ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವವರು ಭಾಗ್ಯವಂತರು- ಗವಿಶ್ರೀಗಳು
ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವವರು ಭಾಗ್ಯವಂತರು..: ಗವಿಶ್ರೀಗಳು
ಕೊಪ್ಪಳ : ಸಾಮೂಹಿಕ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ ಆಗುವುದಷ್ಟೇ ಅಲ್ಲ ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವವರು ಭಾಗ್ಯವಂತರು ಅವರು ಬಡವರಲ್ಲ ಪುಣ್ಯವಂತರು ಇಂತಹ ಅವಕಾಶ ಭಾಗ್ಯವಂತರಿಗೆ ಸಿಗುತ್ತದೆ ಎಂದು ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು ಅವರು ನಗರದ ಸರ್ದಾರ್ ಗಲ್ಲಿ ಮುಸ್ಲಿಂ ಪಂಚ್ ಕಮಿಟಿ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಹ ರವಿವಾರ ಕೈಗೊಂಡಿರುವ ಹಜರತ್ ಮಹಬೂಬೇ ಸುಬಹಾನಿ ರ.ಅ.ಗ್ಯಾರವೀ ಷರೀಫ್ ಹಬ್ಬದ ಪ್ರಯುಕ್ತ 19ನೇ ವರ್ಷದ ಒಟ್ಟು 19 ಜೋಡಿಗಳ ಸಾಮೂಹಿಕ ವಿವಾಹ ನಿಖಾ:ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ನೂತನ ವಧುವವರೆಗೆ ಶುಭ ಆಶೀರ್ವಚನ ಮಾಡುತ್ತಾ ನುಡಿದರು ಮುಂದುವರೆದ ಮಾತನಾಡಿದ ಅವರು ಸಾಮೂಹಿಕ ವಿವಾಹ ಕಾರ್ಯಕ್ರಮ ದಿಂದ ಬಡವರ ಮಕ್ಕಳಿಗೆ ಅನುಕೂಲವಾಗಲಿದೆ ಇಂತಹ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದ ಅವರು ಈ ಭಾಗದಲ್ಲಿ ಮುಸ್ಲಿಂ ಪಂಚಮಿ ವತಿಯಿಂದ ಸತತ 19 ವರ್ಷಗಳಿಂದ ಪವಿತ್ರ ಮಾಸಾಚರಣೆ ಹಜರತ್ ಮಹಬೂಬೇ ಸುಬಾನಿ ಗ್ಯಾರವೀ ಹಬ್ಬದ ಸಂದರ್ಭದಲ್ಲಿ ಕೈಗೊಂಡಿರುವ ಈ ಕಾರ್ಯ ಬಡವರ ಪಾಲಿಗೆ ಸಂಜೀವಿನಿ ಯಾಗಿದೆ ಇದಕ್ಕೆ ನಮ್ಮೆಲ್ಲರ ಆಶೀರ್ವಾದ ಸದಾ ಇರುತ್ತದೆ ಎಂದು ಗವಿಮಠ ಶ್ರೀಗಳು ಹೇಳಿದರು ಸಮಾರಂಭದ ಸಾನಿಧ್ಯವನ್ನು ಮುಸ್ಲಿಂ ಧರ್ಮ ಗುರು ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ವ ತಸ್ಕಿನ್ ವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಇಂತಹ ಮಹತ್ವದ ಕಾರ್ಯ ಕ್ಕೆ ಕೈ ಜೋಡಿಸಿದ ಈ ಓಣಿಯ ಗುರು ಹಿರಿಯರೆಲ್ಲರಿಗೂ ಅಭಿನಂದಿಸಿ ಶುಭ ಆಶೀರ್ವಚನ ನೀಡಿದರು ನಿಖಾ ಕಾರ್ಯಕ್ರಮದ ನೇತೃತ್ವವನ್ನು ಖಾಜಿ ಅಬ್ಬಾಸಲಿ ಮತ್ತು ಮೈನುದ್ದೀನ್ ಖಾಜಿ ರವರು ವಹಿಸಿ ಕುರಾನ್ ಪಠಣ ಮದೀನಾ ಮಸಿದಿಯ ಪೇಶ್ ಇಮಾಮ್ ಹೈದರ್ ಮೌಲೌನಾ ಮಾಡಿದರು ಸಮಾರಂಭದ ಅಧ್ಯಕ್ಷತೆಯನ್ನು ಪಂಚ್ ಕಮಿಟಿಯ ಅಧ್ಯಕ್ಷ ರಾದ ಖಾದರ್ ಸಾಬ್ ಕುದುರಿಮೋತಿ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ ಮಾತನಾಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಇತರರಿಗೆ ಮಾದರಿಯಾಗಿದೆ ಈ ಕಾರ್ಯ ಇದೇ ರೀತಿ ನಿರಂತರವಾಗಿ ನಡೆಯಲಿ ಎಂದು ಹೇಳಿದವರು ಇದಕ್ಕೆ ತಮ್ಮ ಸಹಕಾರ ಇದ್ದೇ ಇರುತ್ತದೆ ಎಂದು ಹೇಳಿದರು ಇನ್ನೂವ೯ ಮುಖ್ಯ ಅತಿಥಿ ಮುಸ್ಲಿಂ ಸಮಾಜದ ನಾಯಕ ಕೆಎಂ ಸಯ್ಯದ್ ರವರು ಮಾತನಾಡಿ ಸರ್ದಾರ್ ಗಲ್ಲಿ ಕಮಿಟಿಯ ಈ ಸಾಮೂಹಿಕ ಮದುವೆ ಕಾರ್ಯಕ್ರಮಕ್ಕೆ ತಮ್ಮ ಪೌಂಡೇಶನ್ ವತಿಯಿಂದ ಪ್ರತಿ ವರ್ಷ ವರ್ಷದಂತೆ ಈ ವರ್ಷವೂ ಸಹ 19 ಜೋಡಿ ವಧು ಗಳಿಗೆ ಬಂಗಾರದ ತಾಳಿ ಕೊಡಿಸಿದ್ದು ಈ ಕಾರ್ಯ ನಿರಂತರವಾಗಿ ಮಾಡುವದಾಗಿ ಹೇಳಿದರು ವೇದಿಕೆ ಮೇಲೆ ಅತಿಥಿಗಳಾಗಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಮಾಜದ ಹಿರಿಯ ಮುಖಂಡ ಸೈಯದ್ ಜುಲ್ಲು ಖಾದರ್ ಖಾದ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ಒಂಟಿಗೂಡಿ ನಗರ ಠಾಣೆ ಇನ್ಸ್ಪೆಕ್ಟರ್ ಸಂತೋಷ್ ಹುಳ್ಳುರ ಪಂಚ ಕಮಿಟಿ ಗೌರವ ಅಧ್ಯಕ್ಷ ರಾದ ಶಾಬುದ್ದೀನ್ ಸಾಬ್ ನೂರ್ ಭಾಷ ಜಿಲ್ಲಾ ಬೋರ್ಡ್ ಅಧ್ಯಕ್ಷ ಪಿರಾ ಹುಸೇನ ಹೊಸಳ್ಳಿ ವಕೀಲರು ಮುಸ್ಲಿಂ ಸುನ್ನಿ ಶಾದಿ ಮಹಲ್ ಅಧ್ಯಕ್ಷ ಏ ಏ ಚೌತಾಯಿ ವಕೀಲರು ಸಮಾಜದ ಹಿರಿಯರಾದ ಬಾಷುಸಾಬ್ ಕತೀಬ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ಅಂಜುಮನ್ ಕಮಿಟಿ ಅಧ್ಯಕ್ಷ ಆಸಿಫ್ ಕಕೀ೯ಹಳ್ಳಿ ನಗರ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ರೇಷ್ಮಾ ಕಾಜಾವಲಿ ಹಳ್ಳಿಗುಡಿ ವನಿತಾ ಬೆಟಗೇರಿ ಕಾರ್ಯಕ್ರಮದಲ್ಲಿ ನದಾಪ ಪಿಂಜಾರ್ ಸಂಘದ ರಾಜ್ಯ ಉಪಾಧ್ಯಕ್ಷ ಜಿಡಿ ನದಾಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಂ ನಾಗ್ತೇ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಹಾಗೂ ಸಾಹಿತಿ ಮುನಾಫ್ ಪಂಚ್ ಕಮಿಟಿ ಉಪಾಧ್ಯಕ್ಷ ಕುತುಬುದ್ದಿನ್ ಬೆಟಿಗೇರಿ ನಬಿಸಾಬ್ ಸಂಕನೂರ್ ತಾಲೂಕು ನದಾಫ್ ಸಂಘದ ಅಧ್ಯಕ್ಷ ಗೊಂದಿ ಹೊಸಳ್ಳಿ ಮುಖಂಡರಾದ ಅಲ್ಲಿಸಾಬ್ ಗಬ್ಬುರ್ ಕಾಂಗ್ರೆಸ್ ಮುಖಂಡರಾದ ಶಿವರೆಡ್ಡಿ ಭೂಮಕ್ಕನವರ್ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಲ್ಟನ್ ನಜೀರ್ ಸಾಬ್ ನೂರ್ ಬಾಷಾ ಬಾಬುಸಾಬ್ ನೂರ್ ಬಾಷಾ ಖಾಜಾ ಸಾಬ್ ಮಂಗಳಾಪುರ ಮೀರಾಸಾಬ್ ಬನಿ ಗೊಳ ಮರ್ದನ್ ಸಾಬ್ ಲುಂಗಿ ರಿಯಾಜ್ ಕುದುರಿ ಮೋತಿ ರಿಯಾಜ್ ಸಿಂದೊಗಿ ಮರ್ದಾನ್ ಸಾ ರೋಣ ಇಬ್ರಾಹಿಂ ಕುದರಿಮೊತಿ ಡಾಕ್ಟರ್ ಎಸ್ ಕೆ ರಾಜೂರ ಖಾಸಿಂಸಾಬ್ ಚಿತ್ತಾರ ಬಾಬುಸಾಬ್ ಸಿಂದೋಗಿ ವಾಸಿಂ ಸಿದ್ನೇಕೊಪ್ಪ ಅಬ್ದುಲ್ ರೆಹಮಾನ್ ಹುಬ್ಬಳ್ಳಿ ಖಾಸಿಂಸಾಬ್ ಚೌಗಡ ಖಾಜಾ ಸಾಬ್ ಹನಕುಂಟಿ ಗವ್ಸಿದ್ದಪ್ಪ ಕಟಗರ್ ಹುಸೇನ್ ಬಾಷಾ ಮಾನ್ವಿ ರಶೀದ್ ನೀರಲ್ಗಿ ಅಕ್ಬರ್ ಸಾಬ್ ಲುಂಗಿ ಪಾಲ್ಗೊಂಡಿದ್ದು ಆರಂಭದಲ್ಲಿ ನಗರಸಭೆ ಮಾಜಿ ಸದಸ್ಯ ಓಣಿಯ ನಾಯಕ ಮಾನ್ವಿ ಪಾಶರವರು ಸ್ವಾಗತಿಸಿದರು ಯುವ ನಾಯಕ ಖಾಸಿಂ ಸರ್ದಾರ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು ಬಾಬು ಸಾಬ್ ನದಾಫ್ ಮಾಸ್ಟರ ನಿರೂಪಣೆ ಮಾಡಿದರೆ ಕೊನೆಯಲ್ಲಿ ಮುಸ್ತಫ ಕುದರಿಮೊತಿ ವಂದನಾರ್ಪಣೆ ಮಾಡಿದರು ಹಾಗೂ ಈ ಸಂದರ್ಭದಲ್ಲಿ ಸರ್ದಾರ್ ಗಲ್ಲಿ ಪಂಚ್ ಕಮಿಟಿ ನೌ ಜವಾನ್ ಕಮಿಟಿ ಹಾಗೂ ಓಣಿಯ ಮಹಿಳೆಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಇದ್ದು ಕಾರ್ಯಕ್ರಮ ಯಶಸ್ವಿ ಗೊಳಿಸಿದರು.
Comments are closed.