ದಿ. ಮರಿಗೌಡ ಮಲ್ಲನಗೌಡರ , ದಿ. ಅಂದಮ್ಮ ಮಲ್ಲನಗೌಡರ ದತ್ತಿ ಪ್ರಶಸ್ತಿ ಪ್ರಕಟ
ಯಲ್ಲಪ್ಪ ಹರನಾಳಗಿ, ಜಹಾನ್ ಆರಾ ಕೋಳೂರು ಆಯ್ಕೆ
ಡಾ. ಮಹಾಂತೇಶ ಮಲ್ಲನಗೌಡರ ಅವರು ಸ್ಥಾಪಿಸಿರುವ ದಿ. ಮರಿಗೌಡ ಮಲ್ಲನಗೌಡರ ದತ್ತಿ ಪ್ರಶಸ್ತಿಗೆ ಯಲ್ಲಪ್ಪ ಹರ್ನಾಳಗಿ ಅವರ ಕವನ ಸಂಕಲನ “ ಬಿಸಿಲು ಬಾಯಾರಿದಾಗ “ ಹಾಗೂ ದಿ. ಅಂದಮ್ಮ ಮಲ್ಲನಗೌಡರ ಮಹಿಳಾ ಬರಹಗಾರರಿಗೆ ಮೀಸಲಿರುವ ದತ್ತಿ ಪ್ರಶಸ್ತಿಗೆ ಜಹಾನ್ ಆರಾ ಕೋಳೂರು ಅವರ ನನ್ನೂರ ಕೌದಿ ಕೃತಿಗಳು ಆಯ್ಕೆಯಾಗಿವೆ ಎಂದು ಕೊಪ್ಪಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ರಾಮಚಂದ್ರಗೌಡ ಬಿ. ಗೊಂಡಬಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.