ಹಿರಿಯ ಜೀವಗಳೊಂದಿಗೆ ಅರ್ಥಪೂರ್ಣ 8ನೇ ರಾಷ್ಟಿçÃಯ ಆಯುರ್ವೇದ ದಿನಾಚರಣೆ

Get real time updates directly on you device, subscribe now.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆಯ ಆಶ್ರಯದಲ್ಲಿ ನವೆಂಬರ್ 10ರಂದು 8ನೇ ಆಯುರ್ವೇದ ದಿನಾಚರಣೆ ನಡೆಯಿತು.
ನಗರದ ಸುರಭಿ ವೃದ್ಧಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಹಿರಿಯ ಜೀವಗಳೊಂದಿಗೆ ನಡೆದ ಅರ್ಥಪೂರ್ಣ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾ ವೃದ್ಧಾಶ್ರಮದ ಯೋಜನಾ ನಿರ್ದೇಶಕರಾದ ರಾಜಕುಮಾರ ಭಜಂತ್ರಿ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಪ್ರತಿ ದಿನ ಯೋಗಭ್ಯಾಸ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಪ್ರತಿಯೊಬ್ಬರು ಪ್ರತಿ ದಿನ ಯೋಗ ಮಾಡಬೇಕು. ಯೋಗವನ್ನು ಜೀವನದಲ್ಲಿ ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು ಎಂದರು. ಆಯುರ್ವೇದ ಚಿಕಿತ್ಸಾ ಪದ್ಧತಿಗಳಾದ ಪಂಚಕರ್ಮ ಮತ್ತು ಯೋಗದ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು. ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಶಾಂತಿ ನೆಮ್ಮದಿ ಸಿಗಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ತಿಪ್ಪಣ್ಣ ಶಿರಸಗಿ ಅವರು ಮಾತನಾಡಿ, ಆಯುರ್ವೇದ ಚಿಕಿತ್ಸಾ ಪದ್ಧತಿ ಎಂದರೆ ಅದು ದೈನಂದಿನ ಜೀವನ ಶೈಲಿಯಲ್ಲಿ ಕ್ರಮಬದ್ಧ ಜೀವನ ವಿಧಾನವಾಗಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಯಮನಪ್ಪ ಜೆ ಶಿರವಾರ ಅವರು ಮಾತನಾಡಿ, ಯೋಗವು ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದೆ. ಒತ್ತಡದ ನಡುವೆ ಜೀವನ ಸಾಗಿಸುವ ಇಂದಿನ ಬದುಕಿನ ಶೈಲಿಗೆ ಯೋಗವು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧ ವೈದ್ಯಾಧಿಕಾರಿಗಳು ಮನೆಮದ್ದು ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಇದೆ ವೇಳೆ ಶಿಬಿರಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
ಸಮಾರಂಭದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಗಳಾದ ಡಾ.ಶರಣಪ್ಪ ಹೈದ್ರಿ, ಡಾ.ವಿರುಪಾಕ್ಷ ತಾಳಿಕೋಟೆ, ಡಾ.ಗುರುರಾಜ ಉಮಚಗಿ, ಡಾ.ಪ್ರಹ್ಲಾದ್ ಐಲಿ, ಡಾ.ರಾಜಶೇಖರ ಯರನಾಳ, ಡಾ.ಜ್ಯೋತಿ ಕಟ್ಟಿ, ಡಾ.ಕವಿತಾ ಹೆಚ್ ಎಫ್., ಸುರಭಿ ವೃದ್ಧಾಶ್ರಮದ ವ್ಯವಸ್ಥಾಪಕರಾದ ಕೃಷ್ಣ ಬನ್ನಿಗಿಡದ, ಇನ್ನೀತರ ಆಯುಷ್ ವೈದ್ಯಾಧಿಕಾರಿಗಳು, ಸಿಬ್ಬಂದಿ, ವೃದ್ಧರು ಸೇರಿದಂತೆ ಇತರರು ಇದ್ದರು. ಡಾ.ರಾಜಶೇಖರ ಯರನಾಳ ನಿರೂಪಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: