ನೀಮಾ ಖಜಾಂಚಿಯಾಗಿ ಡಾ. ಶ್ರೀನಿವಾಸ
ಕೊಪ್ಪಳ : ದಾವಣಗೆರೆಯಲ್ಲಿ ನಡೆದ ನ್ಯಾಷನಲ್ ಇಂಟಿಗ್ರೆಟೆಡ್ ಮೆಡಿಕಲ್ ಅಸೋಸಿಯೇಷನ್ ಕರ್ನಾಟಕ ಶಾಖೆಯ (NIMA-KSB) 2022-24 ಸಾಲಿನ ಪದಾಧಿಕಾರಿ ಚುನಾವಣೆಯಲ್ಲಿ ಕೊಪ್ಪಳದ ವೈದ್ಯರಾದ ಡಾಕ್ಟರ್ ಶ್ರೀನಿವಾಸ ಹ್ಯಾಟಿ ಅವರು ಖಜಾಂಚಿಯಾಗಿ ಭರ್ಜರಿ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ.
ಖಜಾಂಚಿ ಹುದ್ದೆಗೆ ನಡೆದ ಚುನಾವಣೆಯಲ್ಲಿ 84 ಮತಗಳ ಪೈಕಿ ಡಾ. ಶ್ರೀನಿವಾಸ ಹ್ಯಾಟಿ ಅವರು 51 ಮತಗಳನ್ನು ಪಡೆದರೇ ಇವರ ಪ್ರತಿಸ್ಪರ್ಧೆ ಡಾ. ವಿಕ್ರಮ ಶಿವಪ್ಪ ಅವರು 23 ಮತಗಳನ್ನ ಪಡೆದು, ಪರಾಭವಗೊಂಡರು. ನೀಮಾ ಸಂಘಟನೆಯ ರಾಜ್ಯಶಾಖೆಗೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆದ ಹಿರಿಮೆ ಡಾ. ಶ್ರೀನಿವಾಸ ಹ್ಯಾಟಿ ಅವರದು.
NIMA ಸರ್ವ ಸದಸ್ಯರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ ಕೊಪ್ಪಳದ ಸರ್ವ ನಿರ್ದೇಶಕರು ಗೆಲುವು ಸಾಧಿಸಿರುವ ಡಾ. ಶ್ರೀನಿವಾಸ ಹ್ಯಾಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
26ಕೆಪಿಎಲ್21 ನೀಮಾ ಸಂಘಟನೆ ರಾಜ್ಯ ಸಮಿತಿಗೆ ಡಾ. ಶ್ರೀನಿವಾಸ ಹ್ಯಾಟಿ ಅವರು ಆಯ್ಕೆಯಾಗಿದ್ದು, ಪ್ರಮಾಣ ಪತ್ರವನ್ನು ಪಡೆಯುತ್ತಿರುವುದು.
Comments are closed.