ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟಕ್ಕೆ ಆವಿರೋಧ ಆಯ್ಕೆ
ಹುಲಿಗಿ : ಕೊಪ್ಪಳ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ನಿ. ಗಂಗಾವತಿ/ಕೊಪ್ಪಳ ಇದರ ಐದು ವರ್ಷ ಅವಧಿಗೆ ಆಡಳಿತ ಮಂಡಳಿ ಸದಸ್ಯರು ಅವಿರೋದವಾಗಿ ಆಯ್ಕೆ ಯಾದರು. ಜಿಲ್ಲಾ ಒಕ್ಕೂಟದ 15 ಸ್ಥಾನಗಳಿಗೆ ನಿಗದಿತ ಸಮಯಕ್ಕೆ 16 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿತ್ತು, ಗುರುಕಣ್ವ ಸಹಕಾರಿಯ ಅಧ್ಯಕ್ಷರಾದ ಗುರುರಾಜ್ ಬಿಸರಳ್ಳಿ ಅವರು ನಾಮಪತ್ರ ಹಿಂಪಡೆದ ಪರಿಣಾಮವಾಗಿ ನಾಮಪತ್ರ ಸಲ್ಲಿಸಿದ 15 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಯಿತು.
ಕೊಪ್ಪಳ ತಾಲೂಕಿನಿಂದ ಮುದ್ದಪ್ಪ ಜಿ ಬೇವಿನಹಳ್ಳಿ, ಗವಿಸಿದ್ದಯ್ಯ ಲಿಂಗಬಸಯ್ಯನಮಠ, ಶಂಕರ್ ಗೌಡ ಹಿರೇಗೌಡ, ಚನ್ನಬಸಪ್ಪ ಕಡ್ಡಿಪುಡಿ, ನಾಗರಾಜ ನಾಗನೂರು, ಶರಣಪ್ಪ ವಣಗೇರಿ
ಗಂಗಾವತಿ ತಾಲೂಕಿನಿಂದ ಶ್ರೀಧರ ಜಿ ವಿ ಕೆಸರಟ್ಟಿ, ಕುಮಾರಪ್ಪ ಸಿಂಗನಾಳ, ಫಕ್ರುದ್ದೀನ್ ಸಬರದ, ಲೋಕೇಶಪ್ಪ ಟಿ, ಸಿದ್ದರಾಮಪ್ಪ ಮಸ್ಕಿ, ಕುಷ್ಟಗಿ ತಾಲೂಕಿನಿಂದ ಮಹಾಲಿಂಗಪ್ಪ ದೋಟಿಹಾಳ, ಬಸವರಾಜ ಪಡಿ, ಯಲಬುರ್ಗಾ ತಾಲೂಕಿನಿಂದ ನೀಲನಗೌಡ ತವಳಗೇರಾ, ಕನಕಗಿರಿ ತಾಲೂಕಿನಿಂದ ಬಸವರಾಜ ಗುಗ್ಗುಳಶೆಟ್ಟರ್ ಸೇರಿದಂತೆ ಒಟ್ಟು 15 ಜನ ನಿರ್ದೇಶಕರು ಆ ವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ರೆಟರಿಂಗ್ ಆಫೀಸರ್ ಬಸಪ್ಪ ಗಾಳಿ ಚುನಾವಣಾ ಫಲಿತಾಂಶ ಘೋಷಣೆ ಮಾಡಿದರು.
ಅಧ್ಯಕ್ಷ ಹುದ್ದೆಗೆ ಹೆಚ್ಚಿದ ಪೈಪೋಟಿ :- ಕಳೆದ ಬರ ಗಂಗಾವತಿ ತಾಲೂಕಿಗೆ ಕೊಟ್ಟಿರುವ ಅಧ್ಯಕ್ಷ ಸ್ಥಾನವನ್ನು ಈ ಬಾರಿ ಕೊಪ್ಪಳ ತಾಲೂಕಿನವರಿಗೆ ಕೊಡುವ ವಿಚಾರವಿದ್ದು ಈ ಅಧ್ಯಕ್ಷ ಹುದ್ದೆಗೆ ಕೊಪ್ಪಳ ತಾಲೂಕಿನ ಹೊಸಹಳ್ಳಿಯ ಶ್ರೀ ಮಾತೋಶ್ರೀ ಸಹಕಾರಿಯ ಅಧ್ಯಕ್ಷ ಮುದ್ದಪ್ಪ ಜಿ ಬೇವಿನಹಳ್ಳಿ, ಕೊಪ್ಪಳದ ಪ್ರಗತಿಪಥ ಸಹಕಾರಿಯ ಅಧ್ಯಕ್ಷ ಚನ್ನಬಸಪ್ಪ ಕಡ್ಡಿಪುಡಿ, ದಿ ಯುನೈಟೆಡ್ ಸಹಕಾರಿಯ ಅಧ್ಯಕ್ಷ ಶಂಕರಗೌಡ ಹಿರೇಗೌಡ್ರು ಅವರ ನಡುವೆ ತೀವ್ರ ತರ ಪೈಪೋಟಿ ನಡೆಸುತ್ತಿದ್ದಾರೆ.
ಅಭಿನಂದನೆಗಳು ಸಲ್ಲಿಸಿದ ಗಣ್ಯರು :-
ಆಯ್ಕೆಯಾದ ನೂತನ ನಿರ್ದೇಶಕರಿಗೆ ಒಕ್ಕೂಟದ ಅಧ್ಯಕ್ಷರಾದ ನಾಗಲಿಂಗಪ್ಪ ಪತ್ತಾರ್ , ಆರ್ ಕೆ ಡಿ ಸಿ ಸಿ ನಿರ್ದೇಶಕರುಗಳಾದ ಬಸವರಾಜ್ ಹಿಟ್ನಾಳ್, ಶರಣಪ್ಪ ಹ್ಯಾಟಿ, ಸಹಕಾರಿ ದುರಿಣರುಗಳಾದ ರಮೇಶ್ ವೈದ್ಯ ಜಿ, ದೊಡ್ಡಪ್ಪ ದೇಸಾಯಿ, ವಿರುಪಾಕ್ಷಪ್ಪ ಮುಷ್ಟಿ, ತೋಟಪ್ಪ ಕಾಮನೂರು, ಯಲ್ಲಪ್ಪ ಬಸಿರಾಳು ವೀರೇಶ್ ಹತ್ತಿ, ಚಂದ್ರಕಾಂತ ಸಿಂಗಟಲೂರು, ಶಂಭುಲಿಂಗನ ಶೆಟ್ಟಿ, ಶಂಭು ಲಿಂಗಬಸಯ್ಯನಮಠ, ರವಿಚಂದ್ರ ಇಟಗಿ, ಗುರುರಾಜ ಬಿಸರಹಳ್ಳಿ ಶಿವಕುಮಾರ್ ಹಿರೇಮಠ, ಪುಟ್ಟಣ್ಣ ವಾರದ್, ಯಲ್ಲಪ್ಪ ಮೇಟಿ, ಕರಿಯಪ್ಪ ಸಂಗಟಿ, ಲಕ್ಷಣ ಹೊಸಮನಿ, ಶಿವಕುಮಾರ್ ಏಣಗಿ, ಹನುಮರೆಡ್ಡಿ ಹೊಸಮನಿ, ಶಿವಮೂರ್ತಿ ನೇಕಾರ, ನಾಗರಾಜ ಬಹಾದ್ದೂರಬಂಡಿ, ಮಾರುತಿ ಸಿಂದೋಗಿ ಸೇರಿದಂತೆ ಹಲವು ಗಣ್ಯರು ಅಭಿನಂದನೆಗಳನ್ನು ಸಲ್ಲಿಸಿದರು.
Comments are closed.