ಸಮಾಜ ತಿದ್ದಲು ಚಲನಚಿತ್ರ ಪ್ರಭಾವಶಾಲಿ ಮಾದ್ಯಮ: ಹೆಚ್.ಆರ್.ಶ್ರೀನಾಥ್

Get real time updates directly on you device, subscribe now.

ಗಂಗಾವತಿ ಚಲನಚಿತ್ರಕ್ಕೆ ಶುಭ ಹಾರೈಸಿದ ಮಾಜಿ ಎಂಎಲ್‌ಸಿ

ಗಂಗಾವತಿ: ಸಮಾಜ ತಿದ್ದುವಲ್ಲಿ ಹಲವು ಪರಿಣಾಮ ಕಾರಿ ವಿಧಾನಗಳಿದ್ದು ಅದರಲ್ಲಿ ಚಲನಚಿತ್ರಗಳು ಅತ್ಯಂತ ಪ್ರಭಾವಶಾಲಿ ಮಾದ್ಯಮ ಅದಕ್ಕಾಗಿ ಸಮಾಜ ಮುಖಿ ಚಿತ್ರ ನಿರ್ಮಿಸುವ ಜವಬ್ದಾರಿ ಒಬ್ಬ ನಿರ್ದೇಶಕನ ಮೇಲಿದೆ ಎಂದು ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್.ಶ್ರೀನಾಥ್ ಹೇಳಿದರು.
ಅವರು, ಹಿರೇಜಂತಕಲ್ ಪಂಪಾಪತಿ ದೇವಸ್ಥಾನದಲ್ಲಿ ಗಂಗಾವತಿ ಚಲನಚಿತ್ರ ಕೆಮೆರಾ ಬಟಾನ್ ಒತ್ತುವ ಮೂಲಕ ಚಿತ್ರಕರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಗಂಗಾವತಿ ಸುತ್ತಮುತ್ತಲಿರುವ ಪರಿಸರ ಚಿತ್ರ ನಿರ್ಮಾಣಕ್ಕೆ ಹೇಳಿಮಾಡಿಸಿದ ಸ್ಥಳವಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಚಿತ್ರಗಳು ಈಗಾಗಲೆ ಶೂಟಿಂಗ್ ನಡೆದಿವೆ, ಇನ್ನೂ ಮುಂದೆ ಹೆಚ್ಚು ಹೆಚ್ಚು ಚಿತ್ರಗಳು ನಿರ್ಮಾಣಗೊಳ್ಳುವದರಿಂದ ಇಲ್ಲಿ ಉದ್ಯೋಗವಕಾಶಗಳು ಹೆಚ್ಚುತ್ತವೆ, ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಸಿಕ್ಕಂತಾಗುತ್ತದೆ. ವಾಣಿಜ್ಯ ದೃಷ್ಟಿಯಿಂದಲೂ ವಿಪುಲ ಅವಕಾಶಗಳು ಲಭ್ಯವಾಗುತ್ತವೆ ಎಂದರು.
ಹಿರಿಯ ನ್ಯಾಯಾವಾದಿ ಶರದ ದಂಡೀನ ವಕೀಲರು ಮಾತನಾಡಿ, ಬಜೇಟ್ ಕಡಿಮೆ ಇದ್ದರೂ ಕೌಶಲ್ಯದಿಂದ ಚಿತ್ರ ನಿರ್ಮಿಸಿ ಗೆದ್ದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ, ನಾವು ನಿಮಗೆ ಪ್ರತಿ ಹಂತದಲ್ಲೂ ಸಹಕಾರ ನೀಡುತ್ತೇವೆ ಬಸವರಾಜ್ ನಿರ್ದೇಶನದ ಸಾಹಸಕ್ಕಿಳಿದಿರುವುದು ಅವರು ದೃಢ ಮನಸ್ಥಿತಿ ಎತ್ತಿ ತೋರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ಚಲನಚಿತ್ರ ನಿರ್ದೇಶಕರಾದ ಬಸವರಾಜ್ ಎಂ.ಡಿ., ನ್ಯಾಯವಾದಿಗಳಾದ ಹಾಸುಮುದ್ದೀನ್ ವಕೀಲರು, ನಾಗರಾಜ್ ಗುತ್ತೇದಾರ ವಕೀಲರು, ಸಿ.ಬಿ.ಗೌಡ ವಕೀಲರು, ಯುವ ನಿರ್ದೇಶಕ ಚಿರಂಜೀವಿ, ಚಲನಚಿತ್ರ ನಟರಾದ ನಾಗರಾಜ್ ಇಂಗಳಗಿ, ವಿಷ್ಣುತೀರ್ಥ ಜೋಷಿ, ವಿರುಪಾಕ್ಷಪ್ಪ ಶಿರವಾರ, ಮುಖಂಡರಾದ ಸುರೇಶ್ ಗೌರಪ್ಪ ಹಾಗು ಜ್ಯೂನಿಯರ್ ಸುದೀಪ್ ಇತರರಿದ್ದರು.
ಇದಕ್ಕೂ ಮುನ್ನಾ ಮಾಜಿ ಎಂ.ಎಲ್.ಸಿ. ಹೆಚ್.ಆರ್.ಶ್ರೀನಾಥ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

 

Get real time updates directly on you device, subscribe now.

Comments are closed.

error: Content is protected !!