ಗ್ರಂಥಾಲಯದಲ್ಲಿ ಮಕ್ಕಳ ಚಟುವಟಿಕೆಗಳ ಸಂಭ್ರಮ

Get real time updates directly on you device, subscribe now.


ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ನಗರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯೋಜಿಸಿರುವ ಪುಸ್ತಕ ಪ್ರದರ್ಶನಕ್ಕೆ ಚಾಲನೆ ದೊರೆಯಿತು.
ನಗರದ ಗಣೇಶ ನಗದಲ್ಲಿನ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನವನ್ನು ಭಾರತೀಯ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ ಭಾವಚಿತ್ರಕ್ಕೆ ಪೂಜೆಮಾಡಿ, ರಿಬ್ಬನ ಕತ್ತರಿಸುವ ಮೂಲಕ ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ವಟಪರವಿ ಅವರು ಉದ್ಘಾಟಿಸಿದರು. ಗಣೇಶ ನಗರದ ಗ್ರಂಥಾಲಯದಲ್ಲಿನ ಮಕ್ಕಳ ವಿಭಾಗ ಮಕ್ಕಳ ಸ್ನೇಹಿಯಾಗಿದ್ದು. ಮಕ್ಕಳೆಲ್ಲಾ ಇಲ್ಲಿನ ಮಕ್ಕಳ ಗ್ರಂಥಾಲಯದ ವಿಭಾಗವನ್ನು ಹೆಚ್ಚು ಹೆಚ್ಚು ಉಪಯೋಗಿಸಿಕೊಳ್ಳಬೇಕು ಎಂದರು.
ಗ್ರಂಥಾಲಯಕ್ಕೆ ಬಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗಣೇಶ ನಗರದ ಮಕ್ಕಳಿಗೆ ಕಟ್ಟು ಕಟ್ಟು ಕಥೆ ಕಟ್ಟು, ನಿಧಿ ಶೋಧ, ಗಟ್ಟಿ ಓದುವ ಕಾರ್ಯಕ್ರಮವನ್ನು ಮಕ್ಕಳಿಗೆ ಆಟವಾಡಿಸಿದರು. ಸುಳಿವುಗಳೊಂದಿಗೆ ಹುಡುಕುತ್ತ ಸಿಗುವ ನಿಧಿ ಶೋಧ ಆಟವನ್ನು ಮಕ್ಕಳು ಪ್ರೀತಿಯಿಂದ ಆಟವಾಡಿದರು. ಕಟ್ಟು ಕಟ್ಟು ಕಥೆ ಕಟ್ಟುವಿನಲ್ಲಿ ಕೆಲ ಶಬ್ದಗಳನ್ನು ಕೊಟ್ಟು, ಆ ಶಬ್ದಗಳನ್ನು ಒಳಗೊಂಡ ಅವರದೇ ಕಾಲ್ಪನಿಕ ಕಥೆಯೊಂದನ್ನು ಕಟ್ಟುವಲ್ಲಿ ಮಕ್ಕಳು ಖುಷಿಯಾಗಿ ಪಾಲ್ಗೊಂಡರು.
ಈ ಎಲ್ಲ ಕ್ರಿಯಾತ್ಮಕ ಚಟುವಟಿಕೆಗೂ ಮುನ್ನ, ಆನಂದ ಪಾಟೀಲ, ಚಂದ್ರಗೌಡ ಕುಲಕರ್ಣಿ, ಸೋಮಲಿಂಗ ಬೇಡರ, ರಸ್ಕಿನ್ ಬಾಂಡ್ ಅವರ ಮಕ್ಕಳ ಸಾಹಿತ್ಯ ಕುರಿತು ಮಾತನಾಡಿದರು. ಕೆಲ ಆಯ್ದ ಶಿಶುಗೀತೆ, ಕಥೆಗಳನ್ನು ಮಕ್ಕಳಿಗೆ ಹೇಳುವದರೊಂದಿಗೆ ಪ್ರಾಸ್ತಾವಿಕವಾಗಿ ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡೊಳ್ಳಿನ ಮಾತನಾಡಿದರು.
ವಿದ್ಯಾರ್ಥಿಗಳಾದ ಹಂಸಾ, ಸಂಗೀತ, ಪ್ರಾರ್ಥನೆ ಮಾಡಿದರು, ಚಿನ್ಮಯ ವಚನ ಹೇಳಿದರು, ಗ್ರಂಥಾಲಯ ಸಹಾಯಕಿ ವಿಜಯಲಕ್ಷ್ಮೀ ವಡ್ಡಟ್ಟಿ ವಂದಿಸಿದರು. ಓದುಗರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!