ನ.16ರಂದು ರಾಷ್ಟ್ರೀಯ ಪತ್ರಿಕಾ ದಿನಾಚರಣೆ : ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ

Get real time updates directly on you device, subscribe now.

ಕೊಪ್ಪಳ ಮೀಡಿಯಾ ಕ್ಲಬ್ ಸದಸ್ಯರಿಂದ ದಿ.ಪಿ.ಬಿ.ಧುತ್ತರಗಿ ವಿರಚಿತ ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ ಜರುಗಲಿದೆ.
ಅಂದು ಸಂಜೆ 5 ಕ್ಕೆ ಸಾಹಿತ್ಯ ಭವನದಲ್ಲಿ ಜರುಗುವ ಪ್ರದರ್ಶನ ಕಾರ್ಯಕ್ರಮ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ  ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದಾರೆ.
ಹಿರಿಯ ಪ್ರತ್ರಕರ್ತ ಶರಣಪ್ಪ ಬಾಚಲಾಪುರ ಅಧ್ಯಕ್ಷ ತೆ ವಹಿಸಲಿದ್ದು ಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಬಸವರಾಜ ರಾಯರಡ್ಡಿ , ಜನಾರ್ದನ ರೆಡ್ಡಿ, ದೊಡ್ಡನಗೌಡ ಪಾಟೀಲ್, ಎಂಎಲ್ಸಿ ಹೇಮಲತಾ ನಾಯಕ, ಡಿಸಿ ನಲಿನ್ ಅತುಲ್, ಜಿ.ಪಂ.ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋಧಾ ವಂಟಿಗೋಡಿ, ಜೆಡಿಎಸ್ ಮುಖಂಡರಾದ ಸಿ.ವಿ.ಚಂದ್ರಶೇಖರ್, ವೀರೇಶ ಮಹಾಂತಯ್ಯನಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ , ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ, ಶಂಭುಲಿಂಗನಗೌಡ ಹಲಗೇರಿ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಹಿರಿಯ ವಕೀಲರಾದ ಆಸೀಫ್ ಅಲಿ, ಆರ್.ಬಿ.ಪಾನಗಂಟಿ, ಸಂಧ್ಯಾ ಮಾದಿನೂರು, ಶ್ರೀನಿವಾಸ ಗುಪ್ತಾ, ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಕೊಟ್ರಯ್ಯಸ್ವಾಮಿ, ವಿಕಲಚೇತನ ನೌಕರರ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಆಗಮಿಸಲಿದ್ದಾರೆ.
ಕೊಪ್ಪಳ ಮೀಡಿಯಾ  ಕ್ಲಬ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀಮತಿ ಮಹಾಂತಮ್ಮ ಸಂಗಣ್ಣ ಗಡಾದ ಶೆಟ್ಟರ್ ಮೆಮೊರಿಯಲ್ ಟ್ರಸ್ಟ್ , ಶ್ರೀಗವಿಶ್ರೀ ಗ್ರಾಮೀಣಾಭಿವೃದ್ದಿ ಶಿಕ್ಷಣ ಸೇವಾ ಸಂಸ್ಥೆ ಕೊಪ್ಪಳ ಸಹಯೋಗದಲ್ಲಿ ದಿ.ನೀಲನಗೌಡ ಹಿರೇಗೌಡರ ಭಾನಾಪುರ ಇವರ ಸ್ಮರಣಾರ್ಥ ನಾಟಕ ಪ್ರದರ್ಶನ ಜರುಗಲಿದೆ.
ಇದೇ ಸಂದರ್ಭದಲ್ಲಿ ಬೇಂದ್ರೆ ಕಲಾ ತಂಡದಿಂದ ಜನಪದ ನೃತ್ಯ , ಮಾಸ್ತಿ ಕಲಾ ತಂಡದಿಂದ ಕನ್ನಡ ಗೀತ ನೃತ್ಯ ಜರುಗಲಿದೆ ಎಂದು ಕೊಪ್ಪಳ ಮೀಡಿಯಾ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!
%d bloggers like this: