ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟ

Get real time updates directly on you device, subscribe now.

ಜಿಲ್ಲಾಧಿಕಾರಿ ನಲಿನ್ ಅತುಲ್
 ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ನವೆಂಬರ್ 23ರ ಗುರುವಾರದಂದು ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
ಕರಡು ಮತದಾರರ ಪಟ್ಟಿಗಳನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ, ಸಹಾಯಕ ಆಯುಕ್ತರು, ಕೊಪ್ಪಳ ಮತ್ತು ಜಿಲ್ಲೆಯ ಎಲ್ಲಾ ತಹಶೀಲ್ದಾರರ ಕಛೇರಿಗಳಲ್ಲಿ ಮತ್ತು ಜಿಲ್ಲೆಯ ಜಾಲತಾಣ:  koppal.nic.in     ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಪರಿಶೀಲಿಸಿಕೊಳ್ಳಬಹುದು.
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಅಥವಾ ತೆಗೆದುಹಾಕಲು ಡಿಸೆಂಬರ್ 09 ರೊಳಗಾಗಿ ಸಂಬAಧಪಟ್ಟ ತಾಲ್ಲೂಕು ತಹಶೀಲ್ದಾರರ ಕಛೇರಿಗಳಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಬಹುದು.
ಕೊಪ್ಪಳ ಜಿಲ್ಲೆಯ ಪದವೀಧರ ಮತದಾರರ ವಿವರಗಳು:
ಜಿಲ್ಲೆಯ ಕುಷ್ಟಗಿ ತಾಲ್ಲೂಕಿನಲ್ಲಿ 5 ಮತಗಟ್ಟೆಗಳಿದ್ದು, 1442 ಪುರುಷರು ಹಾಗೂ 585 ಮಹಿಳೆಯರು ಸೇರಿದಂತೆ ಒಟ್ಟು 2027 ಪದವೀಧರ ಮತದಾರರು, ಕನಕಗಿರಿ ತಾಲ್ಲೂಕಿನಲ್ಲಿ 3 ಮತಗಟ್ಟೆಗಳಿದ್ದು, 452 ಪುರುಷರು ಹಾಗೂ 181 ಮಹಿಳೆಯರು ಸೇರಿದಂತೆ ಒಟ್ಟು 633 ಪದವೀಧರ ಮತದಾರರು, ಕಾರಟಗಿ ತಾಲ್ಲೂಕಿನಲ್ಲಿ 2 ಮತಗಟ್ಟೆಗಳಿದ್ದು, 718 ಪುರುಷರು ಹಾಗೂ 321 ಮಹಿಳೆಯರು ಸೇರಿದಂತೆ ಒಟ್ಟು 1039 ಪದವೀಧರ ಮತದಾರರು, ಗಂಗಾವತಿ ತಾಲ್ಲೂಕಿನಲ್ಲಿ 4 ಮತಗಟ್ಟೆಗಳಿದ್ದು, 1674 ಪುರುಷರು ಹಾಗೂ 1045 ಮಹಿಳೆಯರು ಸೇರಿದಂತೆ 2719 ಪದವೀಧರ ಮತದಾರರು, ಯಲಬುರ್ಗಾ ತಾಲ್ಲೂಕಿನಲ್ಲಿ 2 ಮತಗಟ್ಟೆಗಳಿದ್ದು, 878 ಪುರುಷರು ಹಾಗೂ 352 ಮಹಿಳೆಯರು ಸೇರಿದಂತೆ ಒಟ್ಟು 1230 ಪದವೀಧರ ಮತದಾರರು, ಕುಕನೂರು ತಾಲ್ಲೂಕಿನಲ್ಲಿ 2 ಮತಗಟ್ಟೆಗಳಿದ್ದು, 675 ಪುರುಷರು ಹಾಗೂ 342 ಮಹಿಳೆಯರು ಸೇರಿದಂತೆ 1022 ಪದವೀಧರ ಮತದಾರರು ಮತ್ತು ಕೊಪ್ಪಳ ತಾಲ್ಲೂಕಿನಲ್ಲಿ 5 ಮತಗಟ್ಟೆಗಳಿದ್ದು, 2489 ಪುರುಷರು ಹಾಗೂ 1312 ಮಹಿಳೆಯರು ಸೇರಿದಂತೆ ಒಟ್ಟು 3801 ಪದವೀಧರ ಮತದಾರರು ಇದ್ದು, ಜಿಲ್ಲೆಯಲ್ಲಿ ಒಟ್ಟು 23 ಮತಗಟ್ಟೆಗಳಿದ್ದು, 8328 ಪುರುಷರು ಹಾಗೂ 4138 ಮಹಿಳೆಯರು ಸೇರಿದಂತೆ ಒಟ್ಟು 12471 ಪದವೀಧರ ಮತದಾರರು ಹೆಸರುಗಳನ್ನು ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ.
ಈಶಾನ್ಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಅರ್ಹತಾ ದಿನಾಂಕ 01.11.2023 ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲು ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವೀಧರರಾಗಿರಬೇಕು. ದಿನಾಂಕ 01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ-18 ರಲ್ಲಿ (ಭಾವಚಿತ್ರದೊಂದಿಗೆ) ಭರ್ತಿ ಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ತಾವು ವಾಸಿಸುತ್ತಿರುವ ವಾಸಸ್ಥಳದ ದಾಖಲೆಗಳನ್ನು ಸ್ವಯಂಧೃಡೀಕರಿಸಿ ಅಲ್ಲದೇ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಅರ್ಜಿಯೊಂದಿಗೆ ಡಿಸೆಂಬರ್ 09 ರೊಳಗಾಗಿ ಸಂಬAಧಪಟ್ಟ ತಾಲ್ಲೂಕು ತಹಶೀಲ್ದಾರ ಕಛೇರಿಗಳಲ್ಲಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: