ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣ: ಸ್ಥಳ ಪಂಚನಾಮೆ
ಕೊಪ್ಪಳ, ಮಾರ್ಚ್:೦೮: ವಿದೇಶಿ ಮಹಿಳೆ ಸೇರಿ ಇಬ್ಬರು ಮಹಿಲೆಯರ ಮೇಲೆ ಅತ್ಯಾಚಾರ ನಡೆಸಿ ಒಬ್ಬನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ ಇಬ್ಬರು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿ ತನಿಖೆ ನಡೆಸುತಿದ್ದಾರೆ.
ಗಂಗಾವತಿ ತಾಲೂಕಿನ ಸಾಯಿನಗರದ ನಿವಾಸಿಗಲಾದ ಮಲ್ಲೇಶ್(೨೨) ಮತ್ತು ಚೇತನ್ ಸಾಯಿ ಸಿಳ್ಳೇಕ್ಯಾತರ್(೨೧) ಎಂಬ ಇಬ್ಬರು ಅರೋಪಿಗಳನ್ನು ನಿನ್ನೆ ಬಂಧಿಸಲಾಗಿತ್ತು ಆರೋಪಿಗಳು ತಾವು ಈ ಕೃತ್ಯ ಮಾಡಿರುವುದಾಗಿ ಓಪಿಕೊಂಡಿದ್ದರು ಎಂದು ಎಸ್ ಪಿ ರಾಮ್ ಎಲ್ ಅರಸಿದ್ದಿ ಅವರು ಪತ್ರಿಕಾ ಗೋಷ್ಠಿ ನಡೆಸಿ ಮಾಹಿತಿ ನೀಡಿದ್ದರು.
ತನಿಕೆಯ ಮುಂದು ವರಿದ ಭಾಗವಾಗಿ ಘಟನಾ ಸ್ಥಳಕ್ಕೆ ಪೊಲೀಸರು ಆರೋಪಿಗಳನ್ನು ಕರೆ ತಂದು ತನಿಖೆ ನಡೆಸುತಿದ್ದಾರೆ.
ಇಬ್ಬರು ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣವು ಇಡಿ ದೇಶವನ್ನು ಬೆಚ್ಚಿ ಬೀಳಿಸುವ ಪ್ರಕರಣ ಇದಾಗಿತ್ತು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನವರು ಪೊಲೀಸರಿಗೆ ಸೂಚಿಸಿದ್ದರು.