“ಕ್ಷೀರ ಕಲ್ಪ” ಆಯುರ್ವೇದ ‘ಪಂಚಗವ್ಯ’ ಉಚಿತ ಶಿಬಿರ

Get real time updates directly on you device, subscribe now.

 

ಕೊಪ್ಪಳ :

 

ಆರೋಗ್ಯದ ಮಹತ್ವ ತಿಳಿಸುವ ಮತ್ತು ಅನಾರೋಗ್ಯ ಪೀಡಿತರನ್ನು ಗುಣಪಡಿಸುವ ಸದುದ್ದೇಶದಿಂದ ಬೆಂಗಳೂರಿನ ಖ್ಯಾತ ಆಯುರ್ವೇದ ತಜ್ಞ ಡಾ.ಡಿ.ಪಿ ರಮೇಶ ಅವರಿಂದ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಆಸ್ಪತ್ರೆ ಮತ್ತು ಪ್ರಗತಿ ಮಹಿಳಾ ಮಂಡಳಿ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜ್ನಲ್ಲಿ ಇದೇ ಅ. 30ರಂದು ಸೋಮವಾರ ಬೆಳಿಗ್ಗೆ 9 : 00 ಗಂಟೆಯಿಂದ ಸಂಜೆ 5 : 00ರವರಗೆ ಈ ಉಚಿತ ತಪಾಸಣ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾನ್ಸ್ ರ್, ಸಂದಿವಾತ, ಕುಲು ನೋವು, ಉಬ್ಬಿದ ನರಗಳು, ಹೃದಯ ಸಂಬಂಧಿತ ಕಾಯಿಲೆಗಳು, ಮಧುಮೇಹ, ರಕ್ತದೊತ್ತಡ, ಥೈರಾಯಿಡ್, ಅರ್ಬುದ, ಚರ್ಮ ಕಾಯಿಲೆಗಳು, ವಾಯು ಪ್ರಕೋಪ, ಅಲರ್ಜಿ, ಉಬ್ಬಸ, ಬೊಜ್ಜು,ಕೂದಲು ಉದುರುವಿಕೆ, ಮಹಿಳೆಯರಿಗೆ ಸಂಬಂಧಪಟ್ಟ ವಿವಿಧ ಕಾಯಿಲೆಗಳು ಸೇರಿದಂತೆ ಪಂಚಗವ್ಯ ಪದ್ಧತಿಯಿಂದ ಉಚಿತವಾಗಿ ತಪಾಸಣೆಯನ್ನು ಮಾಡಲಾಗುವುದು. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪತ್ರಿಕಾಗೋಷ್ಠಿಯ ಮುಖೇನ ಮನವಿ ಮಾಡಲಾಯಿತು. ಹೆಚ್ಚಿನ ಮಾಹಿತಿಗಾಗಿ ಸಹಾವಾಣಿ ಜಂಗಮ ಸಂಖ್ಯೆ ೮೭೨೨೩೯೪೫೯೯/ ೮೮೬೧೬೯೦೭೭೭/೭೩೩೭೬೬೭೫೦೯/ ಈ ಸಂಖ್ಯೆಗಳಿಗೆ ಕರೆ ಮಾಡಬಹುದು. ಪತ್ರಿಕಾಗೋಷ್ಠಿಯಲ್ಲಿ ಮುಖ್ಯಸ್ಥರಾದ ವೇಣಗೋಪಾಲ ವಕೀಲರು, ಕೆ.ಜಿ ಕುಲಕರ್ಣಿ, ಜಿ.ಹಿರೇಮಠ, ವಿಜಯ್, ನಗರಸಭಾ ಸದಸ್ಯ ಗುರುರಾಜ ಹಲಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!