ಆಗು ನೀ ಅನಿಕೇತನ ಸಂಸ್ಥೆಯಿಂದ – ವಿದ್ಯಾರ್ಥಿಗಳಿಗೆ ಜಾಮೆಟ್ರಿ ಬಾಕ್ಸ್ 

Get real time updates directly on you device, subscribe now.

ಕೊಪ್ಪಳ- ೦೧-  ತಾಲೂಕಿನ ಬಿಸರಹಳ್ಳಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಆಗು ನೀ ಅನಿಕೇತನ ಸಂಸ್ಥೆಯಿಂದ ಹಾಗೂ ಪ್ರತಿಬಿಂಬ ಟ್ರಸ್ಟ್ ಬೆಂಗಳೂರು ಇವರ ಸಹಯೋಗದೊಂದಿಗೆ ಶಿಕ್ಷಣ ಜಾಗೃತಿ ಕಾರ್ಯಕ್ರಮದ ಮೂಲಕ ಜಾಮೆಟ್ರಿ ಬಾಕ್ಸ್ ಗಳನ್ನು ವಿತರಿಸಲಾಯಿತು.
 ಸ್ತ್ರೀ ಜಾಗೃತಿ ಕಾರ್ಯಕ್ರಮದ ಮೂಲಕ ಹದಿಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಗು ನೀ ಅನಿಕೇತನ ಸಂಸ್ಥೆಯ ಸಂಸ್ಥಾಪಕಿ ಧರಣಿ ಬಸವರಾಜ್ ಸಸಿ ಸ್ತ್ರೀಶಕ್ತಿಯ ಬಗ್ಗೆ ಹಾಗೂ ಶಿಕ್ಷಣ ಜಾಗೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯ ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಬಸವರಾಜ್ ಸಸಿ ಇವರು ಭಾಗಿಯಾಗಿ ಮಕ್ಕಳಿಗೆ ಜಾಮೆಟ್ರಿ ಬಾಕ್ಸ್ ವಿತರಣೆ ಹಾಗೂ ಸ್ಯಾನಿಟರಿ ಪ್ಯಾಡ್ ವಿತರಣೆಯನ್ನು ಯಶಸ್ವಿಗೊಳಿಸಿದರು

Get real time updates directly on you device, subscribe now.

Comments are closed.

error: Content is protected !!