ಬಡವರ ಪಾಲಿನ ಸಂಜೀವಿನಿ ವಜೀರ್ ಅಲಿ ಗೋನಾಳ ; ಕರಿಬಸವ ಶಿವಾಚಾರ್ಯರು ಮಹಾಸ್ವಾಮಿ

Get real time updates directly on you device, subscribe now.

31 ಜೋಡಿ ಮದುವೆ ಮಾಡುವ ಮೂಲಕ ಬಡವರ ಪಾಲಿನ ಸಂಜೀವಿನಿಯಾಗಿದ್ದಾರೆ ವಜೀರ್ ಅಲಿ ಗೋನಾಳ ಅವರು ; ಕರಿಬಸವ

ಶಿವಾಚಾರ್ಯರು ಮಹಾಸ್ವಾಮಿಗಳು ಹೇಳಿಕೆ
ಕುಷ್ಟಗಿ.ನ.29; ಸರ್ವಧರ್ಮ ಉಚಿತ ಸಾಮೂಹಿಕ ವಿವಾಹದಲ್ಲಿ ಬಡವರ ಮದುವೆ ನಡೆಯುತ್ತಿಲ್ಲ, ಭಾಗ್ಯವಂತರ ಮದುವೆ ನಡೆಯುತ್ತಿದೆ ನೀವು ಎಲ್ಲರೂ ಭಾಗ್ಯವಂತರು ಎಂದು ಮದ್ದಾನಿಹಿರೇಮಠದ ಕರಿಬಸವ ಶಿವಾಚಾರ್ಯರು ಮಹಾಸ್ವಾಮಿಗಳು ಹೇಳಿದರು.
ಶ್ರೀಬನ್ನಿ ಮಹಾಂಕಾಳಿದೇವಿಯ ಮಹಾಭಿಷೇಕದ ಪ್ರಯುಕ್ತ ಭಗತ್ ಸಿಂಗ್ ಸಂಸ್ಥೆ ಹಾಗೂ ಬನ್ನಿ ಮಹಾಂಕಾಳಿ ಸೇವಾ ಸಮಿತಿ ವತಿಯಿಂದ ಸರ್ವ ಧರ್ಮ ಶ್ರೀಗಳ ಸಾನಿಧ್ಯದಲ್ಲಿ ಇಲ್ಲಿನ ಸಂತೆ ಬಜಾರ್ ನ ಬನ್ನಿ ಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ಬುಧವಾರ ಮಧ್ಯಾಹ್ನ ಏರ್ಪಡಿಸಿದ್ದ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿಶ್ವಾಸ ಹಾಗೂ ಶೃದ್ಧಾ ಭಕ್ತಿಯಿಂದ ಸಮಾಜದಲ್ಲಿ ನಡೆದುಕೊಳ್ಳವ ಮೂಲಕ ನಿಮ್ಮ ಬದುಕನ್ನು ಬಂಗಾರಮಯವಾಗಿಸಿಕೊಳ್ಳಬೇಕು ಎಂದು ನೂತನ ವಧುವರರಿಗೆ ಸಲಹೆ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಬರಗಾಲ ಇದೆ ಇತಂಹ ಪರಿಸ್ಥಿತಿಯಲ್ಲಿ ವಜೀರ್ ಅಲಿ ಗೋನಾಳ ಅವರು ಸರ್ವಧರ್ಮ ಸಾಮೂಹಿಕ ವಿವಾಹ ಏರ್ಪಡಿಸಿ 31 ಜೋಡಿ ಮದುವೆ ಮಾಡುವ ಮೂಲಕ ಬಡವರ ಪಾಲಿನ ಸಂಜೀವಿನಿಯಾಗಿದ್ದಾರೆ ಎಂದು ಬಣ್ಣಿಸಿದರು.
ನಿಡಶೇಸಿ ಪಂಶ್ಚಕಂತಿ ಹಿರೇಮಠದ ವಿಶ್ವರಾಧ್ಯ ದೇವರು ಆರ್ಶಿವಚನ ನೀಡಿದರು.
ಈ ಸಂದರ್ಭದಲ್ಲಿ ಮಲ್ಲಣ್ಣ ಪಲ್ಲೇದ, ಉಮೇಶ ಮಂಗಳೂರು, ಮಲ್ಲಿಕಾರ್ಜುನ ಮಸೂತಿ, ಪ್ರಭುಶಂಕರಗೌಡ ಪಾಟೀಲ್, ನಟರಾಜ ಸೋನಾರ, ಪುರಸಭೆ ಸದಸ್ಯ ಅಂಬಣ್ಣ ಭಜಂತ್ರಿ, ಸುಭಾನಿಸಾಬ ಗೋನಾಳ, ಕಾಸಿಂಬೀ ಬಾಬುಸಾಬ ಗೋನಾಳ ಹಾಗೂ ಇನ್ನಿತರೆ ಗಣ್ಯರು ಪಾಲ್ಗೊಂಡಿದ್ದರು.
ಬೆಳಿಗ್ಗೆ ಶ್ರೀಬನ್ನಿ ಮಹಾಂಕಾಳಿದೇವಿಯ ಮಹಾಭಿಷಕ ನಂತರ 31 ಜೋಡಿಗಳ ಮೆರವಣಿಗೆ ಮಂಗಲವಾದ್ಯಗಳೊಂದಿಗೆ ನಡೆಯಿತು.
ನಂತರ ವಿಷ್ಣುತೀರ್ಥ ನಗರದಲ್ಲಿ ಭವ್ಯವಾದ ವೇದಿಕೆಯಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಬೆಂಗಳೂರಿನ ನಮ್ಮನೆ ಸುಮ್ಮನೆ ನಿರಾಶಿತರ ಆಶ್ರಮದ ಅಧ್ಯಕ್ಷೆ ಡಾ.ನಕ್ಷತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎಂ.ಗುಡದೂರಿನ ನೀಲಕಂಠ ತಾತನವರು, ವಿರಕ್ತಮಠ ಬಿಜಕಲ್ ನ ಶಿವಲಿಂಗ ಸ್ವಾಮಿಗಳು, ಚಳಗೇರಿ ಹಿರಮಠದ ವೀರಸಂಗಮೇಶ್ವರ ಸ್ವಾಮಿಗಳು, ಅಂಕಲಿಮಠದ, ವೀರಭದ್ರ ಸ್ವಾಮಿಗಳು, ಅನ್ನದಾನೇಶ್ವರ ಶಾಖಾಮಠಗಳ ಉಸ್ತುವಾರಿ ಮಹಾದೇವ ಮಹಾಸ್ವಾಮಿಗಳು, ಮುದೇನೂರ ಮರಳುಸಿದ್ದ ದೇವರು, ಬಾಗಲಕೋಟೆ ಸಿದ್ರಾಫೌಂಡೇಶನ್ ಮೌಲಾನಾ ಮುಪ್ತಿ ಅಹ್ಮದ್ ಫಾರುಕ್ ನೂರಾನಿ ಸಖಾಫೀ ದಿವ್ಯ ಸಾನಿಧ್ಯವಹಿಸಿದ್ದರು.
ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಭಗತ್ ಸಿಂಗ್ ಸಂಸ್ಥೆ ಅಧ್ಯಕ್ಷ ವಜೀರ್ ಅಲಿ .ಬಿ. ಗೋನಾಳ, ಬೆಂಗಳೂರಿನ ಚಿತ್ರ ನಿರ್ಮಾಪಕ ಸುರೇಶಗೌಡ್ರು, ಉದ್ಯಮಿ ಕೆ.ಕೆ ಪೂಣ್ರೇಶ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಕೆ.ಎಸ್ ಆಸ್ಪತ್ರೆ ಮುಖ್ಯಸ್ಥ ಬಸವರಾಜ ಕೆ ಹಾಗೂ ಇನ್ನಿತರೆ ಗಣ್ಯ ಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಜೆ ವಿಷ್ಣುತೀರ್ಥ ನಗರದಲ್ಲಿ ಭವ್ಯ ರಂಗ ವೇದಿಕೆಯಲ್ಲಿ ಬೆಂಗಳೂರಿನ ವಿ.ಬಿ ಮೂಸ್ಯಿಕಲ್ ಇವೆಂಟ್ಸ್ ಹಾಗೂ ಡಾ.ಕೆ ಜಯಲಕ್ಷ್ಮಿ ಜಿತೇಂದ್ರ ಕೈಲಾಸ ಕಲಾಧರ ಕಲ್ಚರಲ್ ಮತ್ತು ಚಾರಾಟೇಬಲ್ ಟ್ರಸ್ಟ್ ಇವರ ವತಿಯಿಂದ ಸಂಗೀತ ರಸ ಮಂಜರಿ ಮತ್ತು ಶಿರಗುಂಪಿ ಗ್ರಾಮದ ನಂದಿನಿ ಅಗಸರ 2023 ಓಲಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಗೌರವಿಸಿ ಸನ್ಮಾನಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: