ಕೆಡಿಪಿ ಸದಸ್ಯರಾಗಿ ಕುರಗೋಡ ರವಿ ಯಾದವ ನೇಮಕ

Get real time updates directly on you device, subscribe now.

ಕೊಪ್ಪಳ : ಕಾಂಗ್ರೆಸ್ ಯುವ ಮುಖಂಡ ಹಾಗೂ ಜಿಲ್ಲಾ ವಕ್ತಾರ ಕುರಗೋಡ ರವಿ ಯಾದವರನ್ನು ಕೆಡಿಪಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಈ ಕುರಿತು ಅಧಿಸೂಚನೆ ಹೊರಡಿಸಿರುವ ರಾಜ್ಯಪಾಲರು

ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಕೊಪ್ಪಳ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿಗೆ ಹಿಂದುಳಿದ ಪ್ರವರ್ಗದ  ಕುರುಗೋಡ ರವಿ ಯಾದವ, ಶ್ರೀಹರಿ ನಿವಾಸ, ಗೌರಿ ಶಂಕ್ರ ದೇವಸ್ಥಾನ ಹತ್ತಿರ, ಗಾಂಧಿ ನಗರ, ಗದಗ ರಸ್ತೆ, ಕೊಪ್ಪಳ ಇವರನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶಿಸಿದ್ದಾರೆ.  ರವಿ ಕುರಗೋಡ ಯಾದವ ನೇಮಕಕ್ಕೆ ಸ್ನೇಹಿತರು, ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!