ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಶ್ರೀ ಮೃತ್ಯುಂಜಯ ಹೋಮ
ಕೊಪ್ಪಳ, ೨ – ಕಲಿಯುಗದ ಕಷ್ಟಗಳಿಗೆ ಪರಿಹಾರ ಹುಡುಕುವುದ ಕಷ್ಟವಾಗಿದೆ ನಿರಂತರ ಬಗವಂತನ ನಾಮ ಸ್ಮರಣೆ ಹಾಗೂ ಮೃತ್ಯುಂಜಯ ಹೋಮದಿಂದ ಸಕಲ ಕಷ್ಟಗಳಿಗೆ ಪರಿಹಾರ ಎಂದು ಪಂ, ವಿನಾಯಕ ಸಿದ್ದಾಂತಿ ಹೇಳಿದರು.
ಅವರು ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಗಾಯತ್ರಿ ಭಕ್ತ ವೃಂದದ ಮುಖಂಡರು ಹಾಗೂ ಬ್ರಾಹ್ಮಣ ಸಮಾಜದ ಲೋಕ ಕಲ್ಯಾಣಕ್ಕಾಗಿ ಡಿ, ೧,೨ ಮತ್ತು ೩ರ ವರೆಗೆ ಮೂರುದಿನಗಳ ಕಾಲ ಆಯೋಜಿಸಲಾಗಿರುವ ಶ್ರೀ ಗಾಯತ್ರಿ ಮತ್ತು ಶ್ರೀ ಮೃತ್ಯುಂಜಯ ಹೋಮ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಲೋಕ ಕಲ್ಯಾಣಾತೃವಾಗಿ ನಿತ್ಯ ೧೫೦೦ಕ್ಕು ಹೆಚ್ಚು ಮೃತ್ಯಂಜಯ ಜೋಮಗಳನ್ನು ಮಾಡಲಾಗಿದೆ ಭಗವಂತ ಯಾವುದೆ ಅಡೆ ತಡೆಗಳಿಲ್ಲದೆ ಸಾಂಗತವಾಗಿ ಕಾರ್‍ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾನೆ. ಕರೋನಾ ಮಾಹಾಮಾರಿ ಸಂದರ್ಭದಲ್ಲಿ ಆರಂಭವಾದ ನಿತ್ಯ ಮೃತ್ಯಂಜಯ ಹೋಮ ಲೋಕ ಕಲ್ಯಾಣಕ್ಕಾಗಿ ಆಯೋಜಿಸಲಾಗಿದೆ.
ಪ್ರತಿಯೋಬ್ಬರು ನಿತ್ಯ ಬಗವಂತನ ನಾಮ ಸ್ಮರಣೆಮಾಡಿ ಕಲಿಯುಗದಲ್ಲಿ ಮನುಷ್ಯನ ಮನಸ್ಸು ನಮ್ಮ ಯೋಗ್ಯತೆ ಮಿರಿ ದುರಾಸೆಯ ಕಡೆಗೆ ಮುಕ ಮಾಡುತ್ತದೆ ಅದನ್ನು ತಡೆಯಲು ,ತೊಡೆದು ಹಾಕಲೂ ನಾಮಸ್ಮರಣೆಯಿಂದ ಮಾತ್ರ ಸಾಧ್ಯ ಎಂದರು.
ಪೂರ್ಣಾಹುತಿ: ಇಂದು ಡಿಸೆಂಬರ ೩ ರವಿವಾರ ಬೆಳಿಗ್ಗೆ ೬:೩೦೮ಕ್ಕೆ ದೇವತಾಪೂಜೆ ,ಬೆಳಿಗ್ಗೆ ೮:೩೦ಕ್ಕೆ ಶ್ರೀ ಮೃತ್ಯುಂಜಯ ಹೋಮದ ಪೂರ್ಣಾಹುತಿ ಶ್ರೀಗಳಿಂದ ಆರ್ಶೀಚನ ಜರುಗಲಿದೆ.ಕಾರ್ಯಕ್ರಮದ ಸಾನಿಧ್ಯವನ್ನು ಹೊಸಪೇಟೆಚಿಂತಾಮಣಿ ಮಠ ಅಮರಾವತಿಯಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಹಾಗೂ ಸಿಂದಗಿ ಶ್ರೀ ಸದ್ಗುರು ಭೀಮಾಶಂಕರ ಸ್ವಾಮಿ ಮಠದ ಶ್ರೀ ಸದ್ಗುರು ದತ್ತಪ್ಪಯ್ಯ ಸ್ವಾಮಿಗಳು ವಹಿಸಲಿದ್ದಾರೆ ಸರ್ವರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಲು ಪಂಡಿತ ಜಯಂತ ಬಂಡು ದೇಸಾಯಿ ಹಾಗೂ ಪಂ, ವಿನಾಯಕ ಸಿದ್ದಾಂತಿ ಕೋರಿದ್ದಾರೆ.
ಕಾರ್ಯಕ್ರಮದಲ್ಲಿ ನೂರಾರು ಪಂಡಿತರು , ಮಹಿಳೆಯರು , ಗೃಹಸ್ಥರು ಹಾಗೂ ಭಕ್ತಾದಿಗಳು ಪಾಲ್ಗೋಂಡಿದ್ದರು.
Comments are closed.