ಪ್ರಸ್ತುತ ಅವಧಿಯಲ್ಲಿ ಎಲ್ಲಾ ನೀರಾವರಿ ಯೋಜನೆಗಳು ಪೂರ್ಣ-ಶಾಸಕ ಕೆ.ರಾಘವೇಂದ್ರ ಹಿಟ್ನಾಳ
ಕೊಪ್ಪಳ : ಕೊಪ್ಪಳ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಹಳೇ ಬಂಡಿಹರ್ಲಾಪುರ ಜಿ.ಪಂ ವ್ಯಾಪ್ತಿಯ ಅಗಳಕೇರಾ ಶಿವಪುರ ಹೊಸಬಂಡಿಹರ್ಲಾಪುರ ಹಳೆ ಬಂಡಿಹರ್ಲಾಪುರ ಬಸಾಪುರ ರಾಜಾರಾಮಪೇಟೆ ನಾರಾಯಣಪೇಟೆ ಅಯೋದ್ಯ ಮಹಮದನಗರ ಕವಳಿ ಗ್ರಾಮಗಳ ಲ್ಲಿ ಅಭಿನಂದನೆ ಹಾಗೂ ಜನಸಂಪರ್ಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಈ ಅವಧಿಯಲ್ಲಿ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದರ ಕುರಿತು ಪ್ರಮುಖ ಆದ್ಯತೆ ನೀಡಿದ್ದೇವೆ. ಬಹದ್ದೂರ್ ಬಂಡಿ ನವಲಕಲ್ ಏತ ನೀರಾವರಿ ಯೋಜನೆ,ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆ ಹಾಗೂ ಕೊಪ್ಪಳ-ಯಲಬುರ್ಗ ಕೆರೆ ತುಂಬಿಸುವ ಯೋಜನೆಯನ್ನ ಪೂರ್ಣಗೊಳಿಸಿ ಕೊಪ್ಪಳ ಕ್ಷೇತ್ರವನ್ನ ಸಮಗ್ರನೀರಾವರಿ ಪ್ರದೇಶವನ್ನಾಗಿ ಮಾಡುವ ಗುರಿಯನ್ನ ಹೊಂದಿದ್ದೇವೆ.ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರ ಈ ಯೋಜನೆಗಳಿಗೆ ಬಿಡಿಗಾಸು ಹಣವನ್ನ ನೀಡಲಿಲ್ಲ ಹಾಗಾಗಿ ನೀರಾವರಿ ಯೋಜನೆಗಳ ಕಾಮಗಾರಿ ತಟಸ್ಥವಾಗಿದ್ದವು ಇವಾಗ ನಮ್ಮ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಎಲ್ಲಾ ನೀರಾವರಿ ಯೋಜನೆಗಳಿಗೆ ದುಡ್ಡು ಬೀಡುಗಡೆ ಮಾಡಿಸಿ ಸಂಪೂರ್ಣವಾಗಿ ನೀರಾವರಿ ಯೋಜನೆಗಳ ಕಾಮಗಾರಿಯನ್ನ ಮುಗಿಸುತ್ತೇವೆ ಎಂಬ ಭರವಸೇ ವ್ಯಕ್ತಪಡಿಸಿದರು.
ಕ್ಷೇತ್ರದ ಪ್ರತಿಯೊಂದು ಗ್ರಾಮವನ್ನು ಗಾಂಧಿಜೀ ಅವರ ಕನಸಿನ ಅವರ ಗ್ರಾಮ ಸ್ವರಾಜ್ಯದ ಗ್ರಾಮವನ್ನಾಗಿ ಮಾಡುವ ಸಂಕಲ್ಪದನ್ವಯ ಪ್ರತಿಯೊಂದು ಗ್ರಾಮದ ಅಭಿವ್ರುದ್ದಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನ ನೀಡಲಾಗಿದೆ.ಕಲ್ಯಾಣ ಕರ್ನಾಟಕ ಪ್ರದೇಶಾಭಿವ್ರುದ್ದಿ ಮಂಡಳಿ ಯೋಜನೆಡಿಯಲ್ಲಿ ನಮ್ಮ ಕ್ಷೇತ್ರಕ್ಕೆ 85 ಕೋಟಿ ಅನುಧಾನ ಬಂದಿದ್ದು ಕ್ಷೇತ್ರದ 104 ಗ್ರಾಮಗಳಿಗೂ ಸಮನಾಗಿ ಹಂಚಿಕೆ ಮಾಡಿ ಗ್ರಾಮಗಳ ಅಭಿವ್ರುದ್ದಿಗೆ ಶ್ರಮಿಸಲಾಗುವುದು ಎಂದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಪರಿಹಾರ ಧನ ಚೆಕ್ ವಿತರಣೆ
ಕೆಲವು ದಿನಗಳ ಹಿಂದೆ ಕೊಪ್ಪಳ ನಗರದ ಕುಷ್ಟಗಿ ರಸ್ತೆಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಹೊಟೇಲ್ ಹಾಗೂ ಆಟೋಮೊಬೈಲ್ ಅಂಗಡಿ ಸುಟ್ಟುಹೋಗಿ ಅಪಾರ ಪ್ರಮಾಣದ ಹಾನಿಯುಂಟಾಗಿತ್ತು. ಅಂದು ಸ್ಥಳಕ್ಕೆ ಭೇಟಿ ನೀಡಿ ಘಟನೆಯಿಂದ ಉಂಟಾಗಿದ್ದ ಹಾನಿಯನ್ನು ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ವೀಕ್ಷಿಸಿ ಸೂಕ್ತ ಪರಿಹಾರ ಕಲ್ಪಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದ್ದರು. ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸುಟ್ಟು ಹೋಗಿದ್ದ ಅಂಗಡಿಯ ಮಾಲಿಕರಿಗೆ ಪರಿಹಾರ ಧನದ ಚೆಕ್ ನ್ನ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ವಿತರಣೆ ಮಾಡಿದರು. ಈ ವೇಳೆ ನಗರಸಭೆಯ ಅಧ್ಯಕ್ಷರಾದ ಶಿವಗಂಗ ಶಿವರೆಡ್ಡಿ ಭೂಮಕ್ಕನವರ್ ,ನಗರಸಭೆಯ ಸದಸ್ಯ ಮುತ್ತುರಾಜ್ ಕುಷ್ಟಗಿ,ಕೆ.ಎಮ್ ಸೈಯದ್,ರಾಮಣ್ಣ ಕಲ್ಲಣ್ಣನವರ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷರಾದ ಟಿ.ಜನಾರ್ಧನ ಹುಲಿಗಿ,ಮಾಜಿ ತಾಲೂಕು ಪಂಚಾಯತ ಅಧ್ಯಕ್ಷರಾದ ಬಾಲಚಂದ್ರನ ಮುನಿರಬಾದ್ ತಹಶೀಲ್ದಾರ್ ವಿಠ್ಠಲ್ ಚೌಗಲೇ,ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದುಂಡೇಶ ತುರಾದಿ, ಮುಖಂಡರಾದ ಕೆ.ಎಮ್ ಸೈಯದ್ ,ಯಂಕಪ್ಪ ಹೊಸಳ್ಳಿ,ಈರಣ್ಣ ಹುಲಿಗಿ,ಯಮನೂರಪ್ಪ ಬಸಾಪುರ,ಧರ್ಮಣ್ಣ ಕಂಪಸಾಗರ,ಶರಣಪ್ಪ ಉಪ್ಪಾರ,ಭೀಮಶೆಪ್ಪ ಉಪ್ಪಾರˌಆಂಜನೇಯಲು,ಅಶೋಕ ಹಿಟ್ನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Comments are closed.