ದ್ವೇಷ ಅಳಿಸಿ ದೇಶ ಉಳಿಸಿ ಅಭಿಯಾನ

Get real time updates directly on you device, subscribe now.

ರಾಜಕೀಯ ನೈತಿಕತೆಯಲ್ಲಿ ಪಕ್ಷದ ಪಾತ್ರ ಏನು ಮತ್ತು ದೇಶದ ಉಳುವಿಗಾಗಿ ಪಕ್ಷದ ಜವ್ಹಾಬ್ದಾರಿ ಏನು ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ.(WPI)ಪಕ್ಷದಿಂದ ನವ್ಹೆಂಬರ್ ತಿಂಗಳ 01ರಿಂದ10 ರವೆರೆಗೆ ಅಭಿಯಾನವನ್ನು ಹಮ್ಮಿಕೊಂಡು” ದ್ವೇಷ ಅಳಿಸಿ ದೇಶ ಉಳಿಸಿ” ಎಂಬ ಘೋಷವಾಕ್ಯದೋಂದಿಗೆ ವೆಲ್ಪರ್ ಪಾರ್ಟಿ ಆಫ್ ಇಂಡಿಯಾ ತನ್ನದೆ ಆದ ಒಂದು ನಿಲುವನ್ನು ಇಟ್ಟುಕೊಂಡು ಈ ಅಭಿಯಾನವನ್ನು ನಡೆಸುತ್ತಿದೆ.ಇದನ್ನು ನಡೆಸಲು ಮುಖ್ಯ ಕಾರಣ ನಮ್ಮ ದೇಶದಲ್ಲಿ ಪ್ರತಿದಿನ ನಡೆಯುತ್ತಿರುವ ದ್ವೇಷವನ್ನು ನೋಡುವಾಗ ಮುಂದಿನ ದಿನಗಳಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಕೆಲವು ಪಟ್ಟು ಭದ್ರಿತ.ಹಿತಾ ಶಕ್ತಿಗಳಿಂದ ಕೆಲವು ಧರ್ಮಾತೀತ ರಾಜಕೀಯ ಪಕ್ಷಗಳು ಪ್ರಚೋದನೆ ನೀಡುವಂತಹ ಭಾಷಣಗಳನ್ನು ಯುವಜನರಲ್ಲಿ ಹರಡಿಸಿ ಯುವಜನರನ್ನು ಬಳಸಿಕೊಂಡು ಅವರನ್ನು ಅಪರಾಧಿಗಳಾಗುವಂತೆ ಮಾಡಿ ಅಲ್ಲದೆ ಅವರಿಂದಲೆ ಕೊಮು ಗಲಬೆ ಮಾಡಿಸಲು ಪ್ರೇರೆಪಿಸುತ್ತಿವೆ.ಯಾವುದೆ ರಾಜಕೀಯ ಇರಲಿ ಅದು ದೇಶದ ಅಭಿವೃದ್ಧಿ ಮತ್ತು ರಾಜ್ಯದ ಅಭಿವೃದ್ಧಿ ಗಾಗಿ ಶ್ರಮವಹಿಸಬೇಕೆ ವಿನಹ ಬರಿ ದ್ವೇಷ ಕಾರುವಂತಹ ಮತ್ತು ಅನ್ಯ ಧರ್ಮದ ಜನರನ್ನು ಅನ್ಯ ಜಾತಿಯ ಜನರನ್ನು ಶತ್ರುಗಳಂತೆ ಕಾಣುವ ವಾತಾವರಣವನ್ನು ನಿರ್ಮಾಣ ಮಾಡುತ್ತಿವೆ.ಜೀವನ ನಡೆಸಲು ಒಬ್ಬ ಮನುಷ್ಯ ತನಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳಲು ಶಿಕ್ಷಣ ಜ್ಞಾನ ಮತ್ತು ಅವನ ಬೇಕು ಬೇಡಗಳನ್ನು ಅಭಿವೃದ್ಧಿ ಹೊಂದಲು ಸಹಕಾರಿಯಾಗುವಂತಹ ಕೆಲಸ ಆಗಬೇಕು.ಅದನ್ನು ಬಿಟ್ಟು ಜನರಿಗೆ ಮೌಡ್ಯಚಾರ ಧರ್ಮದ ಮದವನ್ನು ಅನ್ಯ ಧರ್ಮದ ಜನರನ್ನು ಕೆರಳಿಸುವಂತೆ ಒಡೆದು ಆಳುವಂತೆ ಮಾಡುವುದು ಮಾನವ ವಿರೋಧಿ ಚಟುವಟಿಕೆಯಾಗುತ್ತದೆ.ಆ ನಿಟ್ಟಿನಲ್ಲಿ ನಾವು ಯೋಚಿಸುತ್ತಾ ಕೋಮುವಾದ ಅಳಿದು ಸಾಮರಸ್ಯ ಸಹಬಾಳ್ವೆ ಬ್ರಾತೃತ್ವದ ಬೇರುಗಳು ಬಹುತ್ವ ಭಾರತದಲ್ಲಿ ಸದಾ ಇರಲಿ ಶಾಂತಿ ಮತ್ತು ಪ್ರೀತಿಯಿಂದ ರಾಜಕಾರಣ ಮಾಡಲು ಅವಕಾಶ ಒದಗಿ ಬರಲಿ ಎಂದು WPI ತನ್ನದೆ ಆದ ಮೌಲ್ಯವನ್ನು ಹೊಂದಿ ಅದರ ಮೂಲಕ ಸಮಾಜಕ್ಕೆ ಬದಲಾವಣೆ ತರಲು ಶ್ರಮಿಸುತ್ತಿದೆ ಈಗ ನವ್ಹಂಬರ 1 ರಿಂದ10 ನವೆಂಬರ್ ವರೆಗೆ ದ್ವೇಷ ಅಳಿಸಿ ದೇಶ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಹೆಜ್ಜೆ ಹಾಕುತ್ತಿದೆ ಈ ಒಂದು ಹೆಜ್ಜೆಗೆ ನಮ್ಮ ನಿಮ್ಮೆಲ್ಲರ ಹೆಜ್ಜೆಯ ಸಹಕಾರ ಬೇಕಾಗಿದೆ. ಬನ್ನಿ ಕೈ ಜೊಡಿಸಿ ಶಾಂತಿ ಮತ್ತು ಪ್ರೀತಿಯಿಂದ ರಾಜಕೀಯ ನೈತಿಕತೆಯನ್ನು ಕಟ್ಟೋಣ ಇದೊಂದು ಮೊಟ್ಟ ಮೊದಲು ಮಾಡುತ್ತಿರುವ ಪಕ್ಷದ ಅಭಿಯಾನ ಸಂಸ್ಥೆಗಳು ಸಾಮರಸ್ಯದ ಕುರಿತು ಸುಮಾರು ಕಾರ್ಯಕ್ರಮಗಳನ್ನು ಮಾಡಿವೆ ಆದರೆ ಶಾಂತಿ ಸೌಹಾರ್ದತೆ ಕುರಿತು ರಾಜಕೀಯ ಪಕ್ಷಗಳು ಮಾಡುತ್ತಿರುವುದು WPI ಸೌಹಾರ್ದ ಶಾಂತಿಯ ಕುರಿತು ಜಾಗೃತಿ ಮೂಡಿಸಲು ಒಂದು ಅವಕಾಶ ಹಾಗಾಗಿ ನಮ್ಮೊಂದಿಗೆ ಅಭಿಯಾನದಲ್ಲಿ ಎಲ್ಲರು
ಬನ್ನಿ ಭಾಗವಹಿಸಿ ಯಶಸ್ವಿಗೋಳಿಸಿ. ಸರ್ವ ಧರ್ಮ ಜನರ ಭಾವನೆಗಳ ಜೊತೆಯಾಗೋಣ ಪ್ರೀತಿ ಹಂಚಿಕೊಳ್ಳೋಣ ಮಾನವಿಯ ಮೌಲ್ಯಗಳ ಆಶಯದೊಂದಿಗೆ ಮಾನವಪರ ರಾಜಕೀಯ ನಿಲುವುಗಳನ್ನು ಕಟ್ಟೋಣ ಬನ್ನಿ.ಧನ್ಯವಾದಗಳೊಂದಿಗೆ.

ಶಂಕರ್ .ಡಿ.ಸುರಳ್ ಕೊಪ್ಪಳ

Get real time updates directly on you device, subscribe now.

Comments are closed.

error: Content is protected !!
%d bloggers like this: