ಸಂವಿಧಾನವನ್ನು ಕನಿಷ್ಠವಾದರೂ ತಿಳಿದುಕೊಂಡರೆ ಸ್ವಾತಂತ್ರ್ಯವಾಗಿ ಬದುಕಲು ಸಾಧ್ಯ – ಎಸ್.ಎ. ಗಫಾರ್.

Get real time updates directly on you device, subscribe now.

      ಕೊಪ್ಪಳ : ಸಂವಿಧಾನವನ್ನು ಕನಿಷ್ಠವಾದರೂ ತಿಳಿದುಕೊಂಡರೆ ಸ್ವಾತಂತ್ರ್ಯವಾಗಿ ಬದುಕಲು ಸಾಧ್ಯ ಎಂದು ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಹೇಳಿದರು.
            ನಗರದ ತಾಲೂಕಾ ಕ್ರೀಡಾಂಗಣದ ಸಭಾಂಗಣದಲ್ಲಿ ರವಿವಾರ ಜಿಲ್ಲಾ ಭ್ರಾತೃತ್ವ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ. ನಗರ.ಬಡಾವಣೆ.ಗ್ರಾಮ ಘಟಕಗಳ ಜಂಟಿಯಾಗಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡಿ ಸಂವಿಧಾನದ ಆಶಯದಂತೆ ಎಲ್ಲಾ ಜಾತಿ. ಜನಾಂಗದವರೊಂದಿಗೆ ಒಂದುಗೂಡಿ ಪ್ರೀತಿ ಸೌಹಾರ್ದತೆಯಿಂದ ನೆಮ್ಮದಿಯಿಂದ ಬದುಕುವುದು. ನಮ್ಮ ಹಕ್ಕುಗಳನ್ನು ತಿಳಿದುಕೊಂಡರೆ ಯಾರದೋ ಅಧೀನದಲ್ಲಿ ಜೀವಿಸದೇ. ಸ್ವ ಇಚ್ಛೆಯಂತೆ ಸ್ವತಂತ್ರ್ಯವಾಗಿ ಬದುಕಬಹುದು. ಸಂವಿಧಾನವನ್ನು ತಿಳಿದುಕೊಂಡವರು ಎಲ್ಲರಿಗೂ ತಿಳಿಸುವಂತಾಗಬೇಕು. ನಮ್ಮ ಜಿಲ್ಲಾ ಭ್ರಾತೃತ್ವ ಸಮಿತಿ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಬಡಾವಣೆಗಳಲ್ಲಿ ಮತ್ತು ಹಳ್ಳಿಗಳಲ್ಲಿ ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸುತ್ತೇವೆ. ತಿಳಿದವರು ಉಳಿದವರಿಗೂ ಸಂವಿಧಾನದ ಮಹತ್ವ ತಿಳಿಸುವುದರಿಂದ ಸಾರ್ಥಕವಾಗುತ್ತದೆ ಎಂದು ಹೇಳಿದರು.
       ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಯೋಜಕಿ ಶ್ರೀಮತಿ ಸೌಭಾಗ್ಯ ದೊಡ್ಡಮನಿ ಮಾತನಾಡಿ ಸಂವಿಧಾನದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನತೆ ಇದೆ. ಇಬ್ಬರು ಸಮನಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಪುರುಷರಿಗೆ ಹೆಚ್ಚು ಮತ್ತು ಮಹಿಳೆಯರಿಗೆ ಕಡಿಮೆ ವೇತನ ಕೊಡಲಾಗುತ್ತಿದೆ. ಇಂತಹ ತಾರತಮ್ಯ ಹೋಗಲಾಡಿಸಲು ಸಂವಿಧಾನ ತಿಳುವಳಿಕೆ ಮುಖ್ಯವಾಗಿದೆ ಎಂದು ಹೇಳಿದರು.
      ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ತಾಲೂಕಾ ಸಂಚಾಲಕ ನೂರ್ ಸಾಬ್ ಹೊಸಮನಿ ಮಾತನಾಡಿ ಸಂವಿಧಾನವನ್ನು ಸರ್ವರೂ ತಿಳಿದುಕೊಳ್ಳಬೇಕು. ಸಂದರ್ಭ ಬಂದರೆ ಸಂವಿಧಾನ ಉಳಿಸಿಕೊಳ್ಳಲು ಎಲ್ಲರೂ ಒಕ್ಕಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು.
        ಕಾರ್ಯಕ್ರಮದಲ್ಲಿ ಕಟ್ಟಡ ಹಾಗೂ ಇತರೆ ಕಾರ್ಮಿಕರಿಗೆ ಭಾಗ್ಯನಗರದ ನವನಗರಿನ ಇರುವಾತನು ಚರ್ಚಿನ ಫಾದರ್ ಹಾಗೂ ಭ್ರಾತೃತ್ವ ಸಮಿತಿಯ ಜಿಲ್ಲಾ ಮುಖಂಡ ಚನ್ನಬಸಪ್ಪ ಅಪ್ಪಣ್ಣವರ್ ಅವರು ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸುವ ಮೂಲಕ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
      ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಯೋಜಕಿ ಶ್ರೀಮತಿ ಶಶಿಕಲಾ ದೇವಮ್ಮ ವಂದಿಸಿದರು.
      ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ಜಿಲ್ಲಾ ಮುಖಂಡರಾದ ಹುಲುಗಪ್ಪ ಅಕ್ಕಿ ರೊಟ್ಟಿ. ಎ.ಎಲ್. ತಿಮ್ಮಣ್ಣ.ನಗರ ಸಂಚಾಲಕ ಜಾಫರ್ ಕುರಿ ಮೇಸ್ತ್ರಿ. ಜಿಲ್ಲಾ ಉಪಾಧ್ಯಕ್ಷ ನಿಂಗಜ್ಜ ನಾಯಕ್ ಟಣಕನಕಲ್. ಸಿದ್ದಪ್ಪ ನಾಯಕ್. ಕವಲೂರ ಗ್ರಾಮ ಘಟಕದ ಶಮಶುದ್ದೀನ್ ಮಕಾಂದಾರ್. ವದಗನಾಳ ಗ್ರಾಮ ಘಟಕದ ಪ್ರಭು ಮುಧೋಳ್. ಭಾಗ್ಯನಗರದ ಮರಿಯಮ್ಮ ದೇವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ಕಾರ್ಮಿಕರ ಹಿತರಕ್ಷಣಾ ಸಂಘ.ರಿ.(ಎಐಟಿಯುಸಿ ಸಂಯೋಜಿತ) ಅಧ್ಯಕ್ಷ ಮೌಲಾ ಸಾಬ್ ಕಪಾಲಿ. ವಡ್ಡರ್ ಹಟ್ಟಿ ಗ್ರಾಮ ಘಟಕದ ಯಮನೂರಪ್ಪ. ದೇವರಾಜ್ ಹಕಾರಿ. ಹೊಸ ಕನಕಪೂರ ಗ್ರಾಮ ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ರೇಣವ್ವ ಮಲ್ಲಪ್ಪ ಅಡ್ಡದೂಲಿ. ಜಿಲ್ಲಾ ಮುಖಂಡ ಹುಲುಗಪ್ಪ ಅಕ್ಕಿ ರೊಟ್ಟಿ. ಎ.ಎಲ್. ತಿಮ್ಮಣ್ಣ ಮುಂತಾದವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: