ರಾಜ್ಯೋತ್ಸವ ಆಚರಿಸಿಕೊಳ್ಳುವ ಏಕೈಕ ರಾಜ್ಯ ಕರ್ನಾಟಕ : ಜನಾರ್ದನರೆಡ್ಡಿ
ಗಂಗಾವತಿ: ಇಡೀ ದೇಶದಲ್ಲೇ ರಾಜ್ಯೋತ್ಸವ ಆಚರಿಸಿಕೊಳ್ಳುವ ಏಕೈಕ ರಾಜ್ಯ ಕರ್ನಾಟಕವಾಗಿದ್ದು, ಸುವರ್ಣ ಕರ್ನಾಟಕದ ಸಂಭ್ರಮ ಜನರಲ್ಲಿ ಹಬ್ಬದ ವಾತವರಣೆ ನಿರ್ಮಾಣಗೊಂಡಿದೆ, ರಾಜ್ಯೋತ್ಸವ, ಆನೆಗೊಂದಿ ಉತ್ಸವ, ಗಣೇಶೋತ್ಸವ ಹಾಗು ಗಂಗಾವತಿ ಉತ್ಸವದ ಮೂಲಕ ಕ್ಷೇತ್ರದ ಜನರಿಗೆ ಬರುವ ದಿನಗಳಲ್ಲಿ ಬರಪೂರ ಮನೋರಂಜನೆ ನೀಡುವುದಾಗಿ ಶಾಸಕ ಗಾಲಿ ಜನಾರ್ದನರೆಡ್ಡಿ ಭರವಸೆ ನಿಡಿದರು.
ಅವರು ನಗರದ ನೆಹರು ಪಾರ್ಕ್ ಬಳಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷ ಸೈಯ್ಯದ್ ಜಿಲಾನ್ ಪಾಶಾ ಖಾದ್ರಿ ಇವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಸುವರ್ಣ ಸಂಭ್ರಮ ಹಾಗು ಅಪ್ಪು ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಂಗಾವತಿ ಮೈಸೂರು ನಗರದಂತೆ ಮಾದರಿಯಾಗಿ ಮಾಡುವೆ, ಅಕರ್ಷಕ ಸರ್ಕಲ್‌ಗಳಿಗೆ ದಿ.ರಾಜಾ ಶ್ರೀರಂಗದೇವರಾಯಲು, ನಟ ದಿ.ವಿಷ್ಣು ವರ್ಧನ್, ಹಾಗು ಶ್ರೀಕೃಷ್ಣದೇವರಾಯರ ಪುತ್ಥಳಿ ಸ್ಥಾಪಿಸುವೆ, ಅಂಜನಾದ್ರಿಯಲ್ಲಿ ಮಾದರಿ ರಂಗ ಮಂದಿರವನ್ನು ಶ್ರೀ ವಾಲ್ಮೀಕಿ ಅವರ ಹೆಸರಿನಲ್ಲಿ ನಿರ್ಮಾಣ ಮಾಡುತ್ತಿದ್ದು, ಐದು ಸಾವಿರ ಜನರಿಗೆ ಆಸನದ ವ್ಯವಸ್ಥೆ ಅಮೇರಿಕಾಲ್ಲಿರುವ ರಂಗ ಮಂದಿರಗಳ ಮಾದರಿ ಅನುಸರಿಸಲಾಗುವುದು, ಕೆಲ ಅಡಿಟೋರಿಯಮ್ ನಿರ್ಮಿಸಿ ರಾಮಾಯಣದ ಕೆಲ ಭಾಗಗಳ ಚಿತ್ರಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು, ವಿದೇಶಿಗರು ಕೊಂಡಾಡುವಂತೆ ಅಭಿವೃದ್ಧಿಪಡಿಸಲಾಗುವುದು ಗಂಗಾವತಿಯಲ್ಲೂ ರಂಗ ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಪ್ಪು ಉತ್ಸವ ಆಚರಣೆ ಅತ್ಯಂತ ಸ್ಮರಣೀಯವಾಗಿದೆ, ಇನ್ನೂ ನಮ್ಮ ನಡುವೆ ಅವರು ಜೀವಂತವಾಗಿರುವುದಕ್ಕೆ ಅವರ ಸಾಮಾಜಿಕ ಕೈಂಕರ್ಯಗಳೇ ಸಾಕ್ಷಿ, ನಮ್ಮ ಕುಟುಂಬದೊಂದಿಗೆ ಅತ್ಯಂತ ಆತ್ಮೀಯ ನಂಟು ರಾಜ್ ಕುಟುಂಬ ಹೊಂದಿತ್ತು, ಗಂಗಾವತಿ ಜನತೆಯು ನನ್ನ ಮೇಲಿಟ್ಟ ಭರವಸೆ ಹುಸಿಗೊಳಿಸುವುದಿಲ್ಲ ಎಂದರು.
ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಗಂಗಾವತಿಯಿಂದ ಬೆಂಗಳೂರವರೆಗೆ ತಮ್ಮದೆ ಆದ ಸ್ನೇಹಿತರನ್ನು ಹೊಂದಿರುವ ಜಿಲಾನ ಪಾಶಾ ಖಾದ್ರಿ ಇವರು ಇಲ್ಲಿನ ಎಲ್ಲ ಸಮುದಾಯಗಳೊಟ್ಟಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ, ಅವರ ನಿರಂತರ ಶ್ರಮದ ಫಲವೇ ಇಂದಿನ ಈ ಕಾರ್ಯಕ್ರಮ ಅವರ ಹೋರಾಟದ ಬದುಕು ಇನ್ನೂ ಬೆಳಗಲಿ, ಕನ್ನಡ ಪರ ಸಂಘಟನೆಗಳು ಉತ್ತಮ ಕಾರ್ಯ ಮಾಡುವ ಮೂಲಕ ನಾಡಿಗಾಗಿ ಮಿಡಿಯಲಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲಾನ್ ಪಾಶಾ ಖಾದ್ರಿ, ಮುಖಂಡರಾದ ಮನೋಹರಗೌಡ ಹೇರೂರು, ರಾಜುನಾಯಕ, ಬಸವರಾಜ್ ಸ್ವಾಮಿ ಮಳೀಮಠ, ಶೇಖ್ ನಬೀ, ಸಯ್ಯದ್ ಅಲಿ, ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಯವರನ್ನು ಬೃಹತ್ ಮಾಲೆಯೊಂದಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು. ಪತ್ರಕರ್ತರಾದ ಕೆ.ನಿಂಗಜ್ಜ, ತಿರುಪಾಲಯ್ಯ, ಶರಣಯ್ಯಸ್ವಾಮಿ ಕರಡಿಮಠ, ಸುದರ್ಶನ ವೈದ್ಯ ಇವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಚಲನಚಿತ್ರ ನಿರ್ಮಾಪಕ ಹಾಗು ನಿರ್ದೇಶಕ ಮಧುಸೂದನ ಹವಲ್ದಾರ್, ಮುಖಂಡರಾದ ದಳಪತಿ ದುರುಗಪ್ಪ ನಾಯಕ, ಕೆ.ಅಂಬಣ್ಣ, ಸರ್ವೇಶ್ ವಸ್ತ್ರದ, ಶರಣಪ್ಪ ದೊಡ್ಡಮನಿ, ಕರ್ನಾಟಕ ಕಾರ್ಯನಿತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕಾ ಅಧ್ಯಕ್ಷ ನಾಗರಾಜ್ ಇಂಗಳಗಿ, ಚಲನಚಿತ್ರ ನಟರಾದ ಶರದ ದಂಡೀನ ವಕೀಲರು, ವಿಷ್ಣುತೀರ್ಥ ಜೋಷಿ, ಚಕ್ರವರ್ತಿ ನಾಯಕ, ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಕುಲಕರ್ಣಿ, ಮಹಿಳಾ ಪ್ರಮುಖರಾದ ಲಲಿತಾ ನಾಗರಾಜ್ ಬೋವಿ, ಸೇರಿದಂತೆ ಅನೇಕರು ಇದ್ದರು.
Comments are closed.