ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಗೌರವಧನ, ಪ್ರೋತ್ಸಾಹ ಧನ ಕನಿಷ್ಠ ೧೫ ಸಾವಿರ ನಿಗಧಿ ಮಾಡಲು ಆಗ್ರಹಿಸಿ ಪ್ರತಿಭಟನೆ

Get real time updates directly on you device, subscribe now.

.
ಕರ್ನಾಟಕ ರಾಜ್ಯ ಸಯುಂಕ್ತಾ ಆಶಾ ಕಾರ್ಯಕರ್ತೆಯರ ಸಂಘ  ಕೊಪ್ಪಳ ಜಿಲ್ಲಾ ಸಮಿತಿಯಿಂದ ನಗರದ ಈಶ್ವರ ಪಾರ್ಕನಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಮೆರವಣಿಗೆ ಮಾಡಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಿಯವರಿಗೆ ಮನವಿ ಸಲ್ಲಿಸಿದರು. ಆಶಾ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ.ಲಿಂಗರಾಜ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು. ಈ ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಡಿ.ನಾಗಲಕ್ಷ್ಮಿ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಾ, ಆಶಾ ಕಾರ್ಯಕರ್ತೆಯರ ಹಗಲಿರುಳು ಸಲ್ಲಿಸುತ್ತಿರುವ ಸೇವೆಗಳಿಗೆ ನಿಗದಿಯಾಗಿರುವ ಕೇಂದ್ರದ ಪ್ರೋತ್ಸಾಹಧನವು ಅವರ ಚಟುವಟಿಕೆಗಳನ್ನು ಆರ್‌ಸಿಎಚ್ ಪೋರ್ಟಲ್‌ಗೆ ಲಿಂಕ್ ಮಾಡಿರುವುದರಿಂದ ಅವರಿಗೆ ವೇತನ ಸಂಪೂರ್ಣವಾಗಿ ಸಿಗದೇ ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಮೋಬೈಲ್ ಆಧಾರಿತ ಕೆಲಸವನ್ನು ನೀಡುವುದನ್ನು ಕೈಬಿಡಬೇಕು. ಎನ್‌ಸಿಡಿ, ಎಸಿಎಫ್, ಟಿಬಿ ಸಂಬಂಧಿತ ಕೆಲಸಕ್ಕೆ ವರ್ಷಗಟ್ಟಳೆ ಪ್ರೋತ್ಸಾಹಧನ ನೀಡುತ್ತಿಲ್ಲ. ಆರ್ ಸಿ ಹೆಚ್ (ಆಶಾ ನಿಧಿ) ಪೋರ್ಟಲ್‌ನಲ್ಲಿ ಇರುವ ಅಗಣಿತ ಸಮಸ್ಯೆಗಳ ಕಾರಣಗಳಿಂದ ಮಾಡಿದ ಹಲವಾರು ಚಟುವಟಿಕೆಗಳಿಗೆ ಹಣ ಬರುತ್ತಿಲ್ಲ. ಇತ್ತೀಚೆಗೆ ಆಶಾ ಕಾರ್ಯಕರ್ತೆಯರು ಎಸ್‌ಸಿ. ಎಸ್‌ಟಿ ಹೊರತುಪಡಿಸಿ ಬಿಪಿಎಲ್ ಅಡಿ ಬರುವ ಇತರೆ ವರ್ಗದ ಫಲಾನುಭವಿಗಳಿಗೆ ನೀಡುವ ಯಾವುದೇ ಸೇವೆಗಳಿಗೂ ಪ್ರೋತ್ಸಾಹಧನ ಬರುತ್ತಿಲ್ಲ. ಗರ್ಭಣಿಯರ ಆರೈಕೆ, ಹೆರಿಗೆ, ಮನೆ ಭೇಟಿ ಇತ್ಯಾದಿ ಚಟುವಟಿಕೆಗಳಿಗೆ ಯಾವುದೇ ಪ್ರೋತ್ಸಾಹಧನ ಇಲ್ಲದೇ ದುಡಿಸಿಕೊಳ್ಳಲಾಗುತ್ತಿದೆ.

ಅಲ್ಲದೇ ಇವರಿಗೆ ಇಲಾಖೆಯಿಂದ ಮೋಬೈಲ್ ಹಾಗೂ ಡಾಟಾ ನೀಡದೇ ಇದ್ದರೂ ಮೋಬೈಲ್ ಆಧಾರಿತ ಹತ್ತಾರು ಚಟುವಟಿಕೆಗಗಳನ್ನು
ಮಾಡಿಸಲಾಗುತ್ತಿದೆ. ಜಿಪಿಎಸ್ ಆಧಾರಿತ ಫೋಟೋ ಕೊಡದೇ ಇದ್ದರೆ ವೇತನ ಇಲ್ಲ ಎನ್ನಲಾಗುತ್ತಿದೆ. ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ವೇತನ ಇಲ್ಲ. ಇಂತಹ ಹತ್ತಾರು ಸಮಸ್ಯೆಗಳ ಬಗ್ಗೆ ಕನಿಷ್ಠ ೩ ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ನಡೆಸಬೇಕಿದೆ. ವರ್ಷವಾದರೂ ಸಭೆ ಕರಿದಿಲ್ಲ. ಆದ್ದರಿಂದ ಇಂತಹ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಕಳೆದ ೫-೬ ವರ್ಷಗಳಿಂದ ಹಲವಾರು ಮನವಿ ಸಲ್ಲಿಸಿದಾಗ್ಯೂ ಸಮಗ್ರ ಪರಿಹಾರ ಸಿಗದಿರುವುದು ವಿಷಾದದ ಸಂಗತಿಯಾಗಿದೆ. ಎಂದು ಹೇಳಿದರು. ಈ
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡ್ರ, ತಾಲೂಕು ಮುಖಂಡರುಗಳಾದ ಜ್ಯೋತಿ ಲಕ್ಷ್ಮಿ ಅಯೋಧ್ಯ, ಶಂಕ್ರಮ್ಮ ಕುಕನೂರು, ವಿಜಯಲಕ್ಷ್ಮಿ ಆಚಾರ, ಲಾಲಬೀ, ಗೀತಾ, ಸುನಿತಾ ಹುಲಿಗಿ, ಚಂಪಾ, ದೀಪಾ, ರೇಖಾ ಹೊಸಕೇರಾ, ರಾಜೇಶ್ವರಿ, ಹುಲಿಗೇಮ್ಮ, ಲಕ್ಷ್ಮೀ, ಸಕ್ರಮ್ಮ ಮುಂತಾದ ೫೦೦ ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಬೇಡಿಕೆಗಳು:
ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಮತ್ತು ರಾಜ್ಯ  ಸರಕಾರದಿಂದ ಬರುವ ಗೌರವಧನ ಮತ್ತು ಪ್ರೋತ್ಸಾಹ ಒಟ್ಟಿಗೆ ಸೇರಿಸಿ, ಕನಿಷ್ಠ ೧೫,೦೦೦=೦೦ ರೂ. ಗಳನ್ನು ನಿಗದಿಮಾಡಿ. ಆರ್ ಸಿ ಹೆಚ್ ಪೋರ್ಟಲ್ ನಲ್ಲಿ ಮಾಡಿದಷ್ಟು ಕೆಲಸಗಳಿಗೆ ಪ್ರೋತ್ಸಾಹಧನ ಬರದಿರುವುದರಿಂದ ಪ್ರತಿ ತಿಂಗಳು
ಆಶಾ ಪೋರ್ಟಲ್‌ಗೆ ಡಾಟಾ ಎಂಟ್ರಿ ಮಾಡಿದ್ದನ್ನು ವೇರಿಫೈ ಮಾಡುವಾಗ ಪ್ರತಿ ಸಬ್‌ಸೆಂಟರ್‌ನ ಒಬ್ಬ ಆಶಾ ಕಾರ್ಯಕರ್ತೆ ಹಾಗೂ ಫೆಸಿಲಿಟೇಟರ್ ಸಮ್ಮುಖದಲ್ಲಿ ಮಾಡಬೇಕು. ? ಕ್ಲೇಮ್ ಹಾಗೂ ಸ್ಯಾಂಕ್ಷನ್ ಪ್ರತಿ ಕಡ್ಡಾಯವಾಗಿ ನೀಡಬೇಕು. ಸ್ಪೂಟಮ್ ತರುವುದನ್ನು ಕಡ್ಡಾಯ
ಮಾಡಬಾರದು. ಸ್ಪೂಟಮ್ ತರೆದಿದ್ದಾಗ ಸಂಬಳಕ್ಕೆ ಸಹಿ ಮಾಡಲು ಯಾವುದೇ ಲಿಂಕ್ ಮಾಡಬಾರದು. ? ಅರ್ಬನ್ ಆಶಾಗಳನ್ನು ತಮ್ಮದಲ್ಲದ ದೂರದ ಪ್ರದೇಶಗಳಲ್ಲಿ ಕೆಲಸಕ್ಕೆ ನಿಯೋಜಿಸಬಾರದು. ಒಬ್ಬರನ್ನು ಕೇವಲ ೨೫೦೦ ಜನಸಂಖ್ಯೆಗೆ ಮಾತ್ರ ಸೀಮಿತಗೊಳಿಸಬೇಕು.
? ಜಿಲ್ಲಾ ಕುಂದುಕೊರತೆ ಸಭೆ ವರ್ಷದಲ್ಲಿ ನಾಲ್ಕು ಬಾರಿ ಕಡ್ಡಾಯವಾಗಿ ಕರೆಯಬೇಕು. (ಸರಕಾರದ ಆದೇಶದಂತೆ) ? ಅನಗತ್ಯ ಸರ್ವೇ ಹಾಗೂ ಕಾರ್ಯಕ್ರಮಗಳಲ್ಲಿ ಆಶಾ ತೊಡಗಿಸಿಕೊಳ್ಳುವುದನ್ನು ಕೈಬಿಡಬೇಕು.  ಆರೋಗ್ಯ ಕೇಂದ್ರ ಹಾಗೂ ಸಾ. ಆಸ್ಪತ್ರೆಗಳಲ್ಲಿ ಆಶಾ ವಿಶ್ರಾಂತಿ ಕೊಠಡಿ ಕೊಡದಿರುವ ಬಗ್ಗೆ. ? ಪೆಸಿಲಿಟೇಟರ್ ವೇತನಕ್ಕೆ ಆಶಾ ಭೇಟಿ ಉPS ಫೋಟೋ ಸಲ್ಲಿಸಬೇಕೆಂಬ ಅನಗತ್ಯ ನಿಬಂಧನೆ ಕೈಬಿಡಬೇಕು.

Get real time updates directly on you device, subscribe now.

Comments are closed.

error: Content is protected !!