ಆಲಮಟ್ಟಿ ಆಣೆಕಟ್ಟಿನಿಂದ ತುಂಗಭಧ್ರಾ ಆಣೆಕಟ್ಟಿಗೆ ಕಾಲುವೆ ಮೂಲಕ ನೀರು ಹರಿಸಲು ಯೋಜನೆ ಕೈಗೆತ್ತಿಕೊಳ್ಳಲು ಮನವಿ
ಆಲಮಟ್ಟಿ ಆಣೆಕಟ್ಟಿನಿಂದ ತುಂಗಭಧ್ರಾ ಆಣೆಕಟ್ಟಿಗೆ ಕಾಲುವೆ ಮೂಲಕ ನೀರು ಹರಿಸಲು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಸಂಸದರಾದ ಕರಡಿ ಸಂಗಣ್ಣ ಅವರು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಕೊಪ್ಪಳ, ವಿಜಯನಗರ ಮತ್ತು ಗದಗ ಜಿಲ್ಲೆಯ ಪ್ರವಾಸಕ್ಕಾಗಿ ಕೊಪ್ಪಳ ಜಿಲ್ಲೆಯ ಗಿಣಿಗೇರಾದ ಎಂ.ಎಸ್.ಪಿ.ಎಲ್ ಏರೋಡ್ರಮ್‌ಗೆ ನವೆಂಬರ್ 2ರಂದು ಆಗಮಿಸಿದ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಿ ಸಂಸದರು ಮನವಿ ಸಲ್ಲಿಸಿದರು.
ಕೊಪ್ಪಳ ಜಿಲ್ಲೆಯು ಸತತ ಅತೀವೃಷ್ಠಿ ಹಾಗೂ ಬರಗಾಲಗಳಿಂದ ತತ್ತರಿಸುತ್ತಿರುವ ಜಿಲ್ಲೆಯಾಗಿದ್ದು, ಈ ಭಾಗದ ಬಹುತೇಕ ರೈತರು ಮಳೆಯನ್ನೇ ಆಶ್ರಯಿಸಿರುತ್ತಾರೆ. ಪ್ರಸಕ್ತ ಸಾಲಿನಲ್ಲಿ ಮಳೆಯ ಅಭಾವದಿಂದಾಗಿ ತುಂಗಭದ್ರಾ ಜಲಶಯಕ್ಕೆ ಒಳ ಹರಿವು ಕಡಿಮೆ ಇರುತ್ತದೆ ಇದರಿಂದಾಗಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಮತ್ತು ರೈತರ ಜಮೀನುಗಳಿಗೆ ನೀರಿನ ಸರಬರಾಜು ಮಾಡಲು ಅಭಾವ ಉಂಟಾಗುತ್ತಿದೆ. ಈ ಸನ್ನಿವೇಶವು ಪ್ರಾಯಶಃ ಪ್ರತಿ ವರ್ಷದಲ್ಲಿಯೂ ಕಾಣಸಿಗುತ್ತದೆ. ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಲಭ್ಯವಿದ್ದು, ಬಳಕೆಯಾಗದ ನೀರು ಬೇರೆ ರಾಜ್ಯಕ್ಕೆ ಹೋಗುತ್ತಿದೆ.
ತುಂಗಭದ್ರಾ ಜಲಾಶಯವು ಆಲಮಟ್ಟಿ ಜಲಾಶಯ ಮಟ್ಟಕ್ಕೆ ಲಾಂಡ್ ಗ್ರಾö್ಯವಿಟಿಯಲ್ಲಿ ಕೆಳಗೆ ಇರುವ ಪ್ರಯುಕ್ತ ಕೆನಾಲ್ ಮೂಲಕ ನೀರನ್ನು ತುಂಗಭಧ್ರಾ ಜಲಾಶಯಕ್ಕೆ ಹರಿಸಿದಲ್ಲಿ ಈ ಭಾಗದ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀರಿನ ಅಭಾವವನ್ನು ಶಾಶ್ವತವಾಗಿ ನಿವಾರಿಸಬಹುದಾಗಿದೆ. ಕಾರಣ ಮಾನ್ಯರು ಈ ಕುರಿತು ತಜ್ಞರೊಂದಿಗೆ ಪರಿಶೀಲಿಸಿ, ಈ ಮಹತ್ವದ ಯೋಜನೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು ಎಂದು ಕೋರಿ ಸಂಸದರು ತಮ್ಮ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಹೇಮಲತಾ ನಾಯಕ ಇದ್ದರು.

Comments are closed.