ಯೇಸು ಸ್ವಾಮಿಯವರು ನಿನ್ನ ನೆರೆ ಹೊರೆಯವರನ್ನು ನಿನ್ನಂತೆಯೇ ಪ್ರೀತಿಸು ಎಂದು ಬೋಧಿಸಿದ್ದಾರೆ- ಚನ್ನಬಸಪ್ಪ ಅಪ್ಪಣ್ಣವರ್

Get real time updates directly on you device, subscribe now.

ಯೇಸು ಸ್ವಾಮಿಯವರು ನಿನ್ನ ನೆರೆ ಹೊರೆಯವರನ್ನು ನಿನ್ನಂತೆಯೇ ಪ್ರೀತಿಸು ಎಂದು ಬೋಧಿಸಿದ್ದಾರೆ- ಚನ್ನಬಸಪ್ಪ ಅಪ್ಪಣ್ಣವರ್

ಕೊಪ್ಪಳ : ದೇವರಲ್ಲಿ ಭಯ. ಭಕ್ತಿ ಇರುವವರಿಗೆ ದೇವರು ಒಳ್ಳೆಯ ಆರೋಗ್ಯ. ಸಮಾಧಾನ. ನೆಮ್ಮದಿ ನೀಡುತ್ತಾನೆ. ಯೇಸು ಸ್ವಾಮಿಯವರು ನಿನ್ನ ನೆರೆ ಹೊರೆಯವರನ್ನು ನಿನ್ನಂತೆಯೇ ಪ್ರೀತಿಸು ಎಂದು ಬೋಧಿಸಿದ್ದಾರೆ ಎಂದು ಭಾಗ್ಯನಗರ ಬಳಿಯ ನವ ನಗರದ ಇರುವಾತನು ಚರ್ಚಿನ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಹೇಳಿದರು.
ಭಾಗ್ಯನಗರದ ನವನಗರದಲ್ಲಿ ಇರುವಾತನು ಚರ್ಚಿನ ದ್ವಿತೀಯ ವಾರ್ಷಿಕೋತ್ಸವದ ಸಂಭ್ರಮದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಾದರ್ ಚನ್ನಬಸಪ್ಪ ಅಪ್ಪಣ್ಣವರ್ ಮುಂದುವರೆದು ಮಾತನಾಡಿ ನಿಮ್ಮ ಪೂರ್ಣ ಪ್ರಾಣ ಬುದ್ಧಿಯಿಂದ ದೇವರನ್ನು ಆರಾಧಿಸು ಆಗ ನಿಮಗೆ ಸ್ವರ್ಗದಲ್ಲಿ ಸ್ಥಳ ಇದೆ ಎಂದು ವಿವರಿಸಿದರು.
ಇರುವಾತನು ಚರ್ಚಿನ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಪ್ರಸಂಗಿಕರಾಗಿ ಆಗಮಿಸಿದ್ದ ಬೆಂಗಳೂರಿನ ಫಾದರ ಎ.ವಿ. ಥಾಮಸ್ ಮಾತನಾಡಿ ನೀತಿವಂತರಾಗಿ.ಭಯ. ಭಕ್ತಿಯಿಂದ ಬದುಕನ್ನು ರೂಪಿಸಿಕೊಂಡರೆ ಸ್ವರ್ಗ ಸಿಗುತ್ತದೆ. ಸಹೋದರತ್ವ.ಸ್ನೇಹ. ಭ್ರಾತೃತ್ವ. ಸೌಹಾರ್ದತೆ ಇವುಗಳೊಡನೆ ಸಮಾಜದಲ್ಲಿ ನಾವು ಇಹ ಪರಗಳಲ್ಲಿ ಸಾದುತ್ವವುಳ್ಳವರಾಗಿ. ಕ್ರಿಸ್ತನನ್ನು ಧರಿಸಿಕೊಂಡು ಜೀವಿಸುವ ಜೀವಿತವೇ ಸಾರ್ಥಕವಾದ ಬದಕು ಎಂದು ಹೇಳಿದರು.

ವೇದಿಕೆ ಮೇಲೆ ನಗರದ ಕಲ್ವಾರಿ ಛಾಪೆಲ್ ಚರ್ಚಿನ ಫಾದರ್ ನವನೀತ್ ಕುಮಾರ್. ಬೆಂಗಳೂರಿನ ಆರಾಧನಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ರತ್ನ ಎಸ್. ಐ.ಕುಷ್ಟಗಿಯ ಜೀಸಸ್ ಲವ್ಸ್ ಚರ್ಚಿನ ಫಾದರ್ ತಿಪ್ಪೇಶ್ ನಾಯಕ್.
ಗಂಗಾವತಿ ತಾಲೂಕಾ ಫಾಸ್ಟರ್ ಸಂಘದ ಅಧ್ಯಕ್ಷ ಡಿ.ಆರ್. ಪೀಟರ್. ಅಖಿಲ ಭಾರತ ಕ್ರೈಸ್ತ ಮಹಾ ಸಭಾದ ಜಿಲ್ಲಾಧ್ಯಕ್ಷ ಶಾಮ್ ಸುಂದರ್ ವಕೀಲರು. ಅಖಿಲ ಭಾರತ ಕ್ರೈಸ್ತ ಮಹಾ ಸಭಾದ ಗಂಗಾವತಿ ತಾಲೂಕಾ ಅಧ್ಯಕ್ಷ ಫಾದರ್ ಡೇವಿಡ್. ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ. ಪಾತ್ರೋಟಿ.ಅಖಿಲ ಭಾರತ ಕ್ರೈಸ್ತ ಮಹಾ ಸಭಾದ ಕೊಪ್ಪಳ ತಾಲೂಕಾ ಅಧ್ಯಕ್ಷ ಪ್ರಕಾಶ್ ದೇವರಮನಿ. ಸುಶೀಲ್ ಫೌಂಡೇಶನ್ ಜಿಲ್ಲಾ ಸಂಯೋಜಕ ವೀರೇಶ್ ಎಸ್. ತಳಕಲ್. ಗವಿಸಿದ್ದಪ್ಪ ಹಲಗಿ. ಇರುವಾತನು ಚರ್ಚಿನ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಇರುವಾತನು ಚರ್ಚ ಸಮಿತಿಯ ಸದಸ್ಯ ರಾಘು ಮದಕಟ್ಟಿ ಸ್ವಾಗತಿಸಿದರು. ಹನುಮಂತ ಬಡಿಗೇರ ಕಿನ್ನಾಳ ನಿರೂಪಿಸಿದರು. ಇರುವಾತನು ಚರ್ಚಿನ ಮಹಿಳಾ ಪ್ರತಿನಿಧಿ ಶ್ರೀಮತಿ ರೇಷ್ಮಾ ಸಿ.ಅಪ್ಪಣ್ಣವರ್ ವಂದಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: