ತೆಲಂಗಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಜೆಡ್.ಎಂ.ಜಮೀರ್ ಅಹ್ಮದ್‌ಖಾನ್ ಪ್ರಚಾರ

Get real time updates directly on you device, subscribe now.


ಕೊಪ್ಪಳ : ತೆಲಂಗಾಣ ರಾಜ್ಯದ ಸಿಕ್ರಾಂಬಾದ್ ಕಂಟೋನ್‌ಮೆಂಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಜಿ.ವಿ.ವೇನಿಲಾ ಪರ ವಸತಿ ಸಚಿವ ಜೆಡ್.ಎಂ.ಜಮೀರ್ ಅಹ್ಮದ್‌ಖಾನ್ ಭರ್ಜರಿ ಪ್ರಚಾರ ಕೈಕೊಂಡರು.
ವಸತಿ ಸಚಿವ ಜೆಡ್.ಎಂ.ಜಮೀರ್ ಅಹ್ಮದ್‌ಖಾನ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜನತೆಗೆ ಜನಪರ ಆಡಳಿತ ನೀಡುತ್ತಿದ್ದು,ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದ ಜನತೆಯ ಹಿತ ಕಾಯುವ ಪಕ್ಷ, ತೆಲಂಗಾಣ ರಾಜ್ಯದಲ್ಲಿ ಜನತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬಾರಿ ಬಹುಮತದೊಂದಿಗೆ ಅಧಿಕಾರಕ್ಕೆ ತರುವಂತೆ ಮತದಾರರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ರಾಮಲಿಂಗರಡ್ಡಿ,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ ಅಹ್ಮದ್, ಶಾಸಕರಾದ ನಯನ ಮೋಟಮ್ಮ, ಮಾಜಿ ಮೇಯರ್ ಪಿ.ಆರ್.ರಮೇಶ, ಕೊಪ್ಪಳದ ಕಾಂಗ್ರೆಸ್ ಪಕ್ಷದ ರಾಜ್ಯ ಸಂಯೋಜಕ ಹಾಗೂ ಹಿರಿಯ ಮುಖಂಡ ಕೆ.ಎಂ.ಸೈಯದ್, ಕಾಂಗ್ರೆಸ್ ಪಕ್ಷದ ಮುಖಂಡ ಅಯೂಬ್‌ಖಾನ್ ಸೇರಿದಂತೆ ಸಿಕ್ರಾಂಬಾದ್ ಕಂಟೋನ್‌ಮೆಂಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: