ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳರ ಬಂಧನ

Get real time updates directly on you device, subscribe now.

ಕೊಪ್ಪಳ‌: ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳರ ಬಂಧನ   5 ಟ್ರೇಲರ್ ಮತ್ತು 4 ಟ್ರ್ಯಾಕ್ಟರ್ ಇಂಜಿನ್‌ಗಳ ವಶಕ್ಕೆ ಪಡೆಯಲಾಗಿದೆ

ಇಲಾಖೆ ನೀಡಿದ ಪ್ರಕಟಣೆ ಹೀಗಿದೆ..‌

ದಿನಾಂಕ:-17.10.2023 ರಂದು ವಿದ್ಯಾಧಿದಾರರು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ಹಾಜರಾಗಿ ದಿನಾಂಕ:14.10.2023 ರಂದು ರಾತ್ರಿ ಸಮಯದಲ್ಲಿ ಕೊಪ್ಪಳ ಗ್ರಾಮೀಣ ಠಾಕ ವ್ಯಾಪ್ತಿಯ ದಡೆಗಲ್ ಸೀಮಾದ ಗದಗ-ಕೊಪ್ಪಳ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ರೂ.150000=00 ಬೆಲೆಬಾಳುವ ಒಂದು ಟ್ರ್ಯಾಕ್ಟರ್ ಟೇಲರನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತಾ ಕೊಟ್ಟ ದೂರಿನ ಮೇಲೆ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಮೇಲ್ಕಂಡ ಪ್ರಕರಣವನ್ನು ಮತ್ತು ಠಾಣೆಯಲ್ಲಿ ವರದಿಯಾಗಿರುವ ಇತರೆ ಸ್ವತ್ತಿನ ಪ್ರಕರಣಗಳನ್ನು ಛೇದಿಸಲು  ಶ್ರೀಮತಿ ಯಶೋಧಾ ಎಸ್‌. ವಂಟಗೂಡಿ ಐ.ಪಿ.ಎಸ್ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ,  ಶರಣಬಸಪ್ಪ ಸುಬೇದಾರ್ ಡಿ.ಎಸ್.ಪಿ ಕೊಪ್ಪಳ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ  ಮಹಾಂತೇಶ ಸಜ್ಜನ್‌ ವೃತ್ತ ನಿರೀಕ್ಷಕರು ಕೊಪ್ಪಳ ಗ್ರಾಮೀಣ ವೃತ್ತ ರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿದ್ದು, ತಂಡದಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯವರು ಕ್ಷೀಪ್ತ ಕಾರ್ಯಾಚರಣೆ ಕೈಗೊಂಡು ವೈಜ್ಞಾನಿಕ ವಿಧಾನಗಳು ಮತ್ತು ಸಾರ್ವಜನಿಕರ ಮಾಹಿತಿಯಿಂದ ಆರೋಪಿತರಾದ 1] ಕಿರಣ ಆ ಕಿರಣರಡ್ಡಿ ತಂದೆ ಕೊಟ್ರಪ್ಪ, ಕುರ್ತಕೊಟಿ, ಸಾ, ಹಿರೇವಡ್ಡಟ್ಟ ತಾ.ಮುಂಡರಗಿ, 2] ರಮೇಶ ಬೂದಿಹಾಳ ತಂದೆ ಭೀಮಪ್ಪ ಉ:ಹಿರೇವಡ್ಡಟ್ಟಿ ತಾ.ಮುಂಡರಗಿ ಎಂಬುವವರನ್ನು ದಸ್ತಗಿರಿ ವಿಚಾರಣೆಗೊಳಪಡಿಸಿದಾಗ ಸದಿ ಆರೋಪಿತರು ದದೇಗಲ್ ಸೀಮಾದ ರಸ್ತೆಯ ಪಕ್ಕದಲ್ಲಿ ಇದ್ದ ಒಂದು ಟ್ರ್ಯಾಕ್ಟರನ ಟ್ರೇಲರ  150000=00ಗಳನ್ನು ಒಳಗೊಂಡಂತೆ ಗದಗ, ಮಂಡ್ಯ, ಡಾವಣಗೇರಿ ಜಿಲ್ಲೆಗಳಲ್ಲಿ ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವಂತಹ ಒಟ್ಟು 5 ಟ್ರ್ಯಾಕ್ಟರನ ಟ್ರೇಲರಗಳು ಮತ್ತು 4 ಟ್ರ್ಯಾಕ್ಟರ್, ಇಂಜಿನ್ ಗಳು ಎಲ್ಲಾ ಸೇರಿ ಅಂದಾಜು 24.10,000-00 ಗಳಷ್ಟು ಬೆಲೆಬಾಳುವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.

ಪ್ರಕರಣ ಭೇದಿಸಿದ ತಂಡದಲ್ಲಿ  ಆಶೋಕ ಬೇವೂರು ಪಿ.ಎಸ್‌.ಐ (ಕಾಸು),  ಹೀರಪ್ಪ ನಾಯ್ಕ ಪಿ.ಎಸ್.ಐ (ತನಿಖೆ) ಮತ್ತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ  ನಿಂಗಪ್ಪ,  ಲಕ್ಕಪ್ಪ,  ಮಹೇಶ, ಸಜ್ಜನ,  ಮಾರುತಿ,  ಉಮೇಶ,  ಅಂದಿಗಾಲಪ್ಪ,  ಗಂಗಾಧರ, ಚಂದಾಲಿಂಗ,  ಚಂದ್ರಶೇಖರ್,  ಮಹಿಬೂಬ್‌, ಮರಿಯಪ್ಪ, ಸಿ.ಡಿ.ಆರ್ ವಿಭಾಗದ ಪ್ರಸಾದ್‌, ಕೊಟೇಶ ಮತ್ತು ಕೊಪ್ಪಳ, ಗ್ರಾಮೀಣ ಪೊಲೀಸ್ ಠಾಣೆಯ ಇತರೆ ಅಧಿಕಾರಿಗಳು ಸಿಬ್ಬಂದಿಯವರು ಶ್ರಮಿಸಿದ್ದು, ಒಟ್ಟು 6 ಪಕರಣಗಳನ್ನು ಪತ್ತೆ ಮಾಡಿದ್ದು  ಎಸ್.ಪಿ ಕೊಪ್ಪಳರವರು ಪ್ರಕರಣವನ್ನು ಬೇದಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಶ್ಲಾಘನೆ ಮಾಡಿ, ಬಹುಮಾನ ಘೋಷಣೆ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: