ಆನೆಗೊಂದಿ ಗ್ರಾಪಂಯಲ್ಲಿ ಹೈಟೆಕ್ ಸಭಾಂಗಣ ಪ್ರಾರಂಭ
ಗಂಗಾವತಿ : ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತಿಯು ಗಾಂಧಿ ಪುರಸ್ಕಾರದಿಂದ ಲಭಿಸಿದ ೫ಲಕ್ಷ ರೂ. ಅನುದಾನದಲ್ಲಿ ಆಧುನೀಕರಣ(ಹೈಟಕ್) ಗೊಳಿಸಿದ ಸಭಾಂಗಣವನ್ನು ಆನೆಗುಂದಿ ರಾಜ ವಂಶಸ್ಥೆ ಲಲಿತಾರಾಣಿ ರಾಯಲು ಪ್ರಾರಂಭಿಸಿದರು.
ನಂತರ ಅವರು ಮಾತನಾಡಿ, ಹೈಟಕ್ ಸಭಾಂಗಣ ಉತ್ತಮ ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ಹೇಳಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ಗಾಂಧಿ ಪುರಸ್ಕಾರದಿಂದ ಲಭಿಸಿದ ೫ಲಕ್ಷ ರೂ. ಅನುದಾನದಲ್ಲಿ ಸಭಾಂಗಣವನ್ನು ಹೈಟೆಕ್ ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹಾದೇವಿ, ರಾಜ ವಂಶಸ್ಥರಾದ ರ್ಶರೀಕೃಷ್ಣದೇವರಾಯಲು, ಹರಿಹರದೇವರಾಯಲು, ಗ್ರಾಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ, ಪ್ರದೀಪಕುಮಾರ ಮತ್ತು ಗ್ರಾಮದ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
Comments are closed.