ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ : ಪೋಲಿಸ್ ತಂಡಕ್ಕೆ ಜಯ

Get real time updates directly on you device, subscribe now.


ಕೊಪ್ಪಳ : ಪೋಲಿಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಆಯೋಜಿಸಲಾಗಿದ್ದ ಮಾದ್ಯಮ ಮತ್ತು ಪೋಲಿಸರ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಪೋಲಿಸ್ ತಂಡ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ‌. ಮಾದ್ಯಮದವರೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ಆಯೊಜಿಸಲಾಗಿತ್ತು.‌ಮೊದಲು ನಡೆದ ಕೊಪ್ಪಳ ಮೀಡಿಯಾ ಕ್ಲಬ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ನಡುವಿನ ಪಂದ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕೆಯುಡಬ್ಲುಜೆ ತಂಡ ೧೨ ಓವರ್ ಗಳಲ್ಲಿ ೧೦೫ ರನ್ ಪೇರಿಸಿತು. ನಂತರ ಬ್ಯಾಟಿಂಗ್ ಮಾಡಿದ ಮೀಡಿಯಾ ಕ್ಲಬ್ ತಂಡ ೧೨ ಓವರ್ ಗಳಲ್ಲಿ ನಿಗದಿತ ಮೊತ್ತವನ್ನು ತಲುಪುವಲ್ಲಿ ವಿಫಲವಾಯಿತು. ಎರಡನೇ ಪಂದ್ಯ ಜಿಲ್ಲಾ ಪೋಲಿಸ್ ತಂಡ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಕಾರ್ಯನಿರತ ಪತ್ರಕರ್ತರ ಸಂಘ ೧೨ ಓವರ್ ಗಳಲ್ಲಿ ೭೫ ರನ್ ಪೇರಿಸಿತು. ೭೫ ರನ್ ಗಳ ಮೊತ್ತವನ್ನು ಬೆನ್ನಟ್ಟಿದ ಪೋಲಿಸ್ ತಂಡ ಇನ್ನೂ ಒಂದು ಓವರದ ಬಾಕಿ ಇರುವಂತೆಯೇ ಜಯ ಸಾಧಿಸಿತು.
ಪೋಲಿಸ್ ತಂಡದೊಂದಿಗೆ ಜಿಲ್ಲಾಧಿಕಾರಿ ನಳಿನ್ ಅತುಲ್ ಭಾಗೀಯಾಗಿ ಬೌಲಿಂಗ್ ಮೂಲಕ ಗಮನ ಸೆಳೆದರು.
ಈ ಸಂದರ್ಭದಲ್ಲಿ ಎಸ್ಪಿ ಯಶೋದಾ ವಂಟಿಗೋಡಿ, ಡಿಎಸ್ಪಿ ಶರಣಪ್ಪ ಸುಬೇದಾರ , ಜಿಲ್ಲೆಯ ಹಿರಿಯ ಪೋಲಿಸ್ ಅಧಿಕಾರಿಗಳು, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಸಾಧಿಕ್ ಅಲಿ, ಎಚ್.ಎಸ್. ಹರೀಶ್, ಜಿಲ್ಲಾಧ್ಯಕ್ಷ ಬಸವರಾಜ್ ಗುಡ್ಲಾನೂರ ಸೇರಿದಂತೆ ಜಿಲ್ಲೆಯ ಹಿರಿಯ ಕಿರಿಯ ಪತ್ರಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದು ಆಟಗಾರರಿಗೆ ಪ್ರೋತ್ಸಾಹಿಸಿದ್ದರು. ಮೀಡಿಯಾ ಕ್ಲಬ್ ನ ಟೀಂನ್ನು ಪ್ರಮೋದ, ಕಾರ್ಯನಿರತ ಪತ್ರಕರ್ತರ ಸಂಘದ ಟೀಮ್ ನ್ನು ಸಿರಾಜ್ ಬಿಸರಳ್ಳಿ ಹಾಗೂ ಪೋಲಿಸ್ ತಂಡವನ್ನು ಮಲ್ಲನಗೌಡರ ಮುನ್ನಡೆಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: