ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಕ್ತಾರರಾಗಿ ಪರಶುರಾಮ್ ಕೆರೆಹಳ್ಳಿ ನೇಮಕ
ಕೊಪ್ಪಳ :
ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರಾದ ಆರ್ ಧರ್ಮಸೇನ್ ರವರು ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಶಿವರಾಜ್ ಎಸ್ ತಂಗಡಗಿ ರವರ ಆದೇಶ ಮೇರೆಗೆ ಮತ್ತು ಶಾಸಕರಾದ ರಾಘವೇಂದ್ರ ಹಿಟ್ನಾಳ ರವರ ಸಹಕಾರದೊಂದಿಗೆ , Sc ಘಟ್ಟದ ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಹೆಚ್ ಪೂಜಾರ್ ಅವರ ಆದೇಶ ಮೇರೆಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ವರಿಷ್ಠರ ಸೂಚನೆ ಮೇರೆಗೆ ಪರಶುರಾಮ್ ಕೆರೆಹಳ್ಳಿ ರವರನ್ನು ಶಾಸಕರಾದ ಕೆ ರಾಘವೇಂದ್ರ ಹಿಟ್ನಾಳ ರವರು ಕೊಪ್ಪಳ ನಗರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ, ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರ ಸಮ್ಮುಖದಲ್ಲಿ ಆದೇಶ ಪ್ರತಿಯನ್ನು ಕೆರೆಹಳ್ಳಿ ಅವರಿಗೆ ಹಸ್ತಾಂತರಿಸಿದರು. ಪರಶುರಾಮ್ ಕೆರೆಹಳ್ಳಿ ರವರು ಕಾಂಗ್ರೆಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದಲೂ ನಿರಂತರವಾಗಿ ನಿಷ್ಠಾವಂತ ಕಾರ್ಯಕರ್ತನಾಗಿ ಸಕ್ರಿಯವಾಗಿ ಪಕ್ಷದಲ್ಲಿ ತೊಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಪಕ್ಷ ಕಟ್ಟಲು ಶ್ರಮವಹಿಸಿದಾರೆ ಮತ್ತು ಕೊಪ್ಪಳ ವಿಧಾನಸಭಾ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನದ್ಯಾಂತ ಶಾಸಕರು ಕೆ ರಾಘವೇಂದ್ರ ಹಿಟ್ನಾಳ್ ರವರ ಜೊತೆಯಲ್ಲಿ ಪ್ರವಾಸ ಮಾಡಿ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಗ್ರಾಮ ಗಳಲ್ಲಿ ಎಸ್ಸಿ ಎಸ್ಟಿ ಒಬಿಸಿ Sc St OBC ಅಲ್ಪಸಂಖ್ಯಾತ, ಸಮುದಾಯದವರನ್ನು ಒಗ್ಗೂಡಿಸಿ ಎಲ್ಲರನ್ನು ವಿಶ್ವಾಸಕ್ಕೆ, ತೆಗೆದುಕೊಂಡು, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸುವಲ್ಲಿ ಶ್ರಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ಗೆಲ್ಲಲು ಇವರು ಕೂಡ ಒಬ್ಬರು ಪ್ರಮುಖರಾಗಿದ್ದಾರೆ. ಪಕ್ಷ ಕಟ್ಟಲು ಶ್ರಮವಸಿದ್ದಾರೆ. ಇವರ ಕೆಲಸ ಕಾರ್ಯಗಳನ್ನು ಗುರುತಿಸಿ ಹಾಲಿ ತಾಲೂಕು ಬ್ಲಾಕ್ ಎಸ್ಸಿ ಘಟಕ ಅಧ್ಯಕ್ಷ ಸ್ಥಾನದಿಂದ ಮುಂಬಡ್ತಿಯಾಗಿ ಜಿಲ್ಲಾ ಮಾಧ್ಯಮ ವಕ್ತಾರರಾಗಿ ಪಕ್ಷದ ವರಿಷ್ಠರು ಇವರನ್ನು ಆಯ್ಕೆ ಮಾಡಿದ್ದಾರೆ. ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ ರವರ ಆಶೀರ್ವಾದದಿಂದ ಮತ್ತು ರಾಘಣ್ಣನವರ ಸಹಕಾರದಿಂದ ಈ ಒಂದು ಜವಾಬ್ದಾರಿತವಾದ ಸ್ಥಾನಮಾನ ಲಭಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು, ಕೆ ರಾಜಶೇಖರ್ ಹಿಟ್ನಾಳ್ ರವರು, ಅಮ್ಜದ್ ಪಟೇಲ್ ರವರು, ಮುತ್ತುರಾಜ್ ಕುಷ್ಟಗಿ ರವರು, ಮಹೇಂದ್ರ ಚೋಪ್ರಾ ರವರು, ಕೃಷ್ಣಾರೆಡ್ಡಿ ಗಲ್ಬಿರವರು,ಪ್ರಸನ್ನ ಗಡದ ರವರು,ಬಾಲಚಂದ್ರನ್ ಮುನಿರಾಬಾದ್ ರವರು, ಗೂಳಪ್ಪ ಹಲಗೇರಿ, ಕೆಎಂ ಸೈಯದ್ ರವರು, ಜನಾರ್ದನ್ ಹುಲಿಗಿ , ರವಿ ಕುರುಗೋಡು, ಖತೀಬ್ ಭಾಷ ,ಕಾಟನ್ ಪಾಷ, ಮಾನ್ವಿಪಾಷ, ಅಕ್ಬರ್ ಪಲ್ಟನ್, ಹನುಮೇಶ ಹೊಸಳ್ಳಿ, ಸಲೀಂ ಅಳವಂಡಿ. ಗವಿಸಿದ್ದನಗೌಡ ಪಾಟೀಲ್ ,ಮಾಲತಿ ನಾಯಕ , ಶೈಲಜಾ , ಜ್ಯೋತಿ ಗುಂಡಬಾಳ, ಇಂದ್ರಬಾವಿ ಕಟ್ಟಿ, ಸಾವಿತ್ರಿ ಮುಜಾಮುದ್ದಾರ್, ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.