ಮಾಧ್ಯಮ ಅಕಾಡೆಮಿ ಕೆಯೂಡಬ್ಲ್ಯೂಜೆ ಹೋರಾಟದ ಫಲ-ಜಿ.ಕೆ.ಸತ್ಯ
ಮನೆಯಂಗಳದಲ್ಲಿ ಜಿ.ಕೆ.ಸತ್ಯ
*ಮಾಧ್ಯಮ ಅಕಾಡೆಮಿ ಕೆಯೂಡಬ್ಲ್ಯೂಜೆ ಹೋರಾಟದ ಫಲ
*ಪ್ರಧಾನಿ ನೆಹರೂ ಕೆಯುಡಬ್ಲ್ಯೂಜೆಗೆ ಬಂದಿದ್ದರು
ಬೆಂಗಳೂರು:
ಆಗಿನ ಪ್ರಧಾನಿ ಜವಹರಲಾಲ್ ನೆಹರು ಅವರು ಕೂಡ ಕೆಯುಡಬ್ಲ್ಯೂಜೆ ಗೆ ಬಂದಿದ್ದರು. ಕೆಯುಡಬ್ಲ್ಯೂಜೆ ಹೋರಾಟದ ಪಲವಾಗಿಯೇ ಅಂದು ಪತ್ರಿಕಾ ಅಕಾಡೆಮಿ ಸ್ಥಾಪನೆಯಾಯಿತು. ಭಾರತೀಯ ಪತ್ರಕರ್ತರ ಸಂಘಟನೆಯಲ್ಲಿ ಕೆಯುಡಬ್ಲ್ಯೂಜೆ ಪಾತ್ರ ಹಿರಿದು…
ಹೀಗೆಂದವರು ಎಂಬತ್ತೊಂದು ವಸಂತ ತುಂಬಿರುವ
ಹಿರಿಯ ಪತ್ರಕರ್ತ, ಕೆಯುಡಬ್ಲೂಜೆ ಮಾಜಿ ಅಧ್ಯಕ್ಷ ಜಿ.ಕೆ.ಸತ್ಯ ಅವರು.
ಮನೆಯಂಗಳದಲ್ಲಿ ಮನದುಂಬಿ ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಗೌರವ ಸ್ವೀಕರಿಸಿ ಮಾತನಾಡಿದರು.
ಪತ್ರಕರ್ತರ ಸಂಘಟನೆ ಮತ್ತು ಕಾರ್ಯಚಟುವಟಿಗಳಲ್ಲಿ ತನ್ನ ಜೀವಮಾನದ ಬಹುಪಾಲಿನ ಸಮಯ ಕಳೆದಿರುವೆ. ಆಗ 26 ಜಿಲ್ಲೆಗೂ ಪ್ರವಾಸ ಮಾಡಿ ಸಂಘಟನೆ ಮಾಡಿದ್ದೆವು ಜಿ.ಕೆ. ಸತ್ಯ ತಿಳಿಸಿದರು.
ಕೆಯೂಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ನೇತ್ರತ್ವದಲ್ಲಿ ಕಳೆದ ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಹಿರಿಯ ಪತ್ರಕರ್ತರನ್ನು ಗೌರವಿಸುವ ಮನೆಯಂಗಳದಲ್ಲಿ ಮನತುಂಬಿ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇದರಿಂದ ಎಷ್ಟೋ ಜನರ ಭಾವ ಬಂದ ಬೆಸೆದಂತಾಗುತ್ತದೆ ಎಂದರು.
ರಾಜ್ಯ ಸಂಘದಲ್ಲಿ ಎರಡು ಅವಧಿಗೆ ಪ್ರಧಾನ ಕಾರ್ಯದರ್ಶಿ, ಮತ್ತು ಮೂರು ಬಾರಿ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿ ಸುಮಾರು ಮೂರು ದಶಕಗಳ ಕಾಲ ಪತ್ರಕರ್ತರ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಸಾರ್ಥಕತೆ ನನಗಿದೆ ಎಂದರು.
ಆಗಿನ ಪ್ರಧಾನಿಗಳಾದ ಜವಹರಲಾಲ್ ನೆಹರು ಅವರು ಕೆಯುಡಬ್ಲ್ಯೂಜೆ ಗೆ ಬಂದಿದ್ದರು. ತೊಂಬತ್ತು ವರ್ಷಗಳ ಬಹುದೊಡ್ಡ ಇತಿಹಾಸ ಈ ಸಂಘಟನೆಗಿದೆ ಎಂದರು.
ಇತರ ಕಾರ್ಮಿಕ ಸಂಘಟನೆಗು, ಪತ್ರಕರ್ತರ ಕಾರ್ಮಿಕ ಸಂಘಟನೆಗೂ ಬಹಳ ವ್ಯತ್ಯಾಸ ಇರುವುದಾಗಿ ಪ್ರತಿಪಾದಿಸುವ ಅವರು ಪತ್ರಕರ್ತರ ಹಿತ ರಕ್ಷಣೆ, ಆಡಳಿತ ವರ್ಗ ಮಾಡಬೇಕಾದ ಕೆಲಸ ಸೇರಿದಂತೆ ಹತ್ತಾರು ಕೆಲಸವನ್ನು ಈ ಸಂಘಟನೆ ಮಾಡಿಕೊಂಡು ಬಂದಿದೆ ಎಂದರು. ಇದೇ ಸಂದರ್ಭದಲ್ಲಿ
ಅವರು ಕಾನೂನು ಬದ್ದವಾಗಿ ನಡೆಸಿದ ಹೊರಾಟವನ್ನು ಮೆಲುಕು ಹಾಕಿದರು
ಮಾಧ್ಯಮ ಅಕಾಡೆಮಿ:
ಕೆಯುಡಬ್ಲ್ಯೂಜೆ ಹೋರಾಟದ ಪಲವಾಗಿ ಪತ್ರಿಕಾ ಅಕಾಡೆಮಿ ರಾಜ್ಯದಲ್ಲಿ ಸ್ಥಾಪನೆಯಾದದ್ದು ಇತಿಹಾಸ .
ಸಿಎಂ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ
ವಾರ್ತಾ ಸಚಿವರಾಗಿದ್ದಾಗ
ನಮ್ಮ ಪ್ರಸ್ತಾವನೆಗೆ ಮನ್ನಣೆ ಸಿಕ್ಕಿತು. ಸರ್ಕಾರದ ಸೂಚನೆ ಮೇರೆಗೆ ಕೇರಳ ರಾಜ್ಯದಲ್ಲಿ ಪತ್ರಕರ್ತರ ಅಕಾಡೆಮಿ ಪ್ರಾರಂಭವಾಗಿರುವ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಿದೆವು. ಅದಕ್ಕೆ ಸ್ಪಂದಿಸಿದ ಸಚಿವರು ಅಕಾಡೆಮಿಯ ನಿಯಮ ಮತ್ತು ದ್ಯೇಯೋದ್ಧೇಶಗಳ ಕುರಿತು ಕರಡು ಸಿದ್ಧಪಡಿಸುವಂತೆ ಸೂಚಿಸಿದರು. ಅದರಂತೆ ನಾನು ಮತ್ತು ಅರ್ಜುನ್ ದೇವ್ ಅವರು ಸೇರಿದಂತೆ ಒಟ್ಟಾಗಿ ಸಿದ್ಧಪಡಿಸಿದೆವು. ಪತ್ರಿಕಾ ಅಕಾಡೆಮಿ ಸ್ಥಾಪನೆಯಾಯಿತು. ಈಗ ಮಾಧ್ಯಮ ಅಕಾಡೆಮಿ ಆಗಿ ಬದಲಾಗಿದೆ ಎಂದು ಹೆಮ್ಮೆಯಿಂದಲೇ ಅವರು ಹೇಳಿದರು.
*ಸಂಕಷ್ಟದಲ್ಲಿದ್ದ ಪತ್ರಕರ್ತರ ಕುಟುಂಬಕ್ಕೆ ನೆರವು ದೇಶಕ್ಕೇ ಮಾದರಿ*.
ಕೊವಿಡ್ ಸಂದರರಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕರು ಮರಣ ಹೊಂದಿದ ಸಂದರ್ಭಗಳಲ್ಲಿ ಸಂಕಷ್ಟಕ್ಕೀಡಾದ ಅವರ ಕುಟುಂಬಗಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೆರವಿಗೆ ದಾವಿಸಿದ್ದು, ತಲಾ 5 ಲಕ್ಷ ಪರಿಹಾರ ಕೊಡಿಸಿದ್ದು, ಈ ನಿಟ್ಟಿನಲ್ಲಿ ಶಿವಾನಂದ ತಗಡೂರು ಅವರ ಹೋರಾಟ ಶ್ಲಾಘನೀಯ. ಸರಕಾರದ ಮನ ಒಲಿಸಿ ಒತ್ತಡ ಹಾಕಿ ನೆರವು ಕೊಡಿಸಿದ ಅವರ ಪರಿಶ್ರಮವನ್ನು ಯೂರೂ ಮರೆಯಬಾರದು. ಇದು ದೇಶಕ್ಕೇ ಮಾದರಿ ಎಂದರು.
ಪತ್ರಕರ್ತರು ತಮ್ಮ ವೃತ್ತಿ ಜೊತೆಗೆ ಬದ್ಧತೆಯನ್ನು ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ
ಜಿ.ಕೆ ಸತ್ಯ ಅವರ ಪತ್ನಿ ಜಿ. ಎಸ್ ವಿಜಯಾ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಗೆ ಜಿ.ಕೆ.ಸತ್ಯ ಅವರ ಸೇವೆ ಅನನ್ಯ ಎಂದರು.
ಪ್ರಧಾನ ಕಾರ್ಯದರ್ಶಿ
ಜಿ.ಸಿ ಲೋಕೇಶ ಸ್ವಾಗತಿಸಿದರು. ಖಜಾಂಚಿ ಎಂ.ವಾಸುದೇವ ಹೊಳ್ಳ ವಂದಿಸಿದರು. ರಾಜ್ಯ ಸಮಿತಿ ಸದಸ್ಯ ಕೆ.ಆರ್ ದೇವರಾಜ್, ಪತ್ರಿಕಾ ಛಾಯಾಗ್ರಾಹಕ ಶರಣ ಬಸಪ್ಪ ಹಾಜರಿದ್ದರು.
Comments are closed.