂಸಿಯಲ್ಲಿ ಭತ್ತ ಖರೀದಿ ಅಧಿಕಾರಿಯನ್ನಾಗಿ ಆಹಾರ ನಿರೀಕ್ಷಕರಾದ ಶೇಖರಪ್ಪ ಮೊ.ಸಂ: 9980226881, ಕಾರಟಗಿ ಎಪಿಎಂಸಿಯಲ್ಲಿ ಭತ್ತ ಖರೀದಿಗಾಗಿ ಆಹಾರ ನಿರೀಕ್ಷಕರಾದ ನವೀನ್ ಮಠದ್ ಮೊ.ಸಂ: 8123453419, ಕನಕಗಿರಿ ಎಪಿಎಂಸಿಯಲ್ಲಿ ಜೋಳ ಖರೀದಿ ಅಧಿಕಾರಿಯನ್ನಾಗಿ ಪ್ರಭಾರಿ ಆಹಾರ ನಿರೀಕ್ಷಕರಾದ ನವೀನ್ ಮಠದ್ ಮೊ.ಸಂ: 8123453419, ಯಲಬುರ್ಗಾ, ಕುಕನೂರು ಎಪಿಎಂಸಿಯಲ್ಲಿ ಜೋಳ ಖರೀದಿ ಅಧಿಕಾರಿಯನ್ನಾಗಿ ಸಗಟು ಮಳಿಗೆ ನಿರ್ವಾಹಕರಾದ ಎಂ.ವಿ.ಕೋನಾಪುರ ಮೊ.ಸಂ. 9739228720 ಹಾಗೂ ಕುಷ್ಟಗಿ ಎಪಿಎಂಸಿಯಲ್ಲಿ ಜೋಳ ಖರೀದಿಗಾಗಿ ಸಗಟು ಮಳಿಗೆ ನಿರ್ವಾಹಕರಾದ ಸೋಮಶೇಖರ ಮೊ.ಸಂ: 6361289585 ಅವರನ್ನು ನಿಯೋಜಿಸಲಾಗಿದೆ.
ಮುಂಗಾರು ಭತ್ತ ಮತ್ತು ಜೋಳ ಖರೀದಿಗೆ ಸಂಬAಧಿಸಿದAತೆ, ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ಇವರನ್ನು ಕೊಪ್ಪಳ ಜಿಲ್ಲೆಗೆ ಖರೀದಿ ಏಜೆನ್ಸಿಯನ್ನಾಗಿ ನೇಮಕ ಮಾಡಲಾಗಿರುತ್ತದೆ. ರೈತರಿಂದ ಭತ್ತ ಖರೀದಿಗೆ ದಿನಾಂಕ:15-11-2023 ರಿಂದ 31-12-2023 ಹಾಗೂ ಜೋಳ ಖರೀದಿಗೆ ದಿನಾಂಕ:01-12-2023 ರಿಂದ ಸಂಬAಧಿಸಿದ ಖರೀದಿ ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿರುತ್ತದೆ. ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.