ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿದ ಭೂಮಿಕಾ ಓದಿನ ಜೊತೆಗೆ ಕ್ರೀಡೆಗೂ ಒತ್ತು ನೀಡಲು ಕರೆ
ಬೆಂಗಳೂರು:
ಓದಿನ ಜೊತೆಗೆ ಕ್ರೀಡೆಗೂ ಹೆಚ್ಚಿನ ಒತ್ತು ನೀಡಿ, ಸಾಧಕರಾಗುವತ್ತ ಹೆಜ್ಜೆ ಇಡುವಂತೆ ನೆಟ್ ಬಾಲ್ ರಾಷ್ಟ್ರೀಯ ಆಟಗಾರ್ತಿ ಕು.ಭೂಮಿಕಾ ಎಸ್ ತಗಡೂರು ಕರೆ ನೀಡಿದರು.
ಬೆಂಗಳೂರಿನ ಹೊಸಕೆರೆಹಳ್ಳಿ ಲಿಟ್ಟಲೀ ಪ್ಲವರ್ ಪಬ್ಲಿಕ್ ಸ್ಕೂಲ್‌ನಲ್ಲಿ ಕನ್ನಡ ರಾಜ್ಯೋತ್ಸವ ಸಲುವಾಗಿ ಏರ್ಪಡಿಸಿದ್ದ 30ನೇ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಚಿಕ್ಕಂದಿನಲ್ಲಿಯೇ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಲು ಪೋಷಕರು ಪ್ರೋತ್ಸಾಹ ನೀಡಬೇಕು. ವಿದ್ಯಾಸಂಸ್ಥೆಗಳು ಈ ನಿಟ್ಟಿನಲ್ಲಿ ಸಹಕಾರ ನೀಡಿದರೆ, ವಿದ್ಯಾಥಿಗಳಿಗೆ ಮುಂದೆ ಸಾಧನೆ ಮಾಡಲು ಅವಕಾಶವನ್ನು ಸೃಷ್ಟಿ ಮಾಡಿದಂತಾಗುತ್ತದೆ ಎಂದರು.
ಯಾವುದೂ ಅಸಾಧ್ಯವಾದದ್ದು ಅಲ್ಲ. ಇಚ್ಛಾಶಕ್ತಿ ಮತ್ತು ಗುರಿ ಇದ್ದರೆ ಎಲ್ಲವನ್ನು ಸಾಧಿಸಬಹುದು. ಪ್ರತಿ ಹಂತದಲ್ಲಿಯೂ ಪೋಷಕರು ಮತ್ತು ಸಂಸ್ಥೆಗಳ ಪ್ರೋತ್ಸಾಹವೇ ಬಹಳ ಮುಖ್ಯ ಎಂದರು.
ಸಂಸ್ಥೆಯ ಸಂಸ್ಥಾಪಕ ಇಕ್ಬಾಲ್ ಅಹಮದ್, ಆಡಳಿತಾಧಿಕಾರಿ ತನ್‌ಈರ್ ಅಹಮದ್, ಪ್ರಾಂಶುಪಾಲೆ ಗಾಯಿತ್ರಿದೇವಿ ಮತ್ತಿತರರು ಹಾಜರಿದ್ದರು
Comments are closed.