ಕೊಪ್ಪಳದ ಖ್ಯಾತ ವೈದ್ಯ ಡಾ.ಎಂ.ಬಿ.ರಾಂಪೂರ ಇನ್ನಿಲ್ಲ
ಕೊಪ್ಪಳ : ನಗರದ ಖ್ಯಾತ ಹಿರಿಯ ವೈದ್ಯ ಡಾ.ಎಂ.ಬಿ.ರಾಂಪೂರ ನಿಧನರಾಗಿದ್ದಾರೆ. ಅಲ್ಪಕಾಲದ ಅಸ್ವಸ್ಥತೆ ಯಿಂದ ಚಿಕಿತ್ಸೆಗೆ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಕೊಪ್ಪಳ ಭಾಗದಲ್ಲಿ ರಾಂಪೂರಿ ಡಾಕ್ಟರ್ ಎಂದೇ ಜನಪ್ರಿಯರಾಗಿದ್ದ ಡಾ.ರಾಂಪೂರ್ ಸಮಾಜಸೇವೆಯಿಂದಲೂ ಗುರುತಿಸಿಕೊಂಡಿದ್ದರು. ಇವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಡಾ.ಎಂ.ಬಿ.ರಾಮಪೂರ ನಿಧನಕ್ಕೆ ಕೊಪ್ಪಳ ಜನತೆ ಕಂಬನಿ ಮಿಡಿದಿದ್ದಾರೆ
Comments are closed.