ಮತ್ತೊಬ್ಬರಿಗೆ ಮಸಿ ಹಚ್ಚಬೇಕೆನ್ನುವವರು ಮೊದಲು ತಮ್ಮ ಕೈ ಮಸಿ ಮಾಡಿಕೊಳ್ಳಬೇಕು. – ಗ೦ಗಾದೇವಿ ಮಾತಾಜಿ

Get real time updates directly on you device, subscribe now.

ಗಂಗಾವತಿ: ಮನೆಯೊಳಗಣ ಕಿಚ್ಚು ಮೊದಲು ತಾನಿದ್ದ ಸ್ಥಳವನ್ನು ಸುಟ್ಟ ನ೦ತರ ಬೇರೆಯದನ್ನು ಸುಡುತ್ತದೆ. ಇನ್ನೊಬ್ಬರಿಗೆ ಮಸಿ ಹಚ್ಚಬೇಕೆನ್ನುವ ವ್ಯಕ್ತಿ ಮೊದಲು ತನ್ನ ಕೈ ಮಸಿ ಮಾಡಿಕೊಳ್ಳಬೇಕಾಗುತ್ತದೆ ಎ೦ದು ಕೂಡಲ ಸ೦ಗಮ ಬಸವಧರ್ಮ ಪೀಠದ ಮಹಾಜಗದ್ಗುರು ಗ೦ಗಾ ಮಾತಾಜಿಯವರು ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ೨೦೨೪ ಜನೆವರಿ ೧೨, ೧೩, ಮತ್ತು ೧೪ ರ೦ದು ನಡೆಯುವ ಶರಣಮೇಳ ಪ್ರಚಾರಾರ್ಥ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡುತ್ತಿದ್ದರು. ಮು೦ದುವರೆದು ಕಲ್ಲಲ್ಲಿರುವ ಬ೦ಗಾರವನ್ನು ಹೊರಗೆ ತೆಗೆಯಲು ಸಂಸ್ಕರಣೆಯ ಮಾರ್ಗವಿರುವ೦ತೆ ಆತ್ಮದಲ್ಲಿಯ ಚೈತನ್ಯದ ಸಾಕ್ಷಾತ್ಕಾರಕ್ಕೆ ಪೂಜೆ, ಧ್ಯಾನದ ಅವಶ್ಯಕತೆಯನ್ನು ಶರಣಮೇಳ ಅನಾವರಣಗೊಳಿಸುತ್ತದೆ ಎ೦ದು ದೃಷ್ಟಾ೦ತಗಳ ಮೂಲಕ ವಿವರಿಸಿದರು.
ಇದೇ ಸ೦ದರ್ಭದಲ್ಲಿ ಇತ್ತೀಚೆಗೆ ನಗರದಲ್ಲಿ ಪ್ರತಿಷ್ಠಾಪಿಸಿರುವ ಅಶ್ವಾರೂಢ ಬಸವೇಶ್ವರ ಪುತ್ಥಳಿಯ ಕಾರ್ಯದಲ್ಲಿ ಜನ ಮೆಚ್ಚುಗೆ ಪಡೆದ ಜಗಜ್ಯೋತಿ ಬಸವೇಶ್ವರ ಟ್ರಸ್ಟ್ (ರಿ) ಪಧಾದಿಕಾರಿಗಳನ್ನು ಮತ್ತು ಟ್ರಸ್ಟ್‌ಗೆ ಸಹಕರಿಸಿದ ಹೊಸಳ್ಳಿ ಶ೦ಕರಗೌಡ ಹಾಗೂ ಮಡಿವಾಳ ಮಾಚಿದೇವ ನಾಟಕದ ಪಾತ್ರಧಾರಿಗಳಾದ ಶ್ರೀಮತಿ ಸಿ. ಮಹಾಲಕ್ಷ್ಮಿ, ಯ೦ಕಪ್ಪ ವಕೀಲರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ಮಾತನಾಡಿದ ಟ್ರಸ್ಟ್‌ನ ಕಾರ್ಯದರ್ಶಿ ರಾಚಪ್ಪ ಸಿದ್ದಾಪುರ ಇವರು ರಾಷ್ಟ್ರೀಯ ಬಸವದಳವು ನಮ್ಮನ್ನು ಸನ್ಮಾನಿಸುವುದರ ಮುಖಾ೦ತರ ಟ್ರಸ್ಟ್‌ನ ಜವಾಬ್ದಾರಿಯನ್ನು ಹೆಚ್ಚಿಸಿದೆ ಎ೦ದು ಕೃತಜ್ಞತೆ ಸಲ್ಲಿಸಿದರು.
ವೇದಿಕೆಯ ಮೇಲೆ ಬಸವಧರ್ಮ ಪೀಠದ ಅನಿಮಿ?ನ೦ದಸ್ವಾಮಿ, ಬಸವರತ್ನ ಮಾತಾಜಿ, ಬಸವದಳದ ಗೌರವಾಧ್ಯಕ್ಷ ಓ.ಎಂ. ಬಳ್ಳೊಳ್ಳಿ ಇದ್ದರು.
ಶ೦ಕ್ರಪ್ಪ ಪಟ್ಟಣಶೆಟ್ಟಿ ಇವರಿ೦ದ ?ಟಸ್ಥಲ ದ್ವಜಾರೋಹಣ, ಪ೦ಪಣ್ಣ ಕಿನ್ನಾಳ ಇವರ ವಚನ ಪ್ರಾರ್ಥನೆಗೈದ ಈ ಕಾರ್ಯಕ್ರಮವನ್ನು ಬಸವಕೇ೦ದ್ರದ ಕಾರ್ಯದರ್ಶಿ ಎ.ಕೆ. ಮಹೇಶಕುಮಾರ ಶರಣು ಸಮರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಓ.ಎಂ. ಬಳ್ಳೊಳ್ಳಿಯವರು ಪ್ರಸಾದದ ಸೇವೆಯನ್ನು ಕಲ್ಪಿಸಿದ್ದರು.

Get real time updates directly on you device, subscribe now.

Comments are closed.

error: Content is protected !!