“ ಅಂತರಾಷ್ಟ್ರೀಯ ರೋಗನಿದಾನಶಾಸ್ತ್ರ ದಿನಾಚರಣೆ

Get real time updates directly on you device, subscribe now.

ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೊಪ್ಪಳ, ರೋಗನಿದಾನಶಾಸ್ತ್ರ ವಿಭಾಗ,ಕಿಮ್ಸ್‌ ಕೊಪ್ಪಳ, ಕರ್ನಾಟಕ ರಾಜ್ಯ ರೋಗನಿದಾನಶಾಸ್ತ್ರ (ಕೆ.ಸಿ.ಐ.ಎ.ಪಿ.ಎಂ.)ಪರಿಷತ್ತುಮತ್ತು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಕೊಪ್ಪಳ ವತಿಯಿಂದ “ ಅಂತರಾಷ್ಟ್ರೀಯ ರೋಗನಿದಾನಶಾಸ್ತ್ರ ದಿನಾಚರಣೆ ಯನ್ನು ಆಚರಿಸಲಾಯಿತು. ಇದೆ ಸಂದರ್ಭದಲ್ಲಿ 2ನೇ ವರ್ಷದ (ಅಭಯನ್ಸ್-2021)  ರ ಎಂ.ಬಿ.ಬಿ.ಎಸ್.‌ ವಿದ್ಯಾರ್ಥಿಗಳಾದ ಕು.ವಚನಶ್ರೀ, ಶೀತಲ್‌, ಗಜಾನನ ಇವರಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರವನ್ನು ಕಿಮ್ಸ್‌ ವಿದ್ಯಾರ್ಥಿಗಳಾದ ಕುಮಾರಿ ಮಿಜಭಾ, ಕುಮಾರ ಕೃಷ್ಣಕಿಶೋರ್‌ ರವರು ಆಯೋಜಿಸಿದ್ದರು. ಶಿಬಿರದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ಕಾರ್ಯಕ್ರಮದಲ್ಲಿ ಕಿಮ್ಸ್ ನ ಮುಖ್ಯಸ್ಥರಾದ ಡಾ.ವಿಜಯನಾಥ ಇಟಗಿ, ಪ್ರಾಂಶುಪಾಲರಾದ ಡಾ.ರಾಘವೇಂದ್ರ ಬಾಬು, ಕಿಮ್ಸ್‌ ವೈದ್ಯಕೀಯ ಅಧಿಕ್ಷಕರಾದ ಡಾ.ವೇಣುಗೋಪಾಲ ರವರು ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಸುಶೀಲಕುಮಾರ ಕಲಾಲ, ರೋಗನಿದಾನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಅನಿರುದ್ಧ ಕುಷ್ಠಗಿ, ಹಾಗೂ ಡಾ.ಸಿದ್ಧಲಿಂಗರಡ್ಡಿ ಸಹಪ್ರಾಧ್ಯಾಪಕರು, ಡಾ.ಹೇಮವತಿ ಸಹಾಯಕ ಪ್ರಾಧ್ಯಾಪಕರು, ಡಾ.ವಿನಯಕುಮಾರ, ಡಾ.ಧನ್ಯಾ, ಡಾ.ಶಶಿಕಲಾ, ಮತ್ತು ರೆಡ್‌ ಕ್ರಾಸ್‌ ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾಥಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!