ಅತಿಥಿ ಉಪನ್ಯಾಸಕರ ಧರಣಿಗೆ ಬೆಂಬಲ: ಭಾರಧ್ವಾಜ್
ಗಂಗಾವತಿ: ಕರ್ನಾಟಕ ರಾಜ್ಯದಲ್ಲಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಭಾರಧ್ವಾಜ್‌ರ ಬೆಂಬಲ. ೫ನೇ ದಿನದ ಧರಣಿ ಸ್ಥಳ ಕೊಲ್ಲಿ ನಾಗೇಶ್ವರ ಮಹಾವಿದ್ಯಾಯಕ್ಕೆ ಭೇಟಿ ನೀಡಿ ಕ್ರಾಂತಿಚಕ್ರ ಬಳಗದಿಂದ ಧರಣಿಗೆ ಬೆಂಬಲ ಸೂಚಿಸಿದ್ದಾರೆ.
ಮೂರು ತಿಂಗಳುಗಳಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಹೇಳಲಾಗದೇ ಅತಿಥಿ ಉಪನ್ಯಾಸಕರು ತೊಂದರೆಗೆ ಈಡಾಗಿದ್ದಾರೆ. ಕೂಡಲೇ ಅತಿಥಿ ಉಪನ್ಯಾಸಕರ ಸಂಘದ ಮುಖಂಡರೊಂದಿಗೆ ಸರ್ಕಾರ ಸಭೆ ನಡೆಸಿ, ಕೂಡಲೇ ವಿದ್ಯಾರ್ಥಿಗಳಿಗೆ ನ್ಯಾಯಕೊಡಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ವಿನಂತಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೂಡಲೇ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಶೀಲಿಸಿ ಖಾಯಂಗೊಳಿಸುವ ನಿಟ್ಟಿನಲ್ಲಿ ಕ್ರಮಜರುಗಿಸಬೇಕೆಂದು ಕ್ರಾಂತಿಚಕ್ರ ಬಳಗ ಒತ್ತಾಯಿಸುತ್ತದೆ. ಇಲ್ಲದಿದ್ದಲ್ಲಿ ರಾಜ್ಯಾಧ್ಯಂತ ಉಗ್ರ ಹೋರಾಟ ನಡೆಯುತ್ತವೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
Comments are closed.